ಮನೆ ರಾಜ್ಯ ಜನವರಿ 14ರ ಬದಲು 15 ರಂದು ಸಂಕ್ರಾಂತಿ ಆಚರಿಸಲು ಕಾರಣವೇನು ಗೊತ್ತೇ ? : ಇಲ್ಲಿದೆ...

ಜನವರಿ 14ರ ಬದಲು 15 ರಂದು ಸಂಕ್ರಾಂತಿ ಆಚರಿಸಲು ಕಾರಣವೇನು ಗೊತ್ತೇ ? : ಇಲ್ಲಿದೆ ಮಾಹಿತಿ

0

ಮಾನವೀಯ ಸಂಬಂಧ ಬೆಸೆಯುವ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿ ಹಬ್ಬವನ್ನು ರಾಜ್ಯದಲ್ಲಿಂದು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತದೆ.

2007ಕ್ಕೂ ಮುಂಚೆ ನಾವೆಲ್ಲಾ ಜನವರಿ 14ನೇ ತಾರೀಖಿನಂದು ಸಂಕ್ರಾತಿ ಆಚರಿಸುತ್ತಿದ್ದೇವು, 2008 ರ ನಂತರ ಜನವರಿ 15ನೇ ರಂದು ಸಂಕ್ರಾಂತಿ ಹಬ್ಬ ಆಚರಣೆ ಮಾಡಲು ಪ್ರಾರಂಭಿಸಿದ್ದೇವೆ. ಇದಕ್ಕೆ ಕಾರಣವೇನು ಗೊತ್ತೇ ? ಈ ಲೇಖನ ಓದಿ.

ಏಕೆಂದರೆ, ಸಾಮಾನ್ಯವಾಗಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಿದಾಗ

”ಮಕರ ಸಂಕ್ರಾಂತಿಯನ್ನು ಆಚರಿಸುವುದು ವಾಡಿಕೆ. ಇಂದಿನಿಂದ ಮಿಥುನ ರಾಶಿಯ ಪ್ರವೇಶದವರೆಗೆ ‘ಉತ್ತರಾಯಣ ಪುಣ್ಯಕಾಲ’ ಎಂದು ಕರೆಯಲಾಗುತ್ತದೆ.

ಮತ್ತೆ ಪ್ರತಿ ವರ್ಷ ಸೂರ್ಯನು ಮಕರ ರಾಶಿಗೆ ಪ್ರವೇಶಿಸುಲು ತೆಗೆದು ಕೊಳ್ಳುವ ಕಾಲ 20 ನಿಮಿಷವಾಗುತ್ತದೆ. ಇದರ ಸ್ಥೂಲಗಣನೆ ಆಧಾರದ ಮೇಲೆ, ಇದು ಪ್ರತಿ ಮೂರು ವರ್ಷಗಳಿಗೊಮ್ಮೆ ಒಂದು ಗಂಟೆ ಮತ್ತು ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಆಗುತ್ತದೆ.

ಈ ಲೆಕ್ಕಾಚಾರದ ಪ್ರಕಾರ, ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ, ಪ್ರತಿ 72 ವರ್ಷಗಳಿಗೊಮ್ಮೆ ಒಂದು ದಿನ ಬದಲಾಗುತ್ತದೆ. ಮುಂದಿನ 2080 ನಂತರ ಸಂಕ್ರಾತಿ ಹಬ್ಬವು ಜನವರಿ 16 ರಂದು ಆಚರಿಸಲ್ಪಡುವುದು.

1935 ರಿಂದ 2007 ರವರೆಗೆ ಹಬ್ಬವು ಜನವರಿ 14, ಇತ್ತು. 2008 ರಿಂದ 2080 ರವರೆಗೆ ಜನವರಿ 15ರಂದು ಸಂಕ್ರಾಂತಿ ಹಬ್ಬ ಆರಂಭವಾಯಿತು. ಪ್ರತಿ 72 ವರ್ಷಗಳಿಗೊಮ್ಮೆ ಹಬ್ಬವು ಒಂದು ದಿನದ ನಂತರ ಬದಲಾಗುತ್ತದೆ.

ಎಲ್ಲರಿಗೂ ಮಕರ ಸಂಕ್ರಾತಿಯ ಶುಭಾಶಯಗಳು.