ಮನೆ ಉದ್ಯೋಗ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್’ನಲ್ಲಿ ITI ಪಾಸಾದವರಿಗೆ ಉದ್ಯೋಗ

ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್’ನಲ್ಲಿ ITI ಪಾಸಾದವರಿಗೆ ಉದ್ಯೋಗ

0

ಐಟಿಐ ಪಾಸಾಗಿ ಕೆಲಸ ಹುಡುಕುತ್ತಿದ್ದೀರಾ.. ಹಾಗಿದ್ರೆ ನಿಮಗಿದೋ ಇಲ್ಲೊಂದು ಗುಡ್ ನ್ಯೂಸ್ ಇದೆ. ಭಾರತ ಸರ್ಕಾರದ ಒಂದು ಎಂಟರ್ಪ್ರೈಸ್ ಆಗಿರುವ ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಅಪ್ರೆಂಟಿಸ್ ತರಬೇತುದಾರ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಆಹ್ವಾನಿಸಿದೆ. 295 ಹುದ್ದೆಗಳನ್ನು ವಿವಿಧ ಟ್ರೇಡ್ ನಲ್ಲಿ ನೇಮಕ ಮಾಡಲಿದೆ. ಅಲ್ಲದೇ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಸಂಬಳವನ್ನು ಸಹ ನೀಡಲಾಗುತ್ತದೆ. ಈ ಹುದ್ದೆಯಲ್ಲಿ ಆಕಸ್ತಿ ಇರುವವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.

ನೇಮಕ ಪ್ರಾಧಿಕಾರ : ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್

ಹುದ್ದೆ ಹೆಸರು : ಟ್ರೇಡ್ ಅಪ್ರೆಂಟಿಸ್

ಹುದ್ದೆಗಳ ಸಂಖ್ಯೆ : 295

ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ಎಸ್ಎಲ್ಸಿ / 10th ಪಾಸ್ ಜತೆಗೆ ಐಟಿಐ ಅನ್ನು ಯಾವುದೇ ಟ್ರೇಡ್ನಲ್ಲಿ ಪಾಸ್ ಮಾಡಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 14 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ / ಎಸ್ಟಿ ಅಭ್ಯರ್ಥಿಗಳಿಗೆ 5 ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.

ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 2023 ರ ಜನವರಿ 11 ರಿಂದ 25 ರವರೆಗೆ ಅವಕಾಶ ನೀಡಿದೆ. ಅಭ್ಯರ್ಥಿಗಳು ಆನ್ಲೈನ್ ಹೊರತುಪಡಿಸಿ ಇತರೆ ಯಾವುದೇ ಮಾರ್ಗದಲ್ಲಿ ಅಪ್ಲಿಕೇಶನ್ ಸಲ್ಲಿಸಲು ಅವಕಾಶ ಇಲ್ಲ.

ಟ್ರೇಡ್ವಾರು ಹುದ್ದೆಗಳ ವಿವರ

ಫಿಟ್ಟರ್ : 25

ಟರ್ನರ್ : 09

ಇಲೆಕ್ಟ್ರೀಷಿಯನ್ : 33

ವೆಲ್ಡರ್ : 38

ಇಲೆಕ್ಟ್ರಾನಿಕ್ಸ್ ಮೆಕ್ಯಾನಿಕ್ : 16

ಇನ್ಸ್ಟ್ರುಮೆಂಟೇಶನ್ ಮೆಕ್ಯಾನಿಕ್ : 6

ರೆಫ್ರಿಜೆರೇಷನ್ ಅಂಡ್ ಎಸಿ ಮೆಕ್ಯಾನಿಕ್ : 20

ಕಾರ್ಪೆಂಟರ್ : 19

ಪ್ಲಂಬರ್ : 20

ವೈಯರ್ಮೆನ್ : 16

ಡೀಸೆಲ್ ಮೆಕ್ಯಾನಿಕ್ : 07

ಮೆಕ್ಯಾನಿಕಲ್ ಮೊಟಾರ್ ವೆಹಿಕಲ್ : 07

ಮಷಿನಿಸ್ಟ್ : 13

ಪೇಂಟರ್ : 18

ಡ್ರಾಟ್ಸ್‌’ಮನ್ (ಮೆಕ್ಯಾನಿಕಲ್ ): 02

ಡ್ರಾಟ್ಸ್‌’ಮನ್ (ಸಿವಿಲ್ ) : 02

ಐಸಿಟಿ ಸಿಸ್ಟಮ್ ಮೇಂಟನೆನ್ಸ್ : 18

ಕಂಪ್ಯೂಟರ್ ಆಪರೇಟರ್ ಅಂಡ್ ಪ್ರೋಗ್ರಾಮಿಂಗ್ ಅಸಿಸ್ಟಂಟ್ : 18

ಸ್ಟೆನೋಗ್ರಾಫರ್ ( ಇಂಗ್ಲಿಷ್) : 02

ಸ್ಟೆನೋಗ್ರಾಫರ್ ( ಹಿಂದಿ) : 02

ಸೆಕ್ರೇಟರಿಯಟ್ ಅಸಿಸ್ಟಂಟ್ : 04

ಆಯ್ಕೆ ಪ್ರಕ್ರಿಯೇ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ 10ನೇ ತರಗತಿ ಹಂತದ ಶೇಕಡ 50 ಅಂಕಗಳು ಹಾಗೂ ಐಟಿಐ ಟ್ರೇಡ್ ವಿದ್ಯಾಭ್ಯಾಸದ ಶೇಕಡ.50 ಅಂಕಗಳನ್ನು ಪರಿಗಣಿಸಿ ಮೊದಲು ಮೆರಿಟ್ ಲಿಸ್ಟ್ ಸಿದ್ಧಪಡಿಸಲಾಗುತ್ತದೆ. ನಂತರ ಈ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆ ಮೂಲ ದಾಖಲೆಗಳ ಪರಿಶೀಲನೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಿ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ, 1 ವರ್ಷದ ಐಟಿಐ ಅರ್ಹತೆ ಇರುವವರಿಗೆ ಮಾಸಿಕ ರೂ.7700, 2 ವರ್ಷದ ಐಟಿಐ ಪಾಸಾದವರಿಗೆ ರೂ.8855 ಮಾಸಿಕ ಸ್ಟೈಫಂಡ್ ನೀಡಲಾಗುತ್ತದೆ.

ಮೊದಲಿಗೆ ಅಭ್ಯರ್ಥಿಗಳು apprenticeshipindia.gov.in ಗೆ ಭೇಟಿ ನೀಡಿ ರಿಜಿಸ್ಟ್ರೇಷನ್ ಪಡೆಯಬೇಕು. ನಂತರ ಈ ರಿಜಿಸ್ಟರ್ ಐಡಿ ಬಳಸಿಕೊಂಡು www.npcilcareers.co.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಚೆಕ್ ಮಾಡಬಹುದು.