ಮನೆ ಪ್ರವಾಸ ಭಾರತದ ಗುಪ್ತ ರತ್ನಗಳ ಸಾಲಿನಲ್ಲಿ ಈ ಅದ್ಭುತವಾದ ತಾಣಗಳು

ಭಾರತದ ಗುಪ್ತ ರತ್ನಗಳ ಸಾಲಿನಲ್ಲಿ ಈ ಅದ್ಭುತವಾದ ತಾಣಗಳು

0

ನಮ್ಮ ಭಾರತದಲ್ಲಿ ಅಸಂಖ್ಯಾತ ಪ್ರವಾಸಿ ಸ್ಥಳಗಳಿವೆ. ಅವುಗಳನ್ನು ಸಂದರ್ಶಿಸಲು ಜೀವಿತಾವಧಿಯೇ ಬೇಕು ಎನ್ನಬಹುದು. ನೈಸರ್ಗಿಕವಾಗಿ ಆಶೀರ್ವದಿಸಲ್ಪಟ್ಟ ಮತ್ತು ಮಾನವ ನಿರ್ಮಿತ ಅದ್ಭುತಗಳು ಒಂದಾ ಎರಡಾ? ವಿಶ್ವದ ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುವ ನಮ್ಮ ಭಾರತದ ತಾಣಗಳು ನಿಜಕ್ಕೂ ಜನಪ್ರಿಯ.

ಇನ್ನು ಬಹುತೇಕರು ಲೇಖನದಲ್ಲಿ ಹೇಳಲಾಗುವ ತಾಣಗಳನ್ನು ಈವರೆಗೆ ಅನ್ವೇಷಣೆ ಮಾಡದೇ ಇರಬಹುದು. ವಾಸ್ತವವಾಗಿ ಇವುಗಳನ್ನು ಭಾರತದ ಗುಪ್ತ ರತ್ನಗಳು ಎಂದೇ ಕರೆಯುತ್ತಾರೆ.

ಅಲ್ಮೋರಾ

ಉತ್ತರಾಖಂಡ ರಾಜ್ಯದಲ್ಲಿರುವ ಅಲ್ಮೋರಾ ಅತ್ಯಂತ ಸುಂದರವಾದ ಪ್ರವಾಸಿ ತಾಣವಾಗಿದೆ. ನೋಡಲು ಬೆಟ್ಟದ ಪಟ್ಟಣದಂತೆ ಕಾಣುವ ಈ ಸ್ಥಳವು ಕುಮಾನ್ ಹಿಮಾಲಯದಲ್ಲಿ ನೆಲೆಗೊಂಡಿದೆ. ಇತಿಹಾಸವನ್ನು ನೆನಪಿಸುವ ಅಲ್ಮೋರಾದಲ್ಲಿ ಅನೇಕ ಯುದ್ಧಗಳು ನಡೆದಿವೆ. ಇದು ಚಾಂದ್ ರಾಜವಂಶ, ರೋಹಿಲ್ಲಾಗಳು, ಗೂರ್ಖಾಗಳು ಮತ್ತು ಬ್ರಿಟಿಷರಿಂದ ಕೂಡ ಆಳಲ್ಪಟ್ಟಿದೆ. ಇಲ್ಲಿ ಅನೇಕ ಪುರಾತನವಾದ ಕೋಟೆ, ಅವಷೇಶಗಳು, ಹಿಂದೂ ದೇವಾಲಯಗಳನ್ನು ನೀವು ನೋಡಬಹುದು. ಅಲ್ಮೋರಾದಲ್ಲಿ ನಿವು ತಪ್ಪದೇ ಕತರ್ಮಾಲ್ ಸೂರ್ಯ ದೇವಾಲಯ, ನಂದಾ ದೇವಿ ದೇವಾಲಯಗಳಿಗೆ ಹೋಗುವುದನ್ನು ಮರೆಯದಿರಿ.

ದಿಯು

Vast view of Historical Portuguese sea Fort in Diu, India

ಪ್ರವಾಸಿಗರಿಂದ ಹೆಚ್ಚಾಗಿ ಅನ್ವೇಷಣೆಗೆ ಒಳಪಡದ ಗುಪ್ತ ರತ್ನಗಳಲ್ಲಿ ದಿಯು ಕೂಡ ಒಂದಾಗಿದೆ. ಸುಂದರವಾದ ಕರಾವಳಿ ಪಟ್ಟಣವಾಗಿರುವ ಈ ದಿಯು ಗುಜರಾತ್ ರಾಜ್ಯದ ಕಥಿಯವಾಡದಲ್ಲಿದೆ. ದಿಯು ಪೋರ್ಚುಗೀಸ್ ಪ್ರಭಾವಳಿಗೆ ಒಳಪಟ್ಟಿರುವುದನ್ನು ನೋಡಬಹುದು. ಇಲ್ಲಿ ಅನೇಕ ಪಾರಂಪರಿಕ ಚರ್ಚುಗಳು, ಪುರಾತನ ಮನೆಗಳು ಪೋರ್ಚುಗೀಸ್ ವಾಸ್ತುಶಿಲ್ಪ ಶೈಲಿಯಲ್ಲಿದೆ. ದಿಯುವಿನ ಪ್ರವಾಸದಲ್ಲಿ ತಪ್ಪದೇ ನೈದಾ ಗುಹೆಗಳು, ದಿಯು ಕೋಟೆ ಮತ್ತು ಲೈಟ್ಹೌಸ್ಗಳಿಗೆ ಹೋಗುವುದನ್ನು ಮರೆಯದಿರಿ. ಹಾಗೆಯೇ ಪೋರ್ಚುಗೀಸ್ ಭಕ್ಷ್ಯಗಳನ್ನು ಕೂಡ ಇಲ್ಲಿ ಸೇವಿಸಬಹುದು.

ಫೋರ್ಟ್ ಬ್ಲೇರ್

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಈ ಪೋರ್ಟ್ ಬ್ಲೇರ್ ಕೂಡ ಭಾರತದ ಅತ್ಯಂತ ಪ್ರಶಾಂತವಾದ ಸ್ಥಳವಾಗಿದೆ. ಪ್ರವಾಸಿಗರಿಂದ ಕಡಿಮೆ ಅನ್ವೇಷಣೆಗೆ ಒಳಪಟ್ಟ ಸ್ಥಳಗಳಲ್ಲಿ ಇದು ಕೂಡ ಒಂದಾಗಿದೆ. ಈ ಸ್ಥಳವು ಬ್ರಿಟಿಷರ ವಿರುದ್ಧ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬಹಳ ನಿರ್ಣಾಯಕ ಪಾತ್ರವನ್ನು ವಹಿಸಿದ ಸ್ಥಳವಾಗಿತ್ತು. ನಿಮಗಿದು ತಿಳಿದಿರಲಿ, ಪೋರ್ಟ್ ಬ್ಲೇರ್ನಲ್ಲಿ ಡಿಸೆಂಬರ್ 30, 1943 ರಲ್ಲಿ ಮೊದಲ ಬಾರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ಭಾರತದ ಧ್ವಜವನ್ನು ಹಾರಿಸಿದ ಸ್ಥಳ ಎನ್ನಲಾಗುತ್ತದೆ.

ಧೋಲಾವೀರಾ

ಭಾರತದ ಗುಪ್ತ ರತ್ನಗಳಲ್ಲಿ ಈ ಧೋಲಾವೀರಾ ಕೂಡ ಒಂದು. ಇದು ಗುಜರಾತ್’ನ ಕಚ್ ಜಿಲ್ಲೆಯ ಭಚವು ತಾಲೂಕಿನಲ್ಲಿದೆ. ಇದು ಪ್ರಾಚೀನ ಸಿಂಧೂತಟದ ನಾಗರೀಕತೆಯ ಒಂದು ನಗರದ ಅವಶೇಷಗಳನ್ನು ಕಾಣಬಹುದು. ಇತಿಹಾಸ ಪ್ರಿಯರಿಗೆ ಮತ್ತು ವಾಸ್ತುಶಿಲ್ಪದ ಉತ್ಸಾಹಿಗಳಿಗೆ ಈ ತಾಣವು ಆಕರ್ಷಿಸುತ್ತದೆ. ನಿಮಗೆ ತಿಳಿದಿರಲಿ, ವಿಶ್ವದ 5 ಅತಿ ದೊಡ್ಡ ಹರಪ್ಪಾ ತಾಣಗಳಲ್ಲಿ ಧೋಲವೀರಾ ಕೂಡ ಒಂದು. ಈ ಮೇಲಿನ ಎಲ್ಲಾ ತಾಣಗಳು ಗುಜರಾತ್ ಮತ್ತು ಭಾರತದ ಐತಿಹಾಸಿಕತೆಯನ್ನು ಎತ್ತಿ ಹಿಡಿಯುವ ಕನ್ನಡಿಯಂತಿವೆ.