ಕುಂಬಳಕಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿರುವ ತರಕಾರಿಯಾಗಿದ್ದು, ಇದನ್ನು ಸಾಂಬಾರ್ಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಕುಂಬಳಕಾಯಿಯನ್ನು ಸಾಂಬಾರ್, ಪಲ್ಯಗಳಲ್ಲಿ ಬಳಸಿದ್ರೆ ಅದರ ಬೀಜಗಳಿಂದಲೂ ಹಲವಾರು ಪ್ರಯೋಜನಗಳಿವೆ. ಕುಂಬಳಕಾಯಿಯಷ್ಟೇ ಅದರ ಬೀಜಗಳು ಕೂಡಾ ವಿಟಮಿನ್-ಸಿ, ವಿಟಮಿನ್-ಇ, ಕ್ಯಾಲೋರಿ, ಪ್ರೋಟೀನ್, ಕಾರ್ಬೋಹೈಡ್ರೇಟ್, ಕಬ್ಬಿಣ, ಸೋಡಿಯಂ ಮತ್ತು ಫೋಲೇಟ್’ನಂತಹ ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ.
ದಿನನಿತ್ಯದ ಆಹಾರದಲ್ಲಿ ಸೇರಿಸಬೇಕು
ಕುಂಬಳಕಾಯಿ ಬೀಜಗಳನ್ನು 100 ° C ನಲ್ಲಿ ಹುರಿದು ಸಲಾಡ್’ಗಳು ಅಥವಾ ಸೂಪ್ಗಳ ಮೇಲೆ ಹಾಕಬಹುದು ಅಥವಾ ಹಣ್ಣುಗಳು ಮತ್ತು ಡ್ರೈಫ್ರೂಟ್ಸ್’ಗಳೊಂದಿಗೆ ತಿನ್ನಬಹುದು.
ಖಿನ್ನತೆಯನ್ನು ದೂರಮಾಡುತ್ತದೆ
ಓರ್ವ ವ್ಯಕ್ತಿ ಒತ್ತಡ ಮುಕ್ತವಾಗಿರಲು ಕುಂಬಳಕಾಯಿ ಬೀಜಗಳನ್ನು ಸೇವಿಸಬಹುದು. ಈ ಬೀಜವು ಟ್ರಿಪ್ಟೊಫಾನ್ ಎಂಬ ಅಂಶವನ್ನು ಹೊಂದಿದ್ದು, ಖಿನ್ನತೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ಥೈರಾಯ್ಡ್ ಸಮಸ್ಯೆಗೆ
ಕುಂಬಳಕಾಯಿ ಬೀಜಗಳಲ್ಲಿ ಸತು, ಸೆಲೆನಿಯಮ್ ಮತ್ತು ಕಬ್ಬಿಣದ ಸಮೃದ್ಧವಾಗಿದ್ದು, ಇದು ಥೈರಾಯ್ಡ್ ಕಾರ್ಯವನ್ನು ಬೆಂಬಲಿಸಲು ಕೆಲಸ ಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಥೈರಾಯ್ಡ್ ಸಮಸ್ಯೆ ಇದ್ದರೆ, ಪ್ರತಿದಿನ ಈ ಬೀಜಗಳನ್ನು ಸೇವಿಸುವುದು ನಿಮಗೆ ಸಹಕಾರಿಯಾಗಬಲ್ಲದು.
ಚರ್ಮದ ಆರೋಗ್ಯಕ್ಕೆ
ಸತುವಿನಿಂದ ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳು ಜೀವಕೋಶಗಳ ನವೀಕರಣ ಮತ್ತು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಅಗತ್ಯವಾದ ಕೊಬ್ಬಿನಾಮ್ಲಗಳನ್ನು ಸಹ ಹೊಂದಿದೆ, ಇದು ಸ್ಪಷ್ಟ ಮತ್ತು ದೋಷರಹಿತ ಚರ್ಮವನ್ನು ಪಡೆಯಲು ಸಹಕಾರಿಯಾಗಿದೆ.
ಪ್ರಾಸ್ಟೇಟ್ ಆರೋಗ್ಯ
ಪ್ರಾಸ್ಟೇಟ್ ಕಾರ್ಯವು ಸತುವಿನ ಮಟ್ಟವನ್ನು ಅವಲಂಬಿಸಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಸತುವು ಸಮೃದ್ಧವಾಗಿರುವ ಕುಂಬಳಕಾಯಿ ಬೀಜಗಳ ಸೇವನೆಯು ಪ್ರಯೋಜನಕಾರಿಯಾಗಿದೆ. ಪ್ರತಿದಿನ ಕುಂಬಳಕಾಯಿ ಬೀಜಗಳನ್ನು ಸೇವಿಸುವುದರಿಂದ ನಿಮ್ಮ ಪ್ರಾಸ್ಟೇಟ್ ಆರೋಗ್ಯವನ್ನು ಸುಧಾರಿಸಬಹುದು.
ಫಲವತ್ತತೆಗೆ ಸಹಕಾರಿ
ಕುಂಬಳಕಾಯಿ ಬೀಜಗಳು ಫೈಟೊಸ್ಟೆರಾಲ್ಗಳು ಮತ್ತು ಸತುವುಗಳಲ್ಲಿ ಸಮೃದ್ಧವಾಗಿವೆ, ಇದು ಪುರುಷ ಫಲವತ್ತತೆಯನ್ನು ಸುಧಾರಿಸಲು ಮತ್ತು ಮಹಿಳೆಯರಲ್ಲಿ ಹಾರ್ಮೋನುಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ಮಹಿಳೆಯರು ಹಾಗೂ ಪುರುಷರು ನಿಯಮಿತವಾಗಿ ಸೇವಿಸಬೇಕು.
ಋತುಬಂಧದ ಲಕ್ಷಣಗಳನ್ನು ನಿವಾರಿಸುತ್ತದೆ
ಮಹಿಳೆಯರಲ್ಲಿ ಋತುಚಕ್ರ ಪ್ರಾರಂಭವಾಗುವ ಹಾಗೆಯೇ, ಋತುಬಂಧವು ಋತುಸ್ರಾವ ನಿಲ್ಲುವ ಸಮಯವಾಗಿದೆ. ಈ ಸಮಯದಲ್ಲಿ ಮಹಿಳೆಯರ ಆರೋಗ್ಯದ ಮೇಲೆ ಹಲವಾರು ಬದಲಾವಣೆಗಳಾಗುತ್ತದೆ. ಈ ಸಮಯದಲ್ಲಿ ಕೀಲು ನೋವು ಮತ್ತು ಮೈಗ್ರೇನ್ನಂತಹ ಲಕ್ಷಣಗಳು ಕಂಡುಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಕುಂಬಳಕಾಯಿ ಬೀಜಗಳನ್ನು ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಫೈಟೊಈಸ್ಟ್ರೊಜೆನ್ ಅನ್ನು ಹೊಂದಿರುತ್ತದೆ. ಇದು ಋತುಬಂಧದ ಲಕ್ಷಣಗಳನ್ನು ನಿವಾರಿಸಲು ಕೆಲಸ ಮಾಡುತ್ತದೆ.