ಮನೆ ಸುದ್ದಿ ಜಾಲ ಪೇಂಟ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಲು ಅಗ್ನಿಶಾಮಕಪಡೆ ಹರಸಾಹಸ

ಪೇಂಟ್ಸ್ ಅಂಗಡಿಯಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಲು ಅಗ್ನಿಶಾಮಕಪಡೆ ಹರಸಾಹಸ

0

ಮಡಿಕೇರಿ: ಗೋಣಿಕೊಪ್ಪಲಿನ ಮುಖ್ಯ ರಸ್ತೆಯಲ್ಲಿರುವ ಪೇಂಟ್ಸ್ ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ.

ಸ್ಥಳಕ್ಕೆ ಅಗ್ನಿಶಾಮಕಪಡೆ ಬಂದು ಬೆಂಕಿ ನಂದಿಸಲು ಯತ್ನಿಸಿದರೂ ನೀರು ಖಾಲಿಯಾಗಿದೆ. ಬೆಂಕಿ ಧಗಧಗಿಸುತ್ತಿದ್ದು, ಸದ್ಯ ಗ್ರಾಮ ಪಂಚಾಯಿತಿ ನೀರಿನ ವ್ಯವಸ್ಥೆ ಮಾಡುತ್ತಿದೆ.

ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹರಡುವ ಭೀತಿ ಮೂಡಿದ್ದು, ಸ್ಥಳದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.