ಮನೆ ಅಪರಾಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಲ್ಲದ ಭಾರತೀಯ ಕಾನೂನು

ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಲ್ಲದ ಭಾರತೀಯ ಕಾನೂನು

ಸಾರಿಗೆ ಅಧಿಕಾರಿಗಳಿಗೆ ಹೆದರಿಸಿದ್ದ ದಂಪತಿಗಳ ಬಂಧನ ಪ್ರಕರಣ

0

ವರ್ಷದ ಹಿಂದಿನ ದೂರಿಗೆ ತಲೆ ಕೆಡಿಸಿಕೊಳ್ಳದ ಪೊಲೀಸರು, ಹೆದರಿಸಿ, ಬೆದರಿಸಿ, ಅವಾಚ್ಯ ಶಬ್ದಗಳಿಂದ ಕೂಡಿದ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಆರೋಪಿಗಳ ಬಂಧನದ ನಾಟಕಕ್ಕೆ ಸುಖಾಂತ್ಯ.

ಮೈಸೂರಿನಲ್ಲಿ ಸಾರಿಗೆ ಅಧಿಕಾರಿಗಳಿಗೆ ಮಚ್ಚು ತೋರಿಸಿ ಹೆದರಿಸಿದ್ದ ದಂಪತಿಗಳ ಬಂಧನವಾಗಿದೆ ಎಂದು ಪೊಲೀಸರ ಘರ್ಜನೆ ನಾಚಿಕೆ ತರಿಸುತ್ತದೆ. ಇಷ್ಟು ವರ್ಷ ಆರೋಪಿಗಳ ಬಗ್ಗೆ ತಿಳಿದಿದ್ದರೂ ಜಾಣ ಕುರುಡು ಪ್ರದರ್ಶಿಸುತ್ತಿದ್ದ ಉದಯಗಿರಿ ಠಾಣಾ ಪೊಲೀಸರು ಕೊನೆಗೂ ಆರೋಪಿಗಳನ್ನು ಬಂಧಿಸಿ ಶೌರ್ಯ ಮೆರೆದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸಂಕೀರ್ಣವನ್ನು ಶಫೀಕ್ ಅಹ್ಮದ್ ಹಲವು ವರ್ಷಗಳ ಅವಧಿಗೆ ಬಾಡಿಗೆಗೆ ಪಡೆದಿದ್ದು, ಕೋಟ್ಯಾಂತರ ರೂಪಾಯಿಗಳ ಬಾಕಿಯ ಬಾಡಿಗೆ ಪಾವತಿ ಮಾಡಿರಲಿಲ್ಲ. ಆದುದರಿಂದ ಕಾನೂನಿನನ್ವಯ ಕಟ್ಟಡ ತೆರವುಗೊಳಿಸಲು ಡಿ.10ರ ಶನಿವಾರ ವಿಭಾಗೀಯ ಸಾರಿಗೆ ಅಧಿಕಾರಿ ಮರೀಗೌಡ ಅವರು ಸಿಬ್ಬಂದಿಯೊಂದಿಗೆ ತೆರಳಿದ್ದರು.

ಈ ವೇಳೆ ಬಾಡಿಗೆದಾರ ಶಫೀಕ್ ಅಹ್ಮದ್, ಅವರ ಪತ್ನಿ ಹಾಗೂ ಅವರ ಕುಟುಂಬದ ಮೂವರು ಮಹಿಳೆಯರು ಮಚ್ಚು ತೋರಿಸಿ, ಸಾರಿಗೆ ಅಧಿಕಾರಿಗಳನ್ನು ಕತ್ತರಿಸಿ ಬಿಡುವುದಾಗಿ ಕೊಲೆ ಬೆದರಿಕೆ ಹಾಕಿ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು, ಮೂಕ ಪ್ರೇಕ್ಷಕರಂತೆ ಪೊಲೀಸರು ನಿಂತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಆದರೆ ವಾಣಿಜ್ಯ ಸಂಕೀರ್ಣವನ್ನು ಶಫೀಕ್ ಅಹ್ಮದ್ ಅಕ್ರಮವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ವರ್ಷಗಳ ಹಿಂದೆಯೇ ಉದಯಗಿರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು, ಆರೋಪಿ ಮಹಿಳೆ ಮತ್ತು ಕುಟುಂಬದವರು ಅಧಿಕಾರಿಗಳಿಗೆ ಮಚ್ಚು ತೋರಿಸಿ ಬೆದರಿಕೆ ಹಾಕಿದ ವಿಡಿಯೋ ವೈರಲ್ ಆದ ನಂತರ ಬಂಧಿಸಿದ ನಾಟಕವಾಡುತ್ತಿದ್ದಾರೆ.

ಓರ್ವ ಮುಸ್ಲಿಂ ಮಹಿಳೆ ತನ್ನ ಕುಟುಂಬದವರೊಂದಿಗೆ ಕೈಯಲ್ಲಿ ಮಚ್ಚು ಹಿಡಿದುಕೊಂಡು, ಅದೂ ಹಲವಾರು ಪೊಲೀಸ್ ಅಧಿಕಾರಿಗಳ ಮುಂದೆಯೇ ನಾವು ಮುಸ್ಲಿಮರಿಗೆ ಹುಟ್ಟಿದವರು, ನಾವು ಮುಸ್ಲಿಂರು ಅಂತ ತೊಂದರೆ ಮಾಡುತ್ತಿದ್ದೀರಾ ಎಂದು ಕೋಮು ಗಲಭೆಯನ್ನು ಸೃಷ್ಟಿಸುವ ಪ್ರಯತ್ನ ಮಾಡಿ, ಅಧಿಕಾರಿಗಳನ್ನು ಕೊಚ್ಚಿ ಹಾಕಿ ಹೋಗ್ತೀವಿ ಅಂತ ಬೆದರಿಕೆ ಹಾಕುತ್ತಿರಬೇಕಾದರೆ ಪೊಲೀಸರು ಸಮಾಧಾನ ಮಾಡುತ್ತಾರೆ. ಇದು ಪೊಲೀಸ್ ಅಧಿಕಾರಿಗಳು ತಲೆ ತಗ್ಗಿಸಬೇಕಾದ ವಿಷಯ.

ಈ ಘಟನೆಯು ಪೊಲೀಸರು ಮುಸ್ಲಿಮರಿಗೆ ಹೆದರುತ್ತಾರೆಯೇ? ಎಂಬ ಪ್ರಶ್ನೆಯನ್ನು ಹುಟ್ಟಿಹಾಕಿದೆ. ಕಾನೂನುಗಳು ಎಲ್ಲರಿಗೂ ಒಂದೇ ಎಂದು ಹೇಳಲಾಗುತ್ತದೆ ಅಂತಾದರೆ ಮುಸ್ಲಿಮರ ಮೇಲೆ ಪೊಲೀಸರಿಗೆ ಭಯವೇಕೆ ? ನಮ್ಮ ದೇಶದ ಕಾನೂನುಗಳು ಮುಸ್ಲಿಮರಿಗೆ ಅನ್ವಯಿಸುದಿಲ್ಲವೇ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಪೊಲೀಸರು ಮುಸ್ಲಿಮರ ಮೇಲೆ ಕಾನೂನು ಕ್ರಮ ಯಾಕೆ ಕೈಗೊಳ್ಳುವುದಿಲ್ಲ? ಕಾನೂನು ಕ್ರಮ ಕೈಗೊಂಡರು ಅದಕ್ಕೆ ತಡಮಾಡುವುದು ಏಕೆ? ಮುಸ್ಲಿಮರಿಗೆ ಕಾನೂನು ಆಶ್ರಯ ನೀಡುತ್ತದೆಯೇ? ಎಂಬುದಕ್ಕೆ ಪೊಲೀಸರೇ ಉತ್ತರಿಸಬೇಕು.

ಊರೆಲ್ಲ ಟ್ರಾಫಿಕ್ ಪೊಲೀಸರು ಬಸುರಿ – ಬಾಣಂತಿ, ವಯಸ್ಸಾದ ರೋಗಿಗಳು ಎಂದು ನೋಡದೆ, ದಯೆಯಿಲ್ಲದೇ ಕಾನೂನು ಪಾಲಿಸುತ್ತಾರೆ. ಆದರೆ ಉದಯಗಿರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಟ್ರಾಫಿಕ್ ಕಾನೂನು ಜಾರಿಯಿಲ್ಲವೇ. ಇದುವರೆವಿಗೂ ಎಷ್ಟು ಟ್ರಾಫಿಕ್ ನಿಯಮ ಉಲ್ಲಂಘನೆಯ ಕೇಸು ದಾಖಲಾಗಿದೆ.

ಪೊಲೀಸರ ಕಾನೂನು ಸದರಿ ಸ್ಥಳಕ್ಕೆ ಅನ್ವಯಿಸುವುದಿಲ್ಲವೇ,  ಅಥವಾ ಸ್ಥಳೀಯ ರಾಜಕಾರಣಿಗಳ ಕೃಪಾ ಕಟಾಕ್ಷದಿಂದಾಗಿ ಮುಸ್ಲಿಂ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದಾರಾ ಎಂಬುದು ಈಗಿರುವ ಪ್ರಶ್ನೆ.

ಇದೇ ಜಾಗದಲ್ಲಿ ಓರ್ವ ಹಿಂದು ಧರ್ಮದವರೇನಾದರು ಕತ್ತಿ ಹಿಡಿದುಕೊಂಡು ರಸ್ತೆಯಲ್ಲಿ ಇದ್ದಿದ್ದರೆ, ಅಬ್ಬಬ್ಬಾ ಪೊಲೀಸರು ನಾ ಮುಂದು, ತಾ ಮುಂದು ಎಂದು ತಮ್ಮ ಉತ್ತರ ಕುಮಾರನ ಪೌರುಷ ತೋರಿಸುತ್ತಿದ್ದರು.

ಮುಸ್ಲಿಂ ಮಹಿಳೆ ಮಚ್ಚು ತೋರಿಸಿ ಕತ್ತರಿಸಿ ಬಿಡುವುದಾಗಿ ಕೊಲೆ ಬೆದರಿಕೆ ಹಾಕಿದರು ಸಹ ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ಬಂಧಿಸುವುದನ್ನು ಬಿಟ್ಟು ಆಕೆಗೆ ಸಮಾಧಾನ ಹೇಳುವುದು ಪೊಲೀಸರ ಮೇಲೆ ಹಲವಾರು ರೀತಿಯಲ್ಲಿ ಅನುಮಾನ ಮೂಡಿಸುತ್ತದೆ.

ಘಟನೆ ಬಗ್ಗೆ ಯಾರೂ ದೂರು ನೀಡಿಲ್ಲವಾದ್ದರಿಂದ ಬಂಧಿಸಿಲ್ಲ ಎಂದು ಪೊಲೀಸರು ಕಾರಣ ನೀಡುತ್ತಾರೆ. ಆದರೆ  ಓರ್ವ ವ್ಯಕ್ತಿ ಅಥವಾ ಮಹಿಳೆ ಸಾರ್ವಜನಿಕವಾಗಿ ಮಚ್ಚು ತೋರಿಸಿ, ಕತ್ತರಿಸುತ್ತೇನೆ ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದಾಗ, ಪೊಲೀಸರು ತಾವೇ ಸುಮೋಟೋ ಕೇಸ್ ದಾಖಲಿಸಿಕೊಳ್ಳಬಹುದಿತ್ತು.

ಆದರೆ ಸದರಿ ಘಟನೆಯಲ್ಲಿ ಪೊಲೀಸರು ಹಣದ ಒತ್ತಡಕ್ಕೋ, ರಾಜಕೀಯ ಒತ್ತಡಕ್ಕೋ ಇಲ್ಲವೇ ತಾವು ಪೊಲೀಸರು ಎಂದು ಮರೆತು, ಆರೋಪಿ ದಂಪತಿಗಳನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟು  ಬಿಡುತ್ತಾರೆ.

ನಂತರ ಸಾರ್ವಜನಿಕವಾಗಿ ಧರ್ಮ ಬೇದವಿಲ್ಲದೆ ಒತ್ತಡ ಹೆಚ್ಚಾದಾಗ ಅಮಯಕರಾದ ಅಳಿಯ ಹಾಗೂ ಗರ್ಭಿಣಿ ಮಗಳನ್ನು ಸೇರಿದಂತೆ ಸಂಬಂಧಿಕರನ್ನು ವಿಚಾರಣೆಯ ನೆಪದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದು ಹಿಂಸೆ ನೀಡಿದ್ದಾರೆ.

ಕೈಯಲ್ಲಿದ ಆರೋಪಿಯನ್ನು ಬಿಟ್ಟು, ಪೊಲೀಸರಿಗೆ ಶರಣಾಗಳು ಸಲಹೆ ನೀಡಿದ ಅಮಾಯಕರನ್ನು ಮತ್ತು ಅವರ ಕುಟುಂಬದವರನ್ನು ಬಂಧಿಸಲು ಶುರು ಮಾಡಿದ್ದು ಯಾವ ಪುರಷಾರ್ಥಕ್ಕೆ.

ತನ್ನ ಗರ್ಭಿಣಿ ಮಗಳ ನೋವನ್ನು ನೋಡಲಾಗದೆ ಶರಣಾಗಲು ಬಂದ ಆರೋಪಿಗಳನ್ನು  ವಿರಾಜಪೇಟೆಯಲ್ಲಿ ಹುಡುಕಿ ಬಂಧಿಸಿದ್ದೇವೆ ಎಂದು ಸಾಧನೆಗಾಗಿ ಪೊಲೀಸರು ಸುದ್ದಿಗೋಷ್ಟಿ ನಡೆಸಿರುವುದು ಪೊಲೀಸರಿಗೆ ಶೋಭೆ ತರುವಂತದ್ದಲ್ಲ.

ಆರೋಪಿ ಶಫೀಕ್ ಅಹ್ಮದ್ ವಿರುದ್ಧ ದೂರು ದಾಖಲಾದಾಗಲೇ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೇ ಪೊಲೀಸ್ ಇಲಾಖೆ ಹಾಗೂ  ಕೆಎಸ್’ಆರ್’ಟಿಸಿ ಇಲಾಖೆಗೆ ಅವಮಾನವಾಗುವಂಥ ಪರಿಸ್ಥಿತಿ ಬರುತ್ತಿರಲಿಲ್ಲ.

ಇನ್ನು ಮುಂದಾದರೂ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.  ಮಾತ್ರವಲ್ಲದೇ ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಪೊಲೀಸರು ಯಾವ ಒತ್ತಡಕ್ಕೂ ಮಣಿಯದೇ ಕಠಿಣ ಕ್ರಮವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.