ಮನೆ ರಾಜ್ಯ ಮೈಸೂರು: ರೌಡಿ ಶೀಟರ್’​ಗಳ ಮನೆ ಮೇಲೆ ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ದಾಳಿ

ಮೈಸೂರು: ರೌಡಿ ಶೀಟರ್’​ಗಳ ಮನೆ ಮೇಲೆ ನಗರ ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ದಾಳಿ

0

ಮೈಸೂರು(Mysuru): ನಗರದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಇಂದು ಬೆಳ್ಳಂ ಬೆಳಗ್ಗೆ ನಗರ ಪೊಲೀಸ್ ಕಮಿಷನರ್ ಬಿ.ರಮೇಶ್ ನೇತೃತ್ವದಲ್ಲಿ 37 ಜನ ರೌಡಿ ಶೀಟರ್’​ಗಳ ಮನೆ ಮೇಲೆ ದಾಳಿ ಮಾಡಲಾಗಿದೆ.

ರೌಡಿಗಳನ್ನು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ದಾಳಿ ವೇಳೆ ರೌಡಿ ಶೀಟರ್ ಸಲೀಂ ಎಂಬುವವರ ಮನೆಯಲ್ಲಿ ಮೂರು ಮಚ್ಚುಗಳು ಹಾಗೂ ಮತ್ತೊಬ್ಬನ ಮನೆಯಲ್ಲಿ ಒಂದು ಚಾಕು ದೊರೆತಿದೆ.

ಕೆಲವು ರೌಡಿ ಶೀಟರ್​’ಗಳು ಮರ್ಡರ್ ಮತ್ತು ಕೊಲೆ ಪ್ರಯತ್ನ ಮಾಡಿದ ಕೇಸ್​ಗಳಲ್ಲಿದ್ದಾರೆ ಎಂಬ ಮಾಹಿತಿ ಆಧರಿಸಿ ದಾಳಿ ಮಾಡಲಾಗಿದೆ.

ವಿಚಾರಣೆ ವೇಳೆ ಕೆಲವರು ರೌಡಿ ಶೀಟರ್​’ಗಳು ಗ್ಯಾಂಗ್ ಕಟ್ಟಿಕೊಂಡಿರುವುದು ಬೆಳಕಿಗೆ ಬಂದಿದೆ.

ಮೈಸೂರು ನಗರದಲ್ಲಿ 900ಕ್ಕೂ ಹೆಚ್ಚೂ ರೌಡಿ ಶೀಟರ್’​ಗಳಿದ್ದು, ಅದರಲ್ಲಿ ವಯಸ್ಸಾದವರು, ಹಳೆ ರೌಡಿಗಳು, ರೌಡಿಸಂ ಬಿಟ್ಟಿರುವವರು ಮತ್ತು ಕೆಲವರು ಸತ್ತು ಹೋಗಿದ್ದಾರೆ. ಸದ್ಯ 37 ಜನ ರೌಡಿ ಶೀಟರ್​ಗಳು ಮಾತ್ರ ಆ್ಯಕ್ಟಿವ್ ಆಗಿದ್ದಾರೆ. ಇವರುಗಳನ್ನು ಇಂದು ಹೆಬ್ಬಾಳ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿದೆ.

ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ತಿಳಿಸಿದ್ದಾರೆ.