ಮನೆ ಸುದ್ದಿ ಜಾಲ ಗ್ರಾಹಕರು ವಂಚನೆಗೆ ತುತ್ತಾಗದಂತೆ ಎಚ್ಚರವಹಿಸಿ: ಮಹದೇವ್ ಸ್ವಾಮಿ ಸಲಹೆ

ಗ್ರಾಹಕರು ವಂಚನೆಗೆ ತುತ್ತಾಗದಂತೆ ಎಚ್ಚರವಹಿಸಿ: ಮಹದೇವ್ ಸ್ವಾಮಿ ಸಲಹೆ

0

ಮೈಸೂರು(Mysuru): ಗ್ರಾಹಕರು ತಾವು ಪಡೆಯುವ ಸೇವೆಯಿಂದ ಅನ್ಯಾಯವಾದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವುದು ಮತ್ತು ತಮ್ಮ ಕರ್ತವ್ಯಗಳನ್ನು ಚಾಚು ತಪ್ಪದೆ ಪಾಲಿಸುವುದರಿಂದ ಗ್ರಾಹಕರ ಮೇಲಿನ ದೌರ್ಜನ್ಯ ತಡೆಯಬಹುದಾಗಿದೆ ಎಂದು ಮೈಸೂರು ನಗರ ವಕೀಲರ ಸಂಘದ ಅಧ್ಯಕ್ಷರಾದ ಮಹದೇವ್ ಸ್ವಾಮಿ ಅಭಿಪ್ರಾಯಪಟ್ಟರು.

ವಿಶ್ವ ಗ್ರಾಹಕರ ದಿನಾಚರಣೆ ಅಂಗವಾಗಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಹಾಗೂ ತೂಕ ಮತ್ತು ಅಳತೆ ಇಲಾಖೆ ಮತ್ತು ಅರಿವು ಸಂಸ್ಥೆ ಸಹಯೋಗದೊಂದಿಗೆ ಗ್ರಾಹಕರಲ್ಲಿ ತೂಕ ಮತ್ತು ಅಳತೆಯ ಗ್ರಾಹಕರ ಜಾಗೃತಿ ಅಭಿಯಾನವನ್ನು ದೇವರಾಜ ಮಾರ್ಕೆಟ್ ಮುಂಭಾಗ  “ಗ್ರಾಹಕರೇ ಪದಾರ್ಥಗಳನ್ನು ಕೊಳ್ಳುವಾಗ ಮೋಸ ಹೋಗದಿರಿ” “ಕೊಳ್ಳುವ ಪದಾರ್ಥಗಳಲ್ಲಿ ತೂಕ ಮತ್ತು ಅಳತೆಗಳನ್ನು ಪರೀಕ್ಷಿಸಿಕೊಳ್ಳಿ” ತಕ್ಕಡಿಗೆ ಸರ್ಕಾರಿ ಮುದ್ರೆ ಆಗಿರುವ ಬಗೆ ಖಾತ್ರಿಪಡಿಸಿಕೊಳ್ಳಿ ಗ್ರಾಹಕರೇ

“ತೂಕದಲ್ಲಿ ಮೋಸ ಮಾಡಿದರೆ ಕಾನೂನಿನ ಪ್ರಕಾರ ಅಪರಾಧ” ಸೇರಿದಂತೆ ಇನ್ನಿತರ  ಗ್ರಾಹಕರಲ್ಲಿ ಜಾಗೃತಿಯುಳ್ಳ ಬಿತ್ತಿ ಪತ್ರ ಹಿಡಿದುಕೊಂಡು ಗ್ರಾಹಕರಿಗೆ ಜಾಗೃತಿ ಮೂಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ‘ಗ್ರಾಹಕರೇ ತಮ್ಮ ಹಕ್ಕುಗಳನ್ನು ತಿಳಿದುಕೊಳ್ಳಿ’ ಎಂಬ ಧೈಯ ವಾಕ್ಯದೊಂದಿಗೆ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆಯೋಜಿಸಿರುವುದು ಅರ್ಥಗರ್ಭಿತ  ಗ್ರಾಹಕರಿಗೆ ಸೇವೆ ಒದಗಿಸುವ ಮೂಲದಿಂದ ಯಾವ ಯಾವ ರೀತಿಯ ಅನ್ಯಾಯಗಳು ನಡೆಯುತ್ತವೆ ಎಂಬುದರ ಬಗ್ಗೆ ಗ್ರಾಹಕರ ಸಂರಕ್ಷಣಾ ಕಾಯ್ದೆಯಡಿ ಮಾಹಿತಿ ಪಡೆಯಬಹುದಾಗಿದೆ ಎಂದರು.

ನಂತರ ಮಾತನಾಡಿದ ಹಿರಿಯ ಸಮಾಜಸೇವಕ ಕೆ ರಘುರಾಮ್ ವಾಜಪಾಯಿ ಮಾತನಾಡಿ, ಗ್ರಾಹಕ ಎಂದಾಗ ಪ್ರತಿಯೊಬ್ಬ ಮನುಷ್ಯನು ಅವನು ಹುಟ್ಟಿನಿಂದಲೇ ಬಹುಶಃ ಗರ್ಭಸ್ಥ ಶಿಶುವಾದಾಗಿಂದಲೇ ಅವನ ಅಂತಿಮ ಯಾತ್ರೆವರೆಗೆ ಗ್ರಾಹಕನಾಗಿರುತ್ತಾನೆ.  ಜೊತೆಗೆ ಈ ಗ್ರಾಹಕ ಸ್ಥಾನಕ್ಕೆ ಯಾವುದೇ ತಾರತಮ್ಯ ವಿರೋಧವಿರುವುದಿಲ್ಲ.  ಕನಿಷ್ಠ ಕೂಲಿ ಕಾರ್ಮಿಕನಿಂದ ಹಿಡಿದು ರಾಷ್ಟ್ರಪತಿವರೆಗೂ ಆತನು ಗ್ರಾಹಕನಾಗಿರುತ್ತಾನೆ ಎಂದು ತಿಳಿಸಿದರು.

ಗ್ರಾಹಕರು ಜಾಗೃತರಾಗಿರಬೇಕು. ತೂಕ ಮತ್ತು ಅಳತೆಯಲ್ಲಿ ಮೋಸ, ಕಲಬೆರಕೆ ಪದಾರ್ಥಗಳ ಬಗ್ಗೆ ಎಚ್ಚರ, ಹಣ್ಣುಗಳಿಗೆ ಬಳಸುವ ವಿಷ ರಾಸಾಯನಿಕ ಪದಾರ್ಥಗಳ ಬಗ್ಗೆ ಜಾಗೃತರಾಗಿರಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕಾರ್ಯದರ್ಶಿ ಉಮೇಶ್, ನಲ್ಲಪಟ್ಟಣ ಸಂಚಾರಿಪೊಲೀಸ್ ಠಾಣೆಯ ಎಎಸ್’ಐ ಕೆ ಎಸ್ ನಾರಾಯಣ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಅಧ್ಯಕ್ಷರಾದ ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಹರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಪರಮೇಶ್ ಗೌಡ, ಶ್ರೀನಿವಾಸ್, ನೇಹಾ ನೈನಾ, ಸುಚಿಂದ್ರ, ಕಾರ್ಯದರ್ಶಿರವಿಶಂಕರ್, ಸಂದೀಪ್ ಹಾಗೂ ಇನ್ನಿತರರು ಹಾಜರಿದ್ದರು.