ಮನೆ ಸುದ್ದಿ ಜಾಲ ಪೌತಿಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಬೇಕು:  ಡಾ.ಕೆ.ವಿ ರಾಜೇಂದ್ರ

ಪೌತಿಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಬೇಕು:  ಡಾ.ಕೆ.ವಿ ರಾಜೇಂದ್ರ

0

ಮೈಸೂರು(Mysuru):  ಪೌತಿ ಖಾತೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ ಮೈಸೂರು ಹಾಗೂ ಕೃಷಿಕ ಸಮಾಜ ಮೈಸೂರು. ಸಹಯೋಗದಲ್ಲಿ ನಾಗೇನಹಳ್ಳಿ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ಅಂಗವಾಗಿ ರೈತ ಮತ್ತು ವಿಜ್ಞಾನಿಗಳ ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಮೀನಿನ ಅನುಭವದಲ್ಲಿ ಇದ್ದರು ಜಮೀನಿನ ಹಕ್ಕು ಪತ್ರ ಪಡೆಯಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ, ಯಾವುದೇ ರೀತಿಯ ನಕ್ಷೆಗಳು ಇಲ್ಲದೆ ರೈತರು ಉಳುಮೆ ಮಾಡುತಿದ್ದರು, ಈ ಸಂಬಂಧ ಅವರು ಕಚೇರಿಗೆ ಬಂದು ಹಕ್ಕು ಪತ್ರಗಳನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಪೌತಿ ಖಾತೆ  ಪಡೆಯಲು ಬಗ್ಗೆ ಮಹಿಳೆಯರು ಹಿಂಜರಿಯದೆ ಮುಂದೆ ಬಂದು ತಮ್ಮ ಹಕ್ಕುಗಳನ್ನು ಪಡೆದುಕೊಳಬೇಕು, ಈ ಸಂಬಂಧ ರೈತರಿಗೆ ಪೌತಿ ಖಾತೆಗಳ ಬಗ್ಗೆ ಅರಿವು ಅವಶ್ಯಕವಾಗಿರುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು

ಕೃಷಿ ಇಲಾಖೆಯಲ್ಲಿ ರೈತರಿಗೆ ಅನೇಕ ಯೋಜನೆಗಳಿವೆ, ರೈತರು ಯೋಜನೆಗಳ ಬಗ್ಗೆ ತಿಳಿದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌’ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ.ಬಿ.ಆರ್.ಪೂರ್ಣಿಮಾ  ಮಾತನಾಡಿ,  ನರೇಗಾ ಯೋಜನೆ ರೈತರಿಗೆ ವರದಾನವಾಗಿದ್ದು ನರೇಗಾ ಯೋಜನೆಯ ಸದುಪಯೋಗಮಾಡಿಕೊಳ್ಳಲು ರೈತರು ಮುಂದಾಗಬೇಕು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆತ್ಮ ಯೋಜನೆಯಡಿ 2021-22ನೇ ಸಾಲಿನಲ್ಲಿ ರಾಜ್ಯಮಟ್ಟದಲ್ಲಿ ಕೃಷಿ ಪಂಡಿತ ಹಾಗೂ ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಜಿಲ್ಲೆಯ ರೈತರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಚಂದ್ರ ಶೇಖರ್, ತೋಟಗಾರಿಕೆ ಉಪ ನಿರ್ದೇಶಕರಾದ ರುದ್ರೇಶ್ , ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರಾದ ಬಡಲಪುರ ನಾಗೇಂದ್ರ, ರೈತ ಮುಖಂಡರಾದ ಹೊಸೂರ್ ಕುಮಾರ್, ವಿದ್ಯಾಸಾಗರ್ ,  ಕಿರಗಸೂರು ಶಂಕರ್ , ಕೃಷಿಕ ಸಮಾಜ ಅಧ್ಯಕ್ಷರಾದ ಕಲ್ಮಳ್ಳಿ ಶಿವಕುಮಾರ್  ಹಾಗೂ ಎಲ್ಲಾ ತಾಲ್ಲೂಕಿನ ರೈತರು ಉಪಸ್ಥಿತರಿದ್ದರು.