ಸಾಬಕ್ಕಿಯ ವಡಾ ವ್ರತಾಚರಣೆ ಹಾಗೂ ಉಪವಾಸದ ಸಂದರ್ಭದಲ್ಲಿ ಸೇವಿಸುವ ಪ್ರಸಿದ್ಧ ಲಘು ಆಹಾರ. ಇದನ್ನು ಮುಖ್ಯವಾಗಿ ಸಾಬಕ್ಕಿಯಿಂದ ತಯಾರಿಸಲಾಗುತ್ತದೆ. ಶ್ರಾವಣ ಮಾಸದ ವ್ರತಗಳು, ನವರಾತ್ರಿಯ ಉಪವಾಸ ಕ್ರಮ ಹಾಗೂ ಇನ್ನಿತರ ವ್ರತಾಚರಣೆ ಹಾಗೂ ಹಬ್ಬ ಹರಿದಿನಗಳಲ್ಲಿ ತಯಾರಿಸಲಾಗುತ್ತದೆ. ಇದು ಮಹಾರಾಷ್ಟ್ರ ಶೈಲಿಯ ಪಾಕವಿಧಾನ. ಇದರ ರುಚಿ ಹಾಗೂ ಉತ್ತಮ ಉಪಯೋಗದಿಂದಾಗಿ ದೇಶದ ವಿವಿಧ ಪ್ರದೇಶದಲ್ಲೂ ತಯಾರಿಸುತ್ತಾರೆ. ಇದರಲ್ಲಿ ಸಮೃದ್ಧವಾದ ಕಾರ್ಬೋಹೈಡ್ರೇಟ್ ಮತ್ತು ಗ್ಲೂಕೋಸ್ ಇರುವುದರಿಂದ ಉಪವಾಸದ ಸಂದರ್ಭದಲ್ಲಿ ಸೇವಿಸುತ್ತಾರೆ. ಸರಳವಾದ ಈ ಪಾಕವಿಧಾನವನ್ನು ನೀವು ಸುಲಭವಾಗಿ ಮಾಡಬಹುದು. ನಿಮಗೆ ಸವಿಯಲು ಮನಸ್ಸಾದಾಗ ಬಹುಬೇಗ ತಯಾರಿಸಬಹುದು.
(ಬಡಿಸುವ ಪ್ರಮಾಣ: 2)
ಪ್ರಮುಖ ಸಾಮಗ್ರಿ
• 4 – ಬೇಯಿಸಿದ ಆಲೂಗಡ್ಡೆ
• 100 ಗ್ರಾಮ್ಸ್ ಸಾಬುದಾನ
ಮುಖ್ಯ ಅಡುಗೆಗೆ
• 4 – ಕತ್ತರಿಸಿದ ಹಸಿಮೆಣಸಿನಕಾಯಿ
• 1 ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು
• ಅಗತ್ಯ ತಕ್ಕಷ್ಟು black pepper
• 1/2 ಚಮಚ ಉಪ್ಪು
• 1/2 ಕಪ್ ಜಜ್ಜಿದ ನೆಲಗಡಲೆ
• 1/4 ಚಮಚ ಕರಿಮೆಣಸು
ಒಗ್ಗರಣೆ
• ಅಗತ್ಯ ತಕ್ಕಷ್ಟು ಸಂಸ್ಕರಿಸಿದ ಎಣ್ಣೆ
Step 1:
– ಒಂದು ಪಾತ್ರೆಯಲ್ಲಿ ಸಾಬಕ್ಕಿಯನ್ನು ಹಾಕಿ, ಪಿಷ್ಟ ಹೋಗುವ ತನಕ ಚೆನ್ನಾಗಿ ತೊಳೆಯಿರಿ.- ನಂತರ ಅದಕ್ಕೆ ನೀರನ್ನು ಹಾಕಿ 2 ಗಂಟೆಗಳ ಕಾಲ ನೆನೆಯಲು ಬಿಡಿ.
Step 2:
– ಬೇಯಿಸಿದ ಆಲೂಗಡ್ಡೆಯನ್ನು ತುರಿ ಮಣೆಯಿಂದ ತುರಿದುಕೊಳ್ಳಿ.
Step 3:
– ಒಂದು ಪಾತ್ರೆಯಲ್ಲಿ ತುರಿದುಕೊಂಡ ಆಲೂಗಡ್ಡೆ, ಸಾಬಕ್ಕಿ, ಕೊತ್ತಂಬರಿ ಸೊಪ್ಪು, ಹಸಿ ಮೆಣಸಿನ ಕಾಯಿ, ಉಪ್ಪು, ಶೇಂಗಾ ಪುಡಿ ಎಲ್ಲವನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ.
Step 4:
– ನಂತರ ಅಂಗೈ ಮೇಲೆ ಎಣ್ಣೆಯನ್ನು ಹಚ್ಚಿಕೊಂಡು, ವಡೆಯ ಆಕಾರದಲ್ಲಿ ತಟ್ಟಿ, ಪ್ಲೇಟ್ ಒಂದಕ್ಕೆ ವರ್ಗಾಯಿಸಿ.- ಟ್ಟಿಕೊಂಡ ವಡೆಯನ್ನು 5 ನಿಮಿಷಗಳ ಕಾಲ ಫ್ರಿಜ್ನಲ್ಲಿ ಇರಿಸಿ, ತಂಪಾಗಿಸಿ ಕೊಳ್ಳಿ.
Step 5:
– ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ, ಕರಿಯಲು ಸಿದ್ಧಮಾಡಿಕೊಳ್ಳಿ.- ಎಣ್ಣೆ ಬಿಸಿಯಾದ ಮೇಲೆ ವಡೆಯನ್ನು ಹಾಕಿ, ಕರಿಯಿರಿ.- ಎರಡು ಭಾಗದಲ್ಲಿ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ತಿರುಗಿದ ಮೇಲೆ, ತೆಗೆಯಿರಿ.
Step 6:
– ಬೆಂದ ವಡಾ ಅನ್ನು ಪ್ಲೇಟ್ ಒಂದಕ್ಕೆ ವರ್ಗಾಯಿಸಿ.- ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಸವಿಯಲು ನೀಡಿ.