Saval TV on YouTube
ನವದೆಹಲಿ(Newdelhi): ಪ್ರತಿಯೊಬ್ಬರಿಗೂ ಅಗ್ಗದ ದರಕ್ಕೆ ಗುಣಮಟ್ಟದ ಔಷಧ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ 2024ರ ಮಾರ್ಚ್ ವೇಳೆಗೆ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು 10,000ಕ್ಕೆ ಹೆಚ್ಜಿಸಲು ಯೋಜನೆ ರೂಪಿಸಲಾಗಿದೆ.
ಕಳೆದ ಎಂಟು ವರ್ಷಗಳಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಮೂಲಕ ಸುಮಾರು ₹18,000 ಕೋಟಿ ಉಳಿತಾಯ ಮಾಡಲಾಗಿದೆ. 743 ಜಿಲ್ಲೆಗಳಲ್ಲಿರುವ 9,000ಕ್ಕೂ ಹೆಚ್ಚು ಜೆನರಿಕ್ ಔಷಧ ಕೇಂದ್ರಗಳ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ಚಿಂತಿಸಲಾಗಿದೆ ಎಂದು ಸರ್ಕಾರ ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
2021–22ರಲ್ಲಿ ಜನೌಷಧಿ ಕೇಂದ್ರಗಳಲ್ಲಿ 893.56 ಕೋಟಿ ಮೌಲ್ಯದ ಔಷಧ ಮಾರಾಟವಾಗಿದೆ. ಇದರಿಂದ ನಾಗರಿಕರಿಗೆ 5,300 ಕೋಟಿ ಉಳಿತಾಯವಾಗಿದೆ. 2022–23ನೇ ಸಾಲಿನಲ್ಲಿ ನವೆಂಬರ್ ವರೆಗೆ 758.69 ಕೋಟಿ ಮೌಲ್ಯದ ಔಷಧ ಮಾರಾಟವಾಗಿದೆ. ಇದರಿಂದ ಅಂದಾಜು 4,500 ಕೋಟಿ ಉಳಿತಾಯವಾಗಿದೆ ಎಂದು ತಿಳಿಸಿದೆ.