ಮನೆ ಕಾನೂನು ಸುಳ್ಳು ಘೋಷಣಾ ಪತ್ರದೊಂದಿಗೆ ಜಾಮೀನು ನೀಡಲು ಬಂದ ವ್ಯಕ್ತಿ ವಿರುದ್ಧ ಮೊಕದ್ದಮೆ ದಾಖಲು

ಸುಳ್ಳು ಘೋಷಣಾ ಪತ್ರದೊಂದಿಗೆ ಜಾಮೀನು ನೀಡಲು ಬಂದ ವ್ಯಕ್ತಿ ವಿರುದ್ಧ ಮೊಕದ್ದಮೆ ದಾಖಲು

0

ಚಿತ್ರದುರ್ಗ(Chitradurga): ಸುಳ್ಳು ಘೋಷಣಾ ಪತ್ರದೊಂದಿಗೆ ಆರೋಪಿಗೆ ಜಾಮೀನು ನೀಡಲು ಬಂದ ವ್ಯಕ್ತಿಯ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದೆ.

ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹೋಬಳಿ ಗದಿಯಪ್ಪನಹಟ್ಟಿ ವಾಸಿ ಮಂಜುನಾಥ್ ಸುಳ್ಳು ಘೋಷಣಾ ಪತ್ರದೊಂದಿಗೆ ಜಾಮೀನು ನೀಡಲು ಹೋಗಿ ನ್ಯಾಯಾಧೀಶರಿಗೆ ಸಿಕ್ಕಿಬಿದ್ದಿದ್ದಾನೆ.

ಸಿಆರ್’ಪಿಸಿ ಎಸ್.ಸಿ ಸಂಖ್ಯೆ 43\\2022 ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡಲು ಮಂಜುನಾಥ್ ತಮ್ಮ ಹೆಸರಿನಲ್ಲಿದ್ದ ಸರ್ವೆ ಸಂಖ್ಯೆ 20\\2 1.18 ಗುಂಟೆ ಜಮೀನನ್ನು ಜಾಮೀನಿಗೆ ನೀಡಲು ಬಯಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ  ನ್ಯಾಯಾಧೀಶರು  ಘೋಷಣಾ ಪತ್ರದಲ್ಲಿ ಯಾವುದೇ ಆರೋಪಿಗೆ ಈ ಜಮೀನು ಮೂಲಕ  ಜಾಮೀನು ನೀಡಿಲ್ಲವೆಂದು ಘೋಷಣಾ ಪತ್ರ ನೀಡಿದ್ದೀರಿ, ಯಾರಿಗಾದರೂ ಜಾಮೀನು ನೀಡಿದ್ದೀರಾ ಎಂದು ಪ್ರಶ್ನಿಸಿದಾಗ ಮಂಜುನಾತ್ ಯಾರಿಗೂ ಜಾಮೀನು ನೀಡಿಲ್ಲ ಎಂದು ಉತ್ತರಿಸಿದರು.

ಈ ಬಗ್ಗೆ ಪರಿಶೀಲಿಸಿದಾಗ ದಾವಣಗೆರೆ, ಹೊನ್ನಾಳಿ, ಹರಿಹರ, ಚನ್ನಗಿರಿ ನ್ಯಾಯಾಲಯಗಳಲ್ಲಿ ಆರೋಪಿಗೆ ಇದೇ ಜಮೀನಿನ ಮೂಲಕ ಜಾಮೀನು ನೀಡಿರುವುದು ಬೆಳಕಿಗೆ ಬಂದಿತ್ತು. ನ್ಯಾಯಾಲಯಕ್ಕೆ ಸುಳ್ಳು ಘೋಷಣಾ ಪತ್ರ ನೀಡಿರುವುದು ಮತ್ತು ಸುಳ್ಳು ಹೇಳಿದ್ದರಿಂದ ಆತನ ಮೇಲೆ 193,203 ಅಡಿಯಲ್ಲಿ ಪ್ರಕರಣ ದಾಖಲು ಮಾಡುವಂತೆ ನ್ಯಾಯಾಧೀಶರಾದ ಪ್ರೇಮಾವತಿ ಮನಗೂಳಿ ಮಲ್ಲಿಕಾರ್ಜುನ್ ಆದೇಶಿಸಿದರು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ಪ್ರಧಾನ ಸರ್ಕಾರಿ ಅಭಿಯೋಜಕ ಬಿ.ಗಣೇಶ್ ನಾಯ್ಕ್ ತಿಳಿಸಿದ್ದಾರೆ.