ಮನೆ ಅಪರಾಧ ಬೈಕ್ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವು

ಬೈಕ್ ಅಪಘಾತ: ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವು

0

ಬೆಂಗಳೂರು(Bengaluru):  ಬೈಕ್ ಅಪಘಾತ ಸಂಭವಿಸಿ ಬಿಬಿಎಂಪಿ ಹೆಲ್ತ್ ಇನ್ಸ್ ಪೆಕ್ಟರ್ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಸ್ಯಾಂಕಿ ಕೆರೆ ಟಿ. ಚೌಡಯ್ಯರಸ್ತೆಯಲ್ಲಿ ನಡೆದಿದೆ.

ಪ್ರಶಾಂತ್ ನಾಯ್ಕ್  ಮೃತಪಟ್ಟ ಹೆಲ್ತ್ ಇನ್ಸ್ ಪೆಕ್ಟರ್.

ಪುಟ್ ಪಾತ್ ಗೆ ಬೈಕ್ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಪ್ರಶಾಂತ್ ನಾಯ್ಕ್ ಜೆಪಿ ನಗರ ನಿವಾಸಿಯಾಗಿದ್ದು,   ಸದಾಶಿವನಗರದಿಂದ ಜೆಪಿ ನಗರಕ್ಕೆ ತೆರಳುವಾಗ ಘಟನೆ ನಡೆದಿದೆ.

ಈ ಕುರಿತು ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.