ಮನೆ ಉದ್ಯೋಗ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ರಿಸರ್ಚ್ ಅಸಿಸ್ಟೆಂಟ್, ಪ್ರೊಫೆಶನಲ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಹಾಕಿ. ಜನವರಿ 13, 2023 ರಂದು ಬೆಳಗ್ಗೆ 11 ಗಂಟೆಗೆ ಸಂದರ್ಶನ ನಡೆಯಲಿದೆ.

ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಇಂಟರ್ವ್ಯೂಗೆ ಹಾಜರಾಗಿ. ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ವಿಜಯಪುರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.  ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ kswu.ac.in ಗೆ ಭೇಟಿ ನೀಡಬಹುದು.

ಪ್ರಮುಖ ದಿನಾಂಕಗಳು:

ನೋಟಿಫಿಕೇಶನ್ ಬಿಡುಗಡೆ ದಿನಾಂಕ: 04/01/2023

ಸಂದರ್ಶನ ನಡೆಯುವ ದಿನ: 13/01/2023 ಬೆಳಗ್ಗೆ 11 ಗಂಟೆಗೆ

ಸಂದರ್ಶನ ಎಲ್ಲಿ ನಡೆಯುತ್ತದೆ?

ಸಿಂಡಿಕೇಟ್ ಹಾಲ್

ಜ್ಞಾನ ಶಕ್ತಿ ಕ್ಯಾಂಪಸ್ (ತೊರವಿ)

ಅಥಣಿ ರಸ್ತೆ

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ

ವಿಜಯಪುರ-586108

ಎಷ್ಟೆಷ್ಟು ಹುದ್ದೆಗಳಿವೆ?

ರಿಸರ್ಚ್ ಅಸೋಸಿಯೇಟ್-1

ರಿಸರ್ಚ್ ಅಸಿಸ್ಟೆಂಟ್-1

ಪ್ರೊಫೆಶನಲ್ ಅಸಿಸ್ಟೆಂಟ್-1

ಹುದ್ದೆಯ ವಿಧ:

ರಿಸರ್ಚ್ ಅಸೋಸಿಯೇಟ್- ಬೋಧಕ ಹುದ್ದೆ

ರಿಸರ್ಚ್ ಅಸಿಸ್ಟೆಂಟ್- ಬೋಧಕೇತರ ಹುದ್ದೆ

ಪ್ರೊಫೆಶನಲ್ ಅಸಿಸ್ಟೆಂಟ್- ಬೋಧಕೇತರ ಹುದ್ದೆ

ವಿದ್ಯಾರ್ಹತೆ:

ರಿಸರ್ಚ್ ಅಸೋಸಿಯೇಟ್-ಮಹಿಳಾ ಅಧ್ಯಯನದಲ್ಲಿ ಎಂಎ, ಪಿಎಚ್’ಡಿ & NET/KSET ಪಾಸಾಗಿರಬೇಕು.

ರಿಸರ್ಚ್ ಅಸಿಸ್ಟೆಂಟ್- ಶೇ. 55 ರಷ್ಟು ಅಂಕಗಳೊಂದಿಗೆ ಮಹಿಳಾ ಅಧ್ಯಯನದಲ್ಲಿ ಎಂಎ ಪೂರ್ಣಗೊಳಿಸಿರಬೇಕು.

ಪ್ರೊಫೆಶನಲ್ ಅಸಿಸ್ಟೆಂಟ್-ಶೇ. 55 ರಷ್ಟು ಅಂಕಗಳೊಂದಿಗೆ ಮಹಿಳಾ ಅಧ್ಯಯನದಲ್ಲಿ ಎಂಎ ಪೂರ್ಣಗೊಳಿಸಿರಬೇಕು.

ಅನುಭವ:

ರಿಸರ್ಚ್ ಅಸೋಸಿಯೇಟ್-5 ವರ್ಷ ಬೋಧಕ ಮತ್ತು ಸಂಶೋಧನಾ ಅನುಭವ

ರಿಸರ್ಚ್ ಅಸಿಸ್ಟೆಂಟ್-3 ವರ್ಷ ಫೀಲ್ಡ್ ಅನುಭವ

ಪ್ರೊಫೆಶನಲ್ ಅಸಿಸ್ಟೆಂಟ್-3 ವರ್ಷ ಫೀಲ್ಡ್ ಅನುಭವ

ವೇತನ:

ರಿಸರ್ಚ್ ಅಸೋಸಿಯೇಟ್-ಮಾಸಿಕ ₹38,800

ರಿಸರ್ಚ್ ಅಸಿಸ್ಟೆಂಟ್-ಮಾಸಿಕ ₹ 25,000

ಪ್ರೊಫೆಶನಲ್ ಅಸಿಸ್ಟೆಂಟ್- ಮಾಸಿಕ ₹ 25,000

ಈ ಹುದ್ದೆಗಳು ಸಂಪೂರ್ಣ ತಾತ್ಕಾಲಿಕವಾಗಿರುತ್ತವೆ.

ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಎಲ್ಲಾ ಮೂಲ ದಾಖಲಾತಿಗಳು ಹಾಗೂ ಒಂದು ಸೆಟ್ ಜೆರಾಕ್ಸ್ ಪ್ರತಿಯನ್ನು ತಂದಿರಬೇಕು. ಜೊತೆಗೆ ರೆಸ್ಯೂಮ್ನ್ನು ಸಂದರ್ಶನದ ಸಮಯದಲ್ಲಿ ನೀಡಬೇಕು.