ವಿಶೇಷವಾಗಿ ಐದು ಧಾನ್ಯಗಳಿಂದ ತಯಾರಿಸಲಾಗು ದಾಲ್ ಪಾಕವಿಧಾನಕ್ಕೆ ಪಂಚಮೇಲಾ ಪಾಕವಿಧಾನ ಎಂದು ಕರೆಯುವರು. ಇದು ಅದ್ಭುತ ರುಚಿ ಹಾಗೂ ಆರೋಗ್ಯಕರ ಗುಣಗಳನ್ನು ಹೊಂದಿರುತ್ತದೆ. ರಾಜಸ್ಥಾನದ ವಿಶೇಷ ಕಾಪವಿಧಾನಗಳಲ್ಲಿ ಒಂದು.ಇದನ್ನು ದೇಶದಾದ್ಯಂತ ವ್ಯಾಪಕವಾಗಿ ತಯಾರಿಸುವರು. ಐದು ಪ್ರಮುಖ ಧಾನ್ಯಗಳ ಮಿಶ್ರಣ ಹೊಂದಿರುವುದರಿಂದ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಅನ್ನ ಮತ್ತು ಚಪಾತಿಯ ಸಂಯೋಸನೆಯೊಂದಿಗೆ ಇದನ್ನು ಸವಿಯಬಹುದು.ಅತಿಥಿಗಳು ಹಾಗೂ ಸ್ನೇಹಿತರು ಆಗಮಿಸಿದಾಗ ವಿಶೇಷ ಅಡುಗೆಯಾಗಿ ಬಹುಬೇಗ ತಯಾರಿಸಬಹುದು. ನೀವು ಈ ಪಾಕವಿಧಾನವನ್ನು ಮಾಡಲು ಬಯಸುವುದಾದರೆ ಮುಂದಿನ ವಿವರಣೆಯಲ್ಲಿ ಪರಿಶೀಲಿಸಿ.
(ಬಡಿಸುವ ಪ್ರಮಾಣ: 2)
ಪ್ರಮುಖ ಸಾಮಗ್ರಿ
• 1/4 ಕಪ್ ಅಗತ್ಯ ತಕ್ಕಷ್ಟು ಹೆಸರುಬೇಳೆ
• 1/4 ಕಪ್ ಅಗತ್ಯ ತಕ್ಕಷ್ಟು ಕಡಲೆ ಬೇಳೆ
ಮುಖ್ಯ ಅಡುಗೆಗೆ
• 1/4 ಕಪ್ ಅಗತ್ಯ ತಕ್ಕಷ್ಟು ಮಸೂರ್ ದಾಲ್
• 2 – ಕತ್ತರಿಸಿದ ಚೆರ್ರಿ ಟೊಮೆಟೊ
• 1 ಕಪ್ ಕತ್ತರಿಸಿದ ಈರುಳ್ಳಿ
• 1 ಚಮಚ ಅಗತ್ಯ ತಕ್ಕಷ್ಟು ತುಪ್ಪ
• 1 ಚಮಚ ಅಗತ್ಯ ತಕ್ಕಷ್ಟು ಜೀರಿಗೆ
• ಅಗತ್ಯ ತಕ್ಕಷ್ಟು ಅಗತ್ಯ ತಕ್ಕಷ್ಟು ಇಂಗು
• ಅಗತ್ಯ ತಕ್ಕಷ್ಟು ಅಗತ್ಯ ತಕ್ಕಷ್ಟು ಅರಿಶಿಣ
• 1/2 ಚಮಚ ಕತ್ತರಿಸಿದ ಕೆಂಪು ಮೆಣಸು
• 1 ಚಮಚ ಅಗತ್ಯ ತಕ್ಕಷ್ಟು ಗರಂ ಮಸಾಲ ಪುಡಿ
• 1 ಚಮಚ ಅಗತ್ಯ ತಕ್ಕಷ್ಟು ನಿಂಬೆ ಜ್ಯೂಸ್
• 2 – ಕತ್ತರಿಸಿದ ಹಸಿಮೆಣಸಿನಕಾಯಿ
• 2 – ಅಗತ್ಯ ತಕ್ಕಷ್ಟು ಬೆಳ್ಳುಳ್ಳಿ
• ಅಗತ್ಯ ತಕ್ಕಷ್ಟು ಅಗತ್ಯ ತಕ್ಕಷ್ಟು ನೀರು
• ಅಗತ್ಯಕ್ಕೆ ತಕ್ಕಷ್ಟು ಉಪ್ಪು
Step 1:
– ಒಂದು ಪಾತ್ರೆಯಲ್ಲಿ ಐದು ಬಗೆಯ ಬೇಳೆಯನ್ನು ಸೇರಿಸಿ.- ಬೇಳೆಗಳನ್ನು 2-3 ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.- ಕುಕ್ಕರ್ ಪಾತ್ರೆಗೆ ಬೇಳೆ ಮತ್ತು ನೀರನ್ನು ಸೇರಿಸಿ ಕುದಿಯಲು ಇಡಿ.- ಕುದಿ ಬಂದ ತಕ್ಷಣ ಸ್ವಲ್ಪ ಉಪ್ಪು ಮತ್ತು ಚಿಟಕೆ ಅರಿಶಿನ ಸೇರಿಸಿ, ಮುಚ್ಚಳವನ್ನು ಮುಚ್ಚಿ.- ಬೇಳೆಯನ್ನು 5-6 ಸೀಟಿ ಕೂಗಿಸಿ ಬೇಯಿಸಿಕೊಳ್ಳಬೇಕು.
Step 2:
– ಒಂದು ದಪ್ಪ ತಳದ ಬಾಣಲೆಯಲ್ಲಿ ತುಪ್ಪ ಸೇರಿಸಿ, ಬಿಸಿ ಮಾಡಿ.- ಬಿಸಿಯಾದ ತುಪ್ಪಕ್ಕೆ ಜೀರಿಗೆ, ಬೆಳ್ಳುಳ್ಳಿ, ಇಂಗು, ಹಸಿ ಮೆಣಸಿನ ಕಾಯಿ, ಈರುಳ್ಳಿಯನ್ನು ಸೇರಿಸಿ, ಚೆನ್ನಾಗಿ ಹುರಿದುಕೊಳ್ಳಬೇಕು.
Step 3:
– ಎಲ್ಲಾ ಸಾಮಾಗ್ರಿಗಳು ಚೆನ್ನಾಗಿ ಹುರಿದು, ಈರುಳ್ಳಿ ಹೊಂಬಣ್ಣಕ್ಕೆ ಬಂದ ಬಳಿಕ ಟೊಮ್ಯಾಟೋ ಸೇರಿಸಿ.
Step 4:
– ಮಿಶ್ರಣಕ್ಕೆ ಮೆಣಸಿನ ಪುಡಿ ಸೇರಿಸಿ, ಮಿಶ್ರಗೊಳಿಸಿ.- ಬಳಿಕ ಬೇಯಿಸಿಕೊಂಡ ಬೇಳೆಯನ್ನು ಸೇರಿಸಿ, 3-4 ನಿಮಿಷಗಳ ಕಾಲ ಕುದಿಸಿ.
Step 5:
ಮಿಶ್ರಣಕ್ಕೆ ಗರಂ ಮಸಾಲ, ನಿಂಬೆ ರಸ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ, ಒಂದು ನಿಮಿಷಗಳ ಕಾಲ ಬೇಯಿಸಿ.
Step 6:
– ಸಿದ್ಧವಾದ ದಾಲ್ ಅನ್ನು ಬಿಸಿ ಬಿಸಿಯಾದ ಅನ್ನ ಅಥವಾ ರೊಟ್ಟಿಯೊಂದಿಗೆ ಸವಿಯಲು ನೀಡಿ.- ಬಡಿಸುವಾಗ 1-2 ಟೀ ಚಮಚ ತುಪ್ಪವನ್ನು ಸೇರಿಸಿ, ಬಡಿಸಬಹುದು.