ಮನೆ ಆರೋಗ್ಯ ಚಳಿಗಾಲದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದಾ?

ಚಳಿಗಾಲದ ಸಮಯದಲ್ಲಿ ಬೇಯಿಸಿದ ಮೊಟ್ಟೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದಾ?

0

ಮೊಟ್ಟೆ ತನ್ನಲ್ಲಿ ಹೆಚ್ಚಿನ ಪ್ರೋಟೀನ್ ಒಳಗೊಂಡಿರುವ ಬಹಳ ಜನರ ನೆಚ್ಚಿನ ಆಹಾರ ಪದಾರ್ಥ. ಅಂದರೆ ದೇಹಕ್ಕೆ ಅಗತ್ಯವಾಗಿ ಬೇಕಾದ ಒಳ್ಳೆಯ ಪ್ರಮಾಣದ ಪ್ರೋಟೀನ್ ತುಂಬಾ ಕಡಿಮೆ ಬೆಲೆಯಲ್ಲಿ ನಮಗೆ ಸಿಗಬೇಕು ಎಂದರೆ ನಾವು ಕೋಳಿ ಮೊಟ್ಟೆ ಮಾಡಿಕೊಳ್ಳಬಹುದು.

ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರು ಕೂಡ ಕೋಳಿ ಮೊಟ್ಟೆ ಸೇವಿಸಬಹುದು. ವೈದ್ಯರು ಕೂಡ ಇದನ್ನು ಸೂಪರ್ ಫುಡ್ ಎಂದು ಕರೆದಿದ್ದಾರೆ. ಈಗ ಪ್ರಶ್ನೆ ಎಂದರೆ ಚಳಿಗಾಲದಲ್ಲಿ ಕೋಳಿ ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕೆ ಏನಾದರೂ ಉಪಯೋಗ ಇದೆಯೇ ಎಂಬುದು. ಅನೇಕ ಜನರು ಈ ಒಂದು ಪ್ರಶ್ನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ. ಅಂತಹ ಎಲ್ಲಾ ಓದುಗ ಮಿತ್ರರಿಗೂ ಈ ಲೇಖನ ಮುಡಿಪಾಗಿದೆ…

ಚಳಿಗಾಲದಲ್ಲಿ ಮೊಟ್ಟೆ- ಎಷ್ಟು ತಿಂದರೆ ಒಳ್ಳೆಯದು?

• ಮೊಟ್ಟೆ ನಿಮಗೆಲ್ಲ ಗೊತ್ತಿರುವ ಹಾಗೆ ಉಷ್ಣ ಆಹಾರ ಪದಾರ್ಥವಾಗಿದೆ. ಇದರಲ್ಲಿ ಸೆಲೆನಿಯಂ ಹೆಚ್ಚಾಗಿದ್ದು, ವೈದ್ಯರು ಹೇಳುವ ಪ್ರಮಾಣದಲ್ಲಿ ಶೇಕಡ 28% ನಿಮಗೆ ಸಿಗುತ್ತದೆ.

• ಹಾಗಾಗಿ ನೀವು ದಿನಕ್ಕೆ ಒಂದು ಅಥವಾ ಎರಡು ಕೋಳಿ ಮೊಟ್ಟೆ ತಿಂದರೆ ಪರಿಪೂರ್ಣವಾಗುತ್ತದೆ. ಹೃದಯದ ಸಮಸ್ಯೆ ಇರುವವರು ಇದಕ್ಕಿಂತ ಹೆಚ್ಚು ತಿನ್ನುವುದು ಬೇಡ.

ಒಳ್ಳೆಯ ಕೊಲೆಸ್ಟ್ರಾಲ್ ಇಲ್ಲಿ ಸಿಗುತ್ತದೆ

• ಚಳಿಗಾಲದಲ್ಲಿ ಪ್ರತಿಯೊಬ್ಬರೂ ಸಹ ತಮ್ಮ ದೇಹದ ಕೊಲೆಸ್ಟ್ರಾಲ್ ಪ್ರಮಾಣವನ್ನು ಆರೋಗ್ಯಕರ ವಾಗಿ ಕಾಪಾಡಿಕೊಳ್ಳುವುದು ತುಂಬಾ ಅಗತ್ಯವಾಗಿದೆ. ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್ ನಿಂದ ದೂರ ಉಳಿಯುವುದು ಒಳ್ಳೆಯದು.

• ಏಕೆಂದರೆ ಚಳಿಗಾಲದಲ್ಲಿ ಹೃದಯಘಾತ ಪ್ರಮಾಣ ಜಾಸ್ತಿ ಇರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕೋಳಿ ಮೊಟ್ಟೆ ಈ ವಿಷಯದಲ್ಲಿ ನಿಮಗೆ ಒಳ್ಳೆಯದು ಎಂದು ಹೇಳಬಹುದು. ಏಕೆಂದರೆ ಇದರಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅಥವಾ ಎಚ್ ಡಿ ಎಲ್ ಪ್ರಮಾಣ ತುಂಬಾ ಹೆಚ್ಚಾಗಿದೆ.

ಮೆದುಳಿನ ಆರೋಗ್ಯ ನಿರ್ವಹಣೆಯಾಗುತ್ತದೆ

• ಕೆಲವೊಮ್ಮೆ ವಿಪರೀತ ಚಳಿ ಹೆಚ್ಚಾಗಿ ಯಾವ ಕೆಲಸ ಮಾಡಬೇಕು ಯಾವುದನ್ನು ಬಿಡಬೇಕು ಎನ್ನುವುದಕ್ಕೆ ತಲೆ ಓಡುವುದಿಲ್ಲ. ಮಾನಸಿಕವಾಗಿ ಒಂದು ರೀತಿಯ ಕನ್ಫ್ಯೂಷನ್ ಶುರುವಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಾಗುತ್ತದೆ.

• ಇದರಿಂದ ರಕ್ತದ ಒತ್ತಡ ಕೂಡ ಏರಿಕೆ ಆಗುತ್ತದೆ. ಆದರೆ ಚಳಿಗಾಲದಲ್ಲಿ ಕೋಳಿ ಮೊಟ್ಟೆ ತಿನ್ನುವುದರಿಂದ ಅದರಲ್ಲಿರುವ ವಿಟಮಿನ್ ಬಿ 6, ವಿಟಮಿನ್ ಬಿ 12, ಕೋಲಿನ್, ಪೋಲೆಟ್ ಮತ್ತು ಇನ್ನಿತರ ಪೌಷ್ಟಿಕ ಸತ್ವಗಳ ಪ್ರಮಾಣಗಳು ನಮ್ಮ ಬುದ್ಧಿ ಚುರುಕಾಗುವಂತೆ ಮಾಡುತ್ತವೆ ಮತ್ತು ನಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸುತ್ತವೆ.

ಕಣ್ಣುಗಳ ದೃಷ್ಟಿ ನಿರ್ವಹಣೆಯಾಗುತ್ತದೆ

• ಚಳಿಗಾಲದಲ್ಲಿ ದೇಹದಲ್ಲಿ ರಕ್ತ ಸಂಚಾರ ಅಷ್ಟು ಚೆನ್ನಾಗಿ ನಡೆಯುವುದಿಲ್ಲ ಎಂದು ವೈದ್ಯರು ಹೇಳುತ್ತಾರೆ. ಇದರಿಂದ ಕಣ್ಣುಗಳ ಭಾಗಕ್ಕೂ ರಕ್ತ ಸಂಚಾರ ಕಡಿಮೆಯಾಗುತ್ತದೆ.

• ಹಾಗಾಗಿ ಈ ಸಂದರ್ಭದಲ್ಲಿ ತುಂಬಾ ಜನರಿಗೆ ಕಣ್ಣಿನ ಪೊರೆ ಮತ್ತು ಕಣ್ಣುಗಳು ಮಂಜಾಗುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಿಂದ ಕೋಳಿ ಮೊಟ್ಟೆ ತಿನ್ನುವುದರ ಪರಿಣಾಮಕ್ರಮೇಣ ವಾಗಿ ಅದು ದೇಹದಲ್ಲಿ ಉಷ್ಣ ವಾತಾವರಣ ನಿರ್ಮಾಣ ಮಾಡಿ ದೇಹದ ಎಲ್ಲಾ ಭಾಗಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗುವಂತೆ ನೋಡಿಕೊಳ್ಳುತ್ತದೆ.

• ಅಷ್ಟೇ ಅಲ್ಲದೆ ಕಣ್ಣುಗಳ ದೃಷ್ಟಿಯನ್ನು ನಿರ್ವಹಣೆ ಮಾಡುವಂತಹ ಪೌಷ್ಟಿಕ ಸತ್ವಗಳು ಕೋಳಿ ಮೊಟ್ಟೆಯಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

• ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿ ನಮಗೆ ಎಷ್ಟಿದ್ದರೂ ಸಾಲದು. ಏಕೆಂದರೆ ಆಗಾಗ ಸಣ್ಣ ಪುಟ್ಟ ನೆಗಡಿ, ಕೆಮ್ಮು, ಜ್ವರ, ಗಂಟಲು ನೋವು ಕಾಣಿಸಿಕೊಳ್ಳುತ್ತಾ ಇರುತ್ತವೆ.

• ಇವುಗಳಿಂದ ಪಾರಾಗಬೇಕು ಎಂದರೆ ಮೊದಲು ಆಂತರಿಕವಾಗಿ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಬಲವಾಗಿರಬೇಕು. ಅದಕ್ಕಾಗಿ ನಾವು ಕೋಳಿ ಮೊಟ್ಟೆ ತಿನ್ನುವ ಅಭ್ಯಾಸ ಮಾಡಿಕೊಳ್ಳಬೇಕು. ಬೇರೆ ಬಗೆಯ ಆರೋಗ್ಯದ ಸೋಂಕುಗಳಿಂದ ಸಹ ರೋಗ ನಿರೋಧಕ ಶಕ್ತಿ ನಮ್ಮನ್ನು ಕಾಪಾಡುತ್ತದೆ.

ತೂಕ ನಿರ್ವಹಣೆಗೆ ಒಳ್ಳೆಯದು

• ದೇಹದ ತೂಕ ಯಾವುದೇ ಸಮಯದಲ್ಲಿ ಹೆಚ್ಚಾಗಿರುವುದಕ್ಕಿಂತ ಚಳಿಗಾಲದಲ್ಲಿ ಹೆಚ್ಚಾದರೆ ತುಂಬಾ ಕಷ್ಟ. ಬೊಜ್ಜು ಮತ್ತು ಕೊಬ್ಬಿನ ಪ್ರಮಾಣ ನಮ್ಮ ಹೃದಯವನ್ನು ಘಾಸಿ ಗೊಳಿಸುತ್ತದೆ. ಹಾಗಾಗಿ ಈ ಸಂದರ್ಭದಲ್ಲಿ ನಾವು ಆದಷ್ಟು ತೂಕ ಇಳಿಸಿಕೊಳ್ಳುವ ಪ್ರಯತ್ನ ಮಾಡಬೇಕು.

• ಕೋಳಿ ಮೊಟ್ಟೆ ತನ್ನಲ್ಲಿ ಪ್ರೋಟೀನ್ ಮತ್ತು ಹೃದಯಕ್ಕೆ ಸಹಕಾರಿಯಾದ ಕೊಬ್ಬಿನ ಅಂಶವನ್ನು ಹೇರಳವಾಗಿ ಒಳಗೊಂಡಿರುವುದರಿಂದ ತಮಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ ಮತ್ತು ತೂಕವನ್ನು ನಿರ್ವಹಣೆ ಮಾಡುತ್ತದೆ.