ಕರ್ನಾಟಕ ಸರ್ಕಾರದಡಿಯ ಪರೀಕ್ಷಾ ಪ್ರಾಧಿಕಾರಗಳಾದ ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮಿಷನ್ ಮತ್ತು ಕರ್ನಾಟಕ ಎಕ್ಸಾಮಿನೇಷನ್ ಅಥಾರಿಟಿ, ಎರಡು ಸಹ 16 ವಿವಿಧ ಇಲಾಖೆ / ಸಂಸ್ಥೆ / ನಿಗಮಗಳ ಸರ್ಕಾರಿ ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿವೆ. ಯಾವ ಇಲಾಖೆಗಳು / ಸಂಸ್ಥೆಗಳು / ನಿಗಮಗಳಿಗೆ ಪರೀಕ್ಷೆ ವೇಳಾಪಟ್ಟಿ ಪ್ರಕಟ ಆಗಿರುವುದು ಎಂದು ಕೆಳಗಿನಂತೆ ನೀಡಲಾಗಿದೆ.
ಕೆಪಿಎಸ್’ಸಿ ಯಾವ್ಯಾವ ಇಲಾಖೆಯ ಹುದ್ದೆಗಳಿಗೆ ಪರೀಕ್ಷಾ ವೇಳಾಪಟ್ಟಿ (ತಾತ್ಕಾಲಿಕ) ಬಿಡುಗಡೆ ಮಾಡಿದೆ ಎಂದು ಈ ಕೆಳಗಿನಂತೆ ತಿಳಿಸಲಾಗಿದೆ.
ಪೌರಾಡಳಿತ ನಿರ್ದೇಶನಾಲಯ
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹುದ್ದೆಗಳು
ಆರೋಗ್ಯ ಇಲಾಖೆ ಹುದ್ದೆಗಳು
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯ ವಿವಿಧ ಹುದ್ದೆಗಳು
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹುದ್ದೆಗಳು
ಮುದ್ರಣ, ಲೇಖನ ಸಾಮಾಗ್ರಿ ಮತ್ತು ಪ್ರಕಟಣೆಗಳ ಇಲಾಖೆ ಹುದ್ದೆಗಳು
ಭಾಷಾಂತರ ನಿರ್ದೇಶನಾಲಯ ಹುದ್ದೆಗಳು
ಮುಖ್ಯ ವಿದ್ಯುತ್ ಪರಿವೀಕ್ಷಣಾಲಯ ಹುದ್ದೆಗಳು
ರೇಷ್ಮೆ ಇಲಾಖೆ ಹುದ್ದೆಗಳು
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಹುದ್ದೆಗಳು
ಮೀನುಗಾರಿಕೆ ಇಲಾಖೆ ಹುದ್ದೆಗಳು
ಕಾರ್ಮಿಕ ಇಲಾಖೆಯ ಹುದ್ದೆಗಳು
ಜಲಸಂಪನ್ಮೂಲ ಇಲಾಖೆ ಹುದ್ದೆಗಳು
ಕೆಇಎ ಯಾವ್ಯಾವ ಇಲಾಖೆ ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ಈ ಕೆಳಗಿನಂತೆ ತಿಳಿಯಬಹುದು.
– ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತ ಹುದ್ದೆಗಳು
– ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹುದ್ದೆಗಳು
– ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹುದ್ದೆಗಳು
ಈ ಮೇಲಿನ ಇಲಾಖೆಗಳ ಲೇಟೆಸ್ಟ್ ಪರೀಕ್ಷಾ ವೇಳಾಪಟ್ಟಿಗಳನ್ನು ಚೆಕ್ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ. ಅಥವಾ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿರಿ.
ಮೇಲಿನ ಎಲ್ಲಾ ಹುದ್ದೆಗಳಿಗೆ ಪರೀಕ್ಷೆ ವೇಳಾಪಟ್ಟಿಯೂ ತಾತ್ಕಾಲಿಕವಾಗಿದ್ದು, ಮುಂದೆ ಕರ್ನಾಟಕ ವಿಧಾನಸಭೆ ಚುನಾವಣಾ ಹಿನ್ನೆಲೆ ಹಾಗೂ ಇತರೆ ಆಡಳಿತಾತ್ಮಕ ಕಾರಣಗಳಿಂದಲೂ ಬದಲಾವಣೆ ಆಗುವ ಸಾಧ್ಯತೆಗಳು ಇವೆ. ಹಾಗೂ ಎರಡು ಪ್ರಾಧಿಕಾರಗಳು ಸಹ ಪರೀಕ್ಷೆ ದಿನಾಂಕಗಳನ್ನು ಬಿಡುಗಡೆ ಮಾಡಿರುವ ಕಾರಣ, ಒಂದೇ ದಿನ ನಿಗಧಿ ಆಗಿರುವ ಎರಡು ಪ್ರಾಧಿಕಾರಗಳ ಪರೀಕ್ಷೆ ದಿನಾಂಕಗಳು ಬದಲಾವಣೆ ಆಗುವ ಸಾಧ್ಯತೆ ಇದೆ. ಈ ಎಲ್ಲ ಗೊಂದಲಗಳಿಗೆ ಪ್ರಾಧಿಕಾರಗಳ ಅಂತಿಮ ವೇಳಾಪಟ್ಟಿಗಾಗಿ ಕಾಯಬೇಕಿದೆ.