ಮನೆ ಸುದ್ದಿ ಜಾಲ ರಸ್ತೆ ಸುರಕ್ಷತಾ ಕ್ರಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಸೂಚನೆ

ರಸ್ತೆ ಸುರಕ್ಷತಾ ಕ್ರಮಗಳ ಪಾಲನೆಗೆ ಜಿಲ್ಲಾಧಿಕಾರಿಗಳ ಸೂಚನೆ

0

ಮೈಸೂರು(Mysuru): ರಸ್ತೆ ಸುರಕ್ಷತಾ ಕ್ರಮಗಳ ಪಾಲನೆ ಬಗ್ಗೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ರಸ್ತೆ ಸುರಕ್ಷತೆ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ ಅಪಘಾತವಲಯಗಳನ್ನು ಗುರುತಿಸುವುದು ಮತ್ತು ಫಲಕಗಳನ್ನು ಅಳವಡಿಸುವುದು, ಸ್ಥಳೀಯವಾಗಿ ದೊರೆಯುವ ಆಂಬ್ಯುಲೆನ್ಸ್ಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಬರೆಸುವುದು, ರಸ್ತೆ ಕಾಮಗಾರಿ ದುರಸ್ಥಿಯಲ್ಲಿದ್ದರೆ ಕಡ್ಡಾಯವಾಗಿ ಸಂಚಾರರಿಗೆ ಕಾಣುವಂತೆ ಸೂಚನೆಗಳನ್ನು ಹಾಕಿಸುವುದು, ಹಂಪ್ಸ್ ಗಳಿಗೆ ಬಣ್ಣ ಹಚ್ಚಿಸುವುದು, ರಿಫ್ಲೆಕ್ರ‍ಸ್’ಗಳನ್ನು ಅಳವಡಿಸುವುದು, ಮತ್ತಷ್ಟು ಪೊಲೀಸ್ ಬ್ಯಾರಿಗೇಟ್‌’ಗಳನ್ನು ಹಾಕಿಸುವುದು, ಸಂಚಾರಿ ನಿಯಮಗಳನ್ನು ಪರಿಣಾಮಕಾರಿಯಾಗಿಸಿ ಅವುಗಳನ್ನು ಸಂಚಾರಿಗಳು ಕಡ್ಡಾಯವಾಗಿ ಪಾಲಿಸುವಂತೆ ಮಾಡುವುದು ಹಾಗೂ ಇತರೆ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡುವುದು ರಸ್ತೆ ಸುರಕ್ಷತೆಯಲ್ಲಿ ಬಹಳ ಮುಖ್ಯ ಎಂದರು.

ದುರಸ್ತಿಯಲ್ಲಿರುವ ರಸ್ತೆ ಕಾಮಗಾರಿಗೆ ಕೇವಲ ರಾಷ್ಟೀಯ ಹೆದ್ದಾರಿ ಪ್ರಾಧಿಕಾರವನ್ನೇ ಅವಲಂಬಿಸುವುದು ಬೇಡ, ಬದಲಾಗಿ ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯವನ್ನು ತೆಗುದುಕೊಳ್ಳಿ, ಯಾವುದೇ ಸಂಚಾರರು ಮಾರಣಾಂತಿಕ/ಸಾಮಾನ್ಯ ಅಪಘಾತಗಳಿಗೆ ತುತ್ತಾಗದಂತೆ ಸಂಚಾರಿ ನಿಯಮಗಳನ್ನು ಪಾಲಿಸುವಂತೆ ಮಾಡುವುದು ಸ್ಥಳೀಯ ಆಡಳಿತದ ಜವಾಬ್ದಾರಿ ಎಂದು ತಿಳಿಸಿದರು.

ಪ್ರಾದೇಶಿಕ ಸಾರಿಗೆ ಕಛೇರಿ, ಪೋಲಿಸ್ ಮತ್ತು ಲೋಕೋಪಯೋಗಿ ಅಧಿಕಾರಿಗಳು ಜಂಟಿಯಾಗಿ ಅಪಘಾತ ಪೀಡಿತ ಪ್ರದೇಶಗಳನ್ನು ಪರಿಶೀಲಿಸಬೇಕು ಮತ್ತು ಪರಿಣಾಮಕಾರಿ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ತಿಳಿಸಿದರು.

15 ದಿನಗಳಿಗೊಮ್ಮೆ ವರ್ಚುವಲ್ ಮೀಟಿಂಗ್ ಮೂಲಕ ಹಾಗೂ ತಿಂಗಳಿಗೊಮ್ಮೆ ಫಿಸಿಕಲ್ ಮೀಟಿಂಗ್ ಮೂಲಕ ವರದಿ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು ರಸ್ತೆ ಸುರಕ್ಷತೆಯ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಪೋಲಿಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಟ್ಕರ್, ಪೊಲೀಸ್ ಉಪ ಆಯುಕ್ತೆ (ಅಪರಾಧ ಮತ್ತು ಸಂಚಾರ) ಗೀತಾ ಪ್ರಸನ್ನ, ಲೋಕೋಪೋಯೋಗಿ ಕಾರ್ಯನಿರ್ವಾಹಕ ಇಂಜಿನಿಯರ್ ರಾಜು, ಪ್ರಾದೇಶಿಕ ಸಾರಿಗೆ ಆಯುಕ್ತರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.