ಮನೆ ರಾಜ್ಯ ರಾಜ್ಯ ಪ್ರೌಢಶಾಲೆ, ಪಿಯು ಕಾಲೇಜುಗಳಲ್ಲಿ 8191 ಹುದ್ದೆಗಳು ಖಾಲಿ: ಬಿ.ಸಿ.ನಾಗೇಶ್

ರಾಜ್ಯ ಪ್ರೌಢಶಾಲೆ, ಪಿಯು ಕಾಲೇಜುಗಳಲ್ಲಿ 8191 ಹುದ್ದೆಗಳು ಖಾಲಿ: ಬಿ.ಸಿ.ನಾಗೇಶ್

0

ಕಲಬುರಗಿ(Kalburgi): ರಾಜ್ಯದ ಅನುದಾನಿತ ಪ್ರೌಢಶಾಲೆ ಹಾಗೂ ಪಿಯು ಕಾಲೇಜುಗಳಲ್ಲಿ 8191 ಹುದ್ದೆಗಳು ಖಾಲಿ ಇರುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮತ್ತು ಸಕಾಲ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ರಾಜ್ಯದಲ್ಲಿ 3758 ಪ್ರೌಢಶಾಲೆಗಳು ಹಾಗೂ 980 ಪಿಯು ಕಾಲೇಜುಗಳಿದ್ದು, ಪ್ರೌಢಶಾಲೆಗಳಲ್ಲಿ 31 ಡಿಸೆಂಬರ್ 2015ರಿಂದ 2022ರ ಡಿಸೆಂಬರ್‌’ವರೆಗೆ 6022 ಹಾಗೂ ಪಿಯು ಕಾಲೇಜುಗಳಲ್ಲಿ 2169 ಹುದ್ದೆಗಳು ಖಾಲಿ ಇವೆ. ಹುದ್ದೆಗಳು ಖಾಲಿ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ ಎಂದು ಒಪ್ಪಿಕೊಂಡಿದ್ದಾರೆ.

2016ರ ನಂತರ ಖಾಲಿ ಉಳಿದ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮತಿಯನ್ನು ಕೋರಲಾಗಿತ್ತು. ಆದರೆ, 2015ರ ಪೂರ್ವದಲ್ಲಿ ಖಾಲಿಯಾಗಿರುವ ಹುದ್ದೆಗಳನ್ನು ಭರ್ತಿ ಮಾಡಿದ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ ಎಂದಿದ್ದಾರೆ.