ಮನೆ ತಂತ್ರಜ್ಞಾನ ನೂತನ ಕಂಪ್ಯೂಟರ್ ಮಾನಿಟರ್ ಪರಿಚಯಿಸಿದ ಒನ್‌’ಪ್ಲಸ್

ನೂತನ ಕಂಪ್ಯೂಟರ್ ಮಾನಿಟರ್ ಪರಿಚಯಿಸಿದ ಒನ್‌’ಪ್ಲಸ್

0

ಬೆಂಗಳೂರು(Bengaluru): ದೇಶದ ಗ್ಯಾಜೆಟ್ ಮಾರುಕಟ್ಟೆಗೆ ಒನ್‌’ಪ್ಲಸ್ ನೂತನ ಕಂಪ್ಯೂಟರ್ ಮಾನಿಟರ್ ಪರಿಚಯಿಸಿದೆ.

ಒನ್‌’ಪ್ಲಸ್ ಎಕ್ಸ್ ಮತ್ತು ಇ ಸರಣಿಯಲ್ಲಿ ನೂತನ ಮಾನಿಟರ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಒನ್‌’ಪ್ಲಸ್ X27 ಎನ್ನುವುದು 27 ಇಂಚಿನ ಗೇಮಿಂಗ್ ಮಾನಿಟರ್ ಆಗಿದೆ. ಮತ್ತೊಂದು ಇ ಸರಣಿಯಲ್ಲಿ ಹೊಸದಾಗಿ E24 ಮಾದರಿ ಬಿಡುಗಡೆಯಾಗಿದೆ.

ಒನ್‌’ಪ್ಲಸ್ X27 ಮಾನಿಟರ್‌ ದರ ದೇಶದಲ್ಲಿ ₹27,999 ಇದ್ದು, ಡಿ. 15ರಿಂದ ಒನ್‌’ಪ್ಲಸ್ ಆನ್‌’ಲೈನ್ ಸ್ಟೋರ್ ಮೂಲಕ ಲಭ್ಯವಾಗಲಿದೆ. ಅಲ್ಲದೆ, ಆರಂಭಿಕ ಕೊಡುಗೆಯಾಗಿ ಐಸಿಐಸಿಐ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಗೆ ₹1,000 ಡಿಸ್ಕೌಂಟ್ ಕೂಡ ಇರಲಿದೆ.

ಒನ್‌’ಪ್ಲಸ್ E24 ಮಾನಿಟರ್ ಬೆಲೆ ಮತ್ತು ಲಭ್ಯತೆಯನ್ನು ಕಂಪನಿ ಬಹಿರಂಗಪಡಿಸಿಲ್ಲ.

ಬಳಕೆದಾರರ ವಿವಿಧ ಅವಶ್ಯಕತೆಗಳಿಗೆ ಅನುಗುಣವಾಗಿ ನೂತನ ಮಾನಿಟರ್ ಸಿದ್ಧಪಡಿಸಲಾಗಿದೆ ಎಂದು ಕಂಪನಿ ಹೇಳಿದೆ.