ಪಾಲ್ಗಡಲಿನಿಂದ ಉದಿಸಿ ಹರಿಯ ವರಿಸಿ |
ಕರವೀರ ಪುರದಲ್ಲಿ ಬಂದು ನೆಲೆಸಿ |
ಗತಿ ನೀನೇ ಎಂದವರ ಕೈ ಬಿಡದೆ ಹರಸಿ |
ಕಾಪಾಡುವ ತಾಯೆ ಬಾರೆ ಕನಿಕರಿಸಿ ||
ಧನಲಕ್ಷ್ಮೀ ದಯೆ ತೋರಿ ಬಾಮ್ಮ ಅಮ್ಮಾ |
ಸೌಭಾಗ್ಯ ಲಕ್ಷ್ಮಿ ನೀ ಬಾರಮ್ಮ |
ಕಂಗಳಿಗೆ ಕಾಣಿಸದೆ ಎಲ್ಲಿ ಮರೆಯಾಗಿರುವೆ |
ಸಿರಿವಂತರ ಸೆರೆಯ ತೊರೆದು ಬಾರಮ್ಮ ||
ಸನ್ನಿಧಿಗೆ ಬೇಗ ನೀ ದಾರಿ ತೋರಮ್ಮ |
ದಿವ್ಯ ದರುಶನ ನೀಡೆ ಒಲಿದು ಬಾರಮ್ಮ |
ಬಾಗಿಲಿಗೆ ಬಂದಿರುವ ಭಕುತರ ಬೇಡಿಕೆಯ ತಡೆದರದಿ ಪೂರೈಸಿ ಬೇಗ ಸಲಹಮ್ಮ ||ಧನಲಕ್ಷ್ಮೀ||
ಮಲ್ಲಿಗೆಯ ಮಂಟಪದಿ ನಿನ್ನ ಪೂಜಿಸುವೆ ಸುರಲೋಕದ ಪಾರಿಜಾತ ಅರ್ಪಿಸುವೆ |
ಪನ್ನೀರ ಕೊಳದಿಂದ ಹೊನ್ನ ತಾವರೆ ತಂದು |
ಸಿರಿ ಪಾದ ಕಮಲಗಳಿಂದೆ ಪೂಜಿಸುವೆ ||ಧನಲಕ್ಷ್ಮೀ||