ಮನೆ ಸುದ್ದಿ ಜಾಲ ಕಾಮೆಡ್‌–ಕೆ ವತಿಯಿಂದ ಇನ್ನೋವೇಶನ್ ಹಬ್’ಉದ್ಘಾಟನೆ

ಕಾಮೆಡ್‌–ಕೆ ವತಿಯಿಂದ ಇನ್ನೋವೇಶನ್ ಹಬ್’ಉದ್ಘಾಟನೆ

0

ಮೈಸೂರು(Mysuru): ನಗರದ ಊಟಿ ರಸ್ತೆಯಲ್ಲಿ ಕಾಮೆಡ್‌–ಕೆ (ಕರ್ನಾಟಕದ ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ದಂತ ಕಾಲೇಜುಗಳ ಒಕ್ಕೂಟ)ಯಿಂದ ಆರಂಭಿಸಿರುವ ‘ಇನ್ನೋವೇಶನ್ ಹಬ್’ (ನಾವೀನ್ಯತೆ ಕೇಂದ್ರ) ಅನ್ನು ಬುಧವಾರ ಕಾಮೆಡ್‌–ಕೆ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಇಂದಿನ ಉದ್ಯೋಗಗಳು ಮತ್ತು ಕಾರ್ಯ ಕ್ಷೇತ್ರಗಳು ಹೆಚ್ಚು ತಂತ್ರಜ್ಞಾನ-ತೀವ್ರತೆಯನ್ನು ಪಡೆದುಕೊಳ್ಳುತ್ತಿವೆ. ಡೇಟಾ ಸೈನ್ಸಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಆಗ್ಮೆಂಟೆಡ್ ರಿಯಾಲಿಟಿ ಮತ್ತು ಮೆಟಾ ಪ್ರಸ್ತುತ ಬಜ್‌’ವರ್ಡ್‌’ಗಳಾಗಿವೆ. ಇಂದು, ಹೆಚ್ಚಿನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯಮಕ್ಕೆ ಸಿದ್ಧವಾಗಿಲ್ಲ. ಆದ್ದರಿಂದ, ಕಾಲೇಜುಗಳು ಒದಗಿಸುವ ಸೈದ್ಧಾಂತಿಕ ಪಾಠಗಳನ್ನು ಹೆಚ್ಚಿಸಲು ಪ್ರಾಯೋಗಿಕ ಅನುಭವದ ಅಗತ್ಯವಿದೆ ಎಂದರು.

ತಂತ್ರಜ್ಞಾನ ಮತ್ತು ಕೌಶಲಗಳು ವಿಕಸನಗೊಳ್ಳುತ್ತಿರುವ ವೇಗವನ್ನು ಗಮನಿಸಿದರೆ, ವಿದ್ಯಾರ್ಥಿಯು ತಾಂತ್ರಿಕ ಜ್ಞಾನದ ಜೊತೆಗೆ ಸೂಕ್ತವಾದ ಉದ್ಯೋಗಯೋಗ್ಯ ಮೃದು ಕೌಶಲ್ಯಗಳನ್ನು ಹೊಂದಿರಬೇಕು. ಇದನ್ನು ಕಲಿಸುವುದು ಕೇಂದ್ರದ ಉದ್ದೇಶವಾಗಿದೆ ಎಂದು ತಿಳಿಸಿದರು.

ಡಾ.ಬಿ.ಸದಾಶಿವಗೌಡ, ಶಾಮ ಶೆಟ್ಟಿ, ಸುಪ್ರಿಯಾ ಸಾಲಿಯನ್, ಎಚ್.ಎ.ವೆಂಕಟೇಶ್ ಇದ್ದಾರೆ.

ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳ ಕುರಿತು ಮಾಹಿತಿ ಪಡೆಯಲು ನೆರವಾಗುವ ಗುರಿಯೊಂದಿಗೆ ಈ ಕೇಂದ್ರ ಸ್ಥಾಪಿಸಲಾಗಿದೆ.

‘ಕಾಮೆಡ್‌ಕೇರ್ಸ್‌’ ಉಪಕ್ರಮದಲ್ಲಿ ಸದಸ್ಯ ಸಂಸ್ಥೆಗಳ ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಬೆಂಬಲಿಸಲಾಗುತ್ತದೆ. ನಾವೀನ್ಯತೆ ಕೇಂದ್ರವು ಸಾಮಾಜಿಕ ಆವಿಷ್ಕಾರ, ಯಂತ್ರ ಕಲಿಕೆ ಮತ್ತು ಕೃತಕ ಬುದ್ಧಿಮತ್ತೆಯಂತಹ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ. ವಿದ್ಯಾರ್ಥಿಗಳಲ್ಲಿ ನವೀನ ಮತ್ತು ವಿನ್ಯಾಸ ಚಿಂತನೆಯ ಮನಸ್ಥಿತಿಯನ್ನು ಅಭಿವೃದ್ಧಿಪಡಿಸುತ್ತದೆ.