ಮನೆ ಪ್ರವಾಸ ಐಆರ್’ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಅಂಡಮಾನ್ ದ್ವೀಪದ ಪ್ರವಾಸ ಮಾಡಿ

ಐಆರ್’ಸಿಟಿಸಿ ಟೂರ್ ಪ್ಯಾಕೇಜ್: ಬೆಂಗಳೂರಿನಿಂದ ಅಂಡಮಾನ್ ದ್ವೀಪದ ಪ್ರವಾಸ ಮಾಡಿ

0

ಅಂಡಮಾನ್ ದ್ವೀಪಗಳು ಮಾಂತ್ರಿಕ ತಾಣಗಳನ್ನು ಹೊಂದಿದೆ. ಇಲ್ಲಿನ ಒಂದೊಂದು ಕಡಲತೀರಗಳು ಸ್ಪಟಿಕ ಸ್ಪಷ್ಟವಾಗಿದ್ದು, ನೆಮ್ಮದಿ ಬಯಸುವ ಮಂದಿಗೆ ಸ್ವರ್ಗ ಎಂದೇ ಹೇಳಬಹುದು. ನವಜೋಡಿಗಳ ಮಧುಚಂದ್ರಕ್ಕೂ ಅಂಡಮಾನ್ ದ್ವೀಪ ಪರ್ಫೆಕ್ಟ್ ಎಂದೇ ಹೇಳಬಹುದು. ಇಂತಹ ಅದ್ಭುತವಾದ ದ್ವೀಪದಲ್ಲಿ ಅಷ್ಟಕ್ಕೂ ಏನೆಲ್ಲಾ ಪ್ರವಾಸ ಆಕರ್ಷಣೆಗಳು ಇವೆ ಗೊತ್ತಾ? ಹ್ಯಾವ್ಲಾಕ್, ನೀಲ್, ನಾರ್ತ್ ಬೇ ಐಲ್ಯಾಂಡ್, ಪೋರ್ಟ್ ಬ್ಲೇರ್, ರಾಸ್ ಐಲ್ಯಾಂಡ್ ಸೇರಿದಂತೆ ಆಹ್ಲಾದಕರವಾದ ಅನೇಕ ಕಡಲತೀರಗಳಿವೆ.

ಇಂತಹ ರಮಣೀಯವಾದ ತಾಣಕ್ಕೆ ಹೋಗಿ ಪ್ರವಾಸ ಮಾಡಲು ನೀವು ಬಯಸಿದರೆ ಖಂಡಿತವಾಗಿಯು IRCTC ಯ ಈ ಪ್ಯಾಕೇಜ್ ನಿಮಗೆ ಸಹಾಯ ಮಾಡಲಿದೆ. ಕಾರಣ, IRCTC ಬೆಂಗಳೂರಿನಿಂದ ಅಂಡಮಾನ್’ಗೆ ಪ್ಯಾಕೇಜ್ ಪರಿಚಯಿಸಿದೆ.

ಎಷ್ಟು ದಿನಗಳ ಪ್ರವಾಸ?

ಬೆಂಗಳೂರಿನಿಂದ ಪ್ರಾರಂಭವಾಗುವ ಅಂಡಮಾನ್ ಪ್ರವಾಸ 5 ರಾತ್ರಿಗಳು ಮತ್ತು 6 ದಿನಗಳನ್ನು ಒಳಗೊಂಡಿದೆ.

ಪ್ಯಾಕೇಜ್’ನ ಹೆಸರು: Tropical Wonders of Andaman Ex Bengaluru

ಯಾವೆಲ್ಲಾ ತಾಣಗಳನ್ನು ಪ್ಯಾಕೇಜ್ ಒಳಗೊಂಡಿದೆ: ಹ್ಯಾವ್ಲಾಕ್, ನೀಲ್, ನಾರ್ತ್ ಬೇ ಐಲ್ಯಾಂಡ್, ಪೋರ್ಟ್ ಬ್ಲೇರ್, ರಾಸ್ ಐಲ್ಯಾಂಡ್.

ಪ್ರಯಾಣದ ಮೋಡ್: ವಿಮಾನ

ಪ್ರಯಾಣ ಪ್ರಾರಂಭವಾಗುವ ಸ್ಥಳ: ಬೆಂಗಳೂರು 11:35 ಗಂಟೆಗೆ

ಹೊರಡುವ ದಿನಾಂಕ: 17/01/2023

ಪ್ರಯಾಣದ ವಿವರ ಮತ್ತು ಟಿಕೆಟ್ ಬೆಲೆ

17/01/2023 ಕ್ಕೆ ನಿಮ್ಮ ಪ್ರಯಾಣ ಬೆಂಗಳೂರಿನಿಂದ ಪ್ರಾರಂಭವಾಗಿ ಪೋರ್ಟ್ ಬ್ಲೇರ್’ಗೆ (Flight No. 6E-6356) ತಲುಪುತ್ತದೆ. 22/01/2023ಕ್ಕೆ ಪೋರ್ಟ್ ಬ್ಲೇರ್’ನಿಂದ ಬೆಂಗಳೂರಿಗೆ ಹಿಂದಿರುಗುತ್ತೀರಿ.

ಈ ಪ್ಯಾಕೇಜ್ ಅನ್ನು ನೀವು ಆಯ್ಕೆ ಮಾಡಿಕೊಂಡರೆ ವ್ಯಕ್ತಿಗೆ 54,910 ರೂಪಾಯಿಗಳನ್ನು ನಿಗದಿಪಡಿಸಿದೆ. ಒಂದು ವೇಳೆ ಇಬ್ಬರು ಪ್ರಯಾಣಿಸಲು ಯೋಜಿಸಿದರೆ ಒಬ್ಬರಿಗೆ 42,410 ರೂಪಾಯಿಗಳು ಮತ್ತು ಮೂವರು ಒಟ್ಟಿಗೆ ಪ್ರಯಾಣಿಸಿದರೆ 38,410 ರೂಪಾಯಿ ಪಾವತಿಸಬೇಕಾಗುತ್ತದೆ.

ಹಾಗೆಯೇ, 5 ರಿಂದ 11 ವರ್ಷದ ಒಳಗಿನ ಮಕ್ಕಳಿಗೆ 36,490 ರೂಪಾಯಿಗಳನ್ನು ಪಾವತಿಸಬೇಕು. ಇನ್ನು, 2 ರಿಂದ 4 ವರ್ಷದ ಮಕ್ಕಳಿಗೆ 29,610 ರೂಪಾಯಿಗಳನ್ನು ನಿರ್ಧರಿಸಲಾಗಿದೆ.

6 ದಿನಗಳ ಅಂಡಮಾನ್ ಪ್ರವಾಸ ಹೇಗಿರುತ್ತದೆ ಗೊತ್ತಾ?

ದಿನ 1: ಬೆಂಗಳೂರು ವಿಮಾನ ನಿಲ್ದಾಣದಿಂದ ವಿಮಾನ 11.35 ಗಂಟೆಗೆ ನಿರ್ಗಮಿಸುತ್ತದೆ. 14.00 ಗಂಟೆಗೆ ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ತಲುಪಿ, ಅಲ್ಲಿಂದ ಹೋಟೆಲ್ಗೆ ಚೆಕ್ ಇನ್ ಮಾಡಲಾಗುತ್ತದೆ. ಅಲ್ಲಿಂದ ಕಾರ್ಬಿನ್ ಕೋವ್ಸ್ ಬೀಚ್, ಸೌಂಡ್ ಮತ್ತು ಲೈಟ್ ಶೋನೊಂದಿಗೆ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿ. ಪೋರ್ಟ್ ಬ್ಲೇರ್’ನಲ್ಲಿ ರಾತ್ರಿಯ ತಂಗುವಿಕೆ ವ್ಯವಸ್ಥೆ ಮಾಡಲಾಗುತ್ತದೆ.

ದಿನ 2: ರಾಸ್ & ನಾರ್ತ್ ಬೇ ಐಲ್ಯಾಂಡ್, ಶಾಪಿಂಗ್, ವಿವಿಧ ಜಲಕ್ರೀಡೆ ಚಟುವಟಿಕೆ

ದಿನ 3: ಪೋರ್ಟ್ ಬ್ಲೇರ್, ಹ್ಯಾವ್ಲಾಕ್, ಕ್ರೂಸ್, ರಾಧಾನಗರ ಬೀಚ್, ಏಷ್ಯಾದ ಸ್ವಚ್ಛ ಬೀಚ್ ಡಿನ್ನರ್ ಮತ್ತು ನೈಟ್ ಸ್ಟೇಯಲ್ಲಿ ಈಜುವುದನ್ನು ಆನಂದಿಸಿ.

ದಿನ 4: ಹ್ಯಾವ್ಲಾಕ್ -ನೀಲ್, ಲಕ್ಷ್ಮಣಪುರ ಬೀಚ್, ನೀಲ್ ಐಲ್ಯಾಂಡ್ನಲ್ಲಿರುವ ಹೋಟೆಲ್ನಲ್ಲಿ ಡಿನ್ನರ್ ಮತ್ತು ನೈಟ್ ಸ್ಟೇ.

ದಿನ 5: ನೀಲ್ ದ್ವೀಪ – ಪೋರ್ಟ್ ಬ್ಲೇರ್, ಈಜು ಮತ್ತು ಗ್ಲಾಸ್ ಬಾಟಮ್ ಬೋಟ್ ರೈಡ್ ಮತ್ತು ಜಲ ಕ್ರೀಡೆಗಳು ಆನಂದಿಸಿ.

ದಿನ 6: ಪೋರ್ಟ್ ಬ್ಲೇರ್ -ಬೆಂಗಳೂರು

ಈ ಪ್ರಯಾಣದಲ್ಲಿ ಯಾವೆಲ್ಲಾ ಸೌಲಭ್ಯ ಪಡೆಯುತ್ತೀರಿ ಗೊತ್ತಾ?

• ಇಂಡಿಗೋ ಏರ್ಲೈನ್ಸ್’ನಿಂದ ಎಕಾನಮಿ ಕ್ಲಾಸ್’ನಲ್ಲಿ ವಿಮಾನ ಪ್ರಯಾಣ.

• ಬೆಳಗಿನ ಉಪಾಹಾರ ಮತ್ತು ಭೋಜನ ಮತ್ತು ಹೋಟೆಲ್ನಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗುತ್ತದೆ.

• ನೀಲ್ ದ್ವೀಪ, ಹ್ಯಾವ್ಲಾಕ್ ದ್ವೀಪ ಮತ್ತು ಹಿಂದಕ್ಕೆ ದೋಣಿ ಶುಲ್ಕಗಳು.

• ಪ್ರಯಾಣದ ಪ್ರಕಾರ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವೇಶ ಟಿಕೆಟ್ಗಳು ಪ್ಯಾಕೇಜ್’ನಲ್ಲಿ ಸೇರ್ಪಡೆಗೊಂಡಿರುತ್ತದೆ.

• ಪ್ರವಾಸ ವಿಮೆ, ಟೋಲ್, ಪಾರ್ಕಿಂಗ್, ಅನೇಕ ಸೇವೆಗಳಿಗೆ ಅನ್ವಯವಾಗುವ ಎಲ್ಲಾ ತೆರಿಗೆಗಳು ಪ್ಯಾಕೇಜ್’ನಲ್ಲಿ ಒಳಗೊಂಡಿರುತ್ತದೆ.

ಟಿಕೆಟ್ ಕ್ಯಾನ್ಸಲ್ ಮಾಡುವ ಅನುಕೂಲವಿದೆ

ನೀವು ಟಿಕೆಟ್ ಬುಕ್ ಮಾಡಿ ಕಾರಣಾಂತರಗಳಿಂದ ಪ್ರಯಾಣಿಸಲು ಸಾಧ್ಯವಾಗದಿದ್ದರೆ, IRCTC ಯು ಟಿಕೆಟ್ ಕ್ಯಾನ್ಸಲ್ ಮಾಡುವ ಅವಕಾಶವನ್ನು ನೀಡಿದೆ. ಅದೇನೆಂದರೆ 21 ದಿನಗಳ ಮುಂಚೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಟಿಕೆಟ್ಗೆ 30% ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸುತ್ತದೆ. ಅದೇ 15 ದಿನಗಳ ಮುಂಚೆ ಟಿಕೆಟ್ ಕ್ಯಾನ್ಸಲ್ ಮಾಡಿದರೆ 55% ಕಡಿತಗೊಳಿಸಿ ಉಳಿದ ಹಣ ನೀಡುತ್ತಾರೆ.

ಇನ್ನು 14 ರಿಂದ 8 ದಿನಗಳಿಗಿಂತ ಕಡಿಮೆ ಸಮಯದಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೆ 80% ಹಣವನ್ನು ಕಡಿತಗೊಳಿಸಿ ಉಳಿದ ಹಣವನ್ನು ಪಾವತಿಸುತ್ತದೆ. 8 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಿದರೆ ಪ್ಯಾಕೇಜ್’ನ ಹಣವನ್ನು ಪೂರ್ತಿಯಾಗಿ ಹಿಡಿಯಲಾಗುತ್ತದೆ.