ಮನೆ ಉದ್ಯೋಗ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

0

ಬೆಂಗಳೂರು(Bengaluru): ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೇಡ್‌–1 ಪ್ರಾಂಶುಪಾಲರ 310 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅರ್ಜಿಗಳನ್ನು ಆಹ್ವಾನಿಸಿದೆ.

45 ಹುದ್ದೆಗಳು ಕಲ್ಯಾಣ ಕರ್ನಾಟಕ ವೃಂದಕ್ಕೆ ಮೀಸಲಾಗಿವೆ. 265 ಹುದ್ದೆಗಳು ರಾಜ್ಯದ ಉಳಿದ ಭಾಗಗಳ ವೃಂದಕ್ಕೆ ಲಭಿಸಲಿವೆ.

2023ರ ಜನವರಿ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನ. ಇ– ಅಂಚೆ ಕಚೇರಿಗಳ ಮೂಲಕ ಶುಲ್ಕ ಪಾವತಿಗೆ ಜ.17 ಕೊನೆಯ ದಿನ ಎಂದು ಪರೀಕ್ಷಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ಸಾಮಾನ್ಯ ವರ್ಗ, ಪ್ರವರ್ಗ 2–ಎ, 2–ಬಿ, 3–ಎ ಮತ್ತು 3–ಬಿ ಪ್ರವರ್ಗಗಳ ಅಭ್ಯರ್ಥಿ ಗಳಿಗೆ ₹ 5,000 ಅರ್ಜಿ ಶುಲ್ಕವಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ–1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ₹ 2,500 ಶುಲ್ಕವಿದೆ.

 ಹೆಚ್ಚಿನ ವಿವರಗಳನ್ನು ಕೆಇಎ ವೆಬ್‌’ಸೈಟ್‌ http://kea.kar.nic.inನಲ್ಲಿ ಪಡೆಯಬಹುದು ಎಂದು ಪ್ರಾಧಿಕಾರ ತಿಳಿಸಿದೆ.

ಬಹು ಆಯ್ಕೆಯ ಉತ್ತರಗಳುಳ್ಳ 100 ಪ್ರಶ್ನೆಗಳೊಂದಿಗೆ 100 ಅಂಕಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ. ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಕಾಲೇಜು ಶಿಕ್ಷಣ ಇಲಾಖೆ) (ಪ್ರಾಂಶುಪಾಲರ ಹುದ್ದೆಗಳ ನೇಮಕಾತಿ) (ಸ್ನಾತಕ ಶಿಕ್ಷಣ) (ವಿಶೇಷ) ನಿಯಮಗಳು–202ರ ನಿಯಮ 3ರಲ್ಲಿ ನಿಗದಿಪಡಿಸುವ ಅರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

2023ರ ಜನವರಿ 15 ಅರ್ಜಿ ಸಲ್ಲಿಕೆಗೆ ಕೊನೆಯ ದಿನವೆಬ್‌ಸೈಟ್‌: http://kea.kar.nic.in