ಮನೆ ಕ್ರೀಡೆ ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್ ಪಂದ್ಯ: ಇಂಗ್ಲೆಂಡ್ ಉತ್ತಮ ಆಟ

ಪಾಕಿಸ್ತಾನ ಎದುರಿನ ಮೂರನೇ ಟೆಸ್ಟ್ ಪಂದ್ಯ: ಇಂಗ್ಲೆಂಡ್ ಉತ್ತಮ ಆಟ

0

ಕರಾಚಿ: ಹ್ಯಾರಿ ಬ್ರೂಕ್ (111) ಶತಕ, ಬೆನ್ ಫೋಕ್ಸ್ (64) ಹಾಗೂ ಒಲಿ ಪೋಪ್‌ (51) ಗಳಿಸಿದ ಅರ್ಧಶತಕಗಳ ಬಲದಿಂದ ಇಂಗ್ಲೆಂಡ್ ತಂಡವು ಪಾಕಿಸ್ತಾನ ಎದುರಿನ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಲ್ಪ ಮುನ್ನಡೆ ಸಾಧಿಸಿತು.

ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಭಾನುವಾರ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 354 ರನ್‌ ಗಳಿಸಿ ಆಲೌಟ್‌ ಆಯಿತು. ಎರಡನೇ ಇನಿಂಗ್ಸ್ ಆರಂಭಿಸಿರುವ ಆತಿಥೇಯ ತಂಡ ವಿಕೆಟ್‌ ನಷ್ಟವಿಲ್ಲದೆ 21 ರನ್‌ ಗಳಿಸಿತ್ತು.ಪಾಕಿಸ್ತಾನ ಮೊದಲ ಇನಿಂಗ್ಸ್‌ನಲ್ಲಿ 304 ರನ್‌ ಗಳಿಸಿತ್ತು. ಸದ್ಯ ಇಂಗ್ಲೆಂಡ್‌ 29 ರನ್‌ಗಳ ಮುನ್ನಡೆಯಲ್ಲಿದೆ.ಮೂರನೇ ಶತಕ: ಮೂರನೇ ಪಂದ್ಯವಾಡುತ್ತಿರುವ 23 ವರ್ಷದ ಬ್ರೂಕ್‌ ಅವರು ಮೂರನೇ ಶತಕ ದಾಖಲಿಸಿದರು. 58 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಆಸರೆಯಾದರು. ಮಹತ್ವದ ಜೊತೆಯಾಟಗಳಲ್ಲಿ ಭಾಗಿಯಾದರು.

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಪಾಕಿಸ್ತಾನ: 79 ಓವರ್‌ಗಳಲ್ಲಿ 304. ಇಂಗ್ಲೆಂಡ್‌: 81.4 ಓವರ್‌ಗಳಲ್ಲಿ 354 (ಒಲಿ ಪೋಪ್‌ 51, ಹ್ಯಾರಿ ಬ್ರೂಕ್‌ 111, ಬೆನ್ ಫೋಕ್ಸ್ 64, ಮಾರ್ಕ್‌ ವುಡ್‌ 35; ಅಬ್ರಾರ್ ಅಹಮದ್‌ 150ಕ್ಕೆ 4, ನೂಮಾನ್ ಅಲಿ 126ಕ್ಕೆ 4).

ಎರಡನೇ ಇನಿಂಗ್ಸ್: ಪಾಕಿಸ್ತಾನ: 9 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 21 (ಅಬ್ದುಲ್ಲಾ ಶಫೀಕ್ ಬ್ಯಾಟಿಂಗ್‌ 14, ಶಾನ್ ಮಸೂದ್‌ ಬ್ಯಾಟಿಂಗ್‌ 3).