ಮನೆ ಸುದ್ದಿ ಜಾಲ ಮತದಾರರ ದಿನಾಚರಣೆ: ರಾಜ್ಯ ಮಟ್ಟದ ಪ್ರಬಂಧ ಹಾಗೂ ಭಿತ್ತಿ ಚಿತ್ರಗಳ ಸ್ಪರ್ಧೆ

ಮತದಾರರ ದಿನಾಚರಣೆ: ರಾಜ್ಯ ಮಟ್ಟದ ಪ್ರಬಂಧ ಹಾಗೂ ಭಿತ್ತಿ ಚಿತ್ರಗಳ ಸ್ಪರ್ಧೆ

0

ಮೈಸೂರು(Mysuru): ರಾಷ್ಟ್ರೀಯ ಮತದಾರರ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ 9 ವಿದ್ಯಾರ್ಥಿಗಳಿಗೆ ಜಿಪಂ ಮಾನ್ಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿಗಳ ನೇತೃತ್ವದಲ್ಲಿ ಇಂದು  ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪ್ರಬಂಧ ಮತ್ತು ಭಿತ್ತಿ ಚಿತ್ರಗಳ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜುಗಳ 9 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಬಂಧ(ಕನ್ನಡ ಮತ್ತು ಇಂಗ್ಲಿಷ್) 6 ವಿದ್ಯಾರ್ಥಿಗಳು, ಭಿತ್ತಿಪತ್ರ ಸ್ಪರ್ಧೆಯಲ್ಲಿ 3 ವಿದ್ಯಾರ್ಥಿಗಳು ಜಿಲ್ಲಾ ಮಟ್ಟದಲ್ಲಿ ವಿಜೇತರಾಗಿದ್ದರು.

ಈ ಕುರಿತು ಸ್ವೀಪ್ ಸಹಾಯಕರಾದ ಕೃಷ್ಣ ಅವರು ಮಾತನಾಡಿ, ಡಿಸೆಂಬರ್ 19 ರಂದು ಜಿಲ್ಲೆಯ ಮಹಾರಾಣಿ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಪ್ರಬಂಧ ಮತ್ತು ಭಿತ್ತಿಪತ್ರ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ಪ್ರೌಢಶಾಲೆ, ಪದವಿ ಪೂರ್ವ, ಪದವಿ ಕಾಲೇಜಿನ 9 ವಿದ್ಯಾರ್ಥಿಗಳು ವಿಜೇತರಾಗಿದ್ದು, ಆ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ದೊರೆತಿದೆ.

ಈ ರೀತಿಯ ಸ್ಪರ್ಧೆಗಳಿಂದ ಮಕ್ಕಳಲ್ಲಿ, ವಿದ್ಯಾರ್ಥಿಗಳ ಚುನಾವಣೆಯ ಮಹತ್ವ, ಚುನಾವಣೆಯ ಆಯಾಮಗಳ ಬಗ್ಗೆ ಅರಿವು ಮೂಡಿಸಿದಂತಾಗುತ್ತದೆ ಎಂದು ತಿಳಿಸಿದರು.

ಈ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಷ್ಟೃೀಯ ಮತದಾರರ ದಿನಾಚರಣೆಯಂದು ಪ್ರಶಸ್ತಿ ವಿತರಿಸಲಾಗುವುದು.

ಕಾರ್ಯಕ್ರಮದಲ್ಲಿ ಪ್ರೌಢಶಾಲೆ ನೋಡಲ್ ಅಧಿಕಾರಿ ದೇವರಾಜ.ಕೆ.ಎಸ್, ಪಿಯುಸಿ ಕಾಲೇಜುಗಳ ನೋಡಲ್ ಅಧಿಕಾರಿ ಡಾ.ಮಂಗಳಮೂರ್ತಿ.ಎಸ್, ಪದವಿ ಕಾಲೇಜುಗಳ ನೋಡಲ್ ಅಧಿಕಾರಿ ಡಾ.ಹೇಮಚಂದ್ರ ಅವರು ಸೇರಿದಂತೆ ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದರು.