ಮನೆ ರಾಜ್ಯ ಹೊಸ ವರ್ಷಾಚರಣೆಗೆ 1.70 ಲಕ್ಷ ಕ್ಯಾಮೆರಾ, 8500 ಸಿಬ್ಬಂದಿ ನಿಯೋಜನೆ

ಹೊಸ ವರ್ಷಾಚರಣೆಗೆ 1.70 ಲಕ್ಷ ಕ್ಯಾಮೆರಾ, 8500 ಸಿಬ್ಬಂದಿ ನಿಯೋಜನೆ

0

ಬೆಂಗಳೂರು(Bengaluru): ಹೊಸ ವರ್ಷಾಚರಣೆ ಮೇಲೆ ನಿಗಾ ವಹಿಸಲು ಸರ್ಕಾರಿ ಹಾಗೂ ಖಾಸಗಿ ಜಾಗದಲ್ಲಿರುವ 1.70 ಲಕ್ಷ ಕ್ಯಾಮೆರಾಗಳನ್ನು ಪೊಲೀಸರು ಬಳಸಿಕೊಳ್ಳುತ್ತಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ಆಚರಣೆಯಲ್ಲಿ ಪಾಲ್ಗೊಳ್ಳುವವರ‌ ಮುಖದ ಫೋಟೊ ಸೆರೆ ಹಿಡಿಯುವುದನ್ನು ಕಡ್ಡಾಯಗೊಳಿಸಿರುವುದಾಗಿ ತಿಳಿಸಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಹೊಸ ವರ್ಷಾಚರಣೆಯಂದು ಪ್ರತಿಯೊಂದು ಸ್ಥಳ, ಬಾರ್, ಪಬ್, ರೆಸ್ಟೊರೆಂಟ್ ಹಾಗೂ ಎಲ್ಲ ಬಗೆಯ ವ್ಯಾಪಾರ ಸ್ಥಳಗಳಲ್ಲಿ ಭದ್ರತೆಗೆ 8500 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.

ಕಾನೂನು ಸುವ್ಯವಸ್ಥೆ ಪೊಲೀಸರು, ಸಂಚಾರ ಪೊಲೀಸರು, ಖಾಸಗಿ ಕಂಪನಿಗಳು ಹಾಗೂ ಇತರರು ಅಳವಡಿಸಿರುವ 1.70 ಲಕ್ಷ‌ ಕ್ಯಾಮೆರಾಗಳನ್ನು ಗುರುತಿಸಲಾಗಿದೆ. ಡಿ. 31ರಂದು ಎಲ್ಲ ಕ್ಯಾಮೆರಾಗಳು ಪೊಲೀಸರ ನಿರ್ವಹಣೆಯಲ್ಲಿ ಇರಲಿವೆ. ಯಾವುದೇ ಅವಘಡ ಸಂಭವಿಸಿದರೆ ದೃಶ್ಯ ಲಭ್ಯವಾಗಲಿದೆ ಎಂದರು.

ಬ್ರಿಗೇಡ್ ರಸ್ತೆಯ ಪ್ರವೇಶ ದ್ವಾರ, ಎಲ್ಲ ಬಾರ್, ಪಬ್, ಹೋಟೆಲ್ ಹಾಗೂ ಇತರೆ ಸ್ಥಳಗಳಲ್ಲಿ ಕ್ಯಾಮೆರಾ ಇರಲಿದೆ. ಈ ಸ್ಥಳಗಳಿಗೆ ಬರುವ ಪ್ರತಿಯೊಬ್ಬರು ಮಾಸ್ಕ್ ತೆಗೆದು‌ ಕ್ಯಾಮೆರಾಗೆ ಮುಖ ತೋರಿಸಬೇಕು. ಇದರಿಂದಾಗಿ ಪ್ರತಿಯೊಬ್ಬರ ಗುರುತು ಪತ್ತೆ ಸುಲಭವಾಗಲಿದೆ ಎಂದು ಹೇಳಿದರು.