ಮನೆ ರಾಷ್ಟ್ರೀಯ ಹಿಮಾಚಲ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ

ಹಿಮಾಚಲ ಪ್ರದೇಶದಲ್ಲಿ 3.2 ತೀವ್ರತೆಯ ಭೂಕಂಪ

0

ಶಿಮ್ಲಾ: ಉತ್ತರಖಂಡದ ಜೋಶಿಮಠದಲ್ಲಿ ಭೂಕುಸಿತ ಉಂಟಾಗಿರುವ ಭೀತಿಯ ನಡುವೆಯೇ, ಇತ್ತ ಹಿಮಾಚಲ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.

ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಶನಿವಾರ ಬೆಳಿಗ್ಗೆ ಕಡಿಮೆ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪ ವಿಜ್ಞಾನ ಕೇಂದ್ರ (ಎನ್‌’ಸಿಎಸ್) ತಿಳಿಸಿದೆ.

ಬೆಳಗ್ಗೆ 5.17ಕ್ಕೆ ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪನ ದಾಖಲಾಗಿದೆ.

ಧರ್ಮಶಾಲಾದಿಂದ 22 ಕಿ.ಮೀ. ಪೂರ್ವಕ್ಕೆ 5 ಕಿ.ಮೀ. ಆಳದಲ್ಲಿ ಕಂಪನದ ಕೇಂದ್ರ ಬಿಂದು ಗುರುತಿಸಲಾಗಿದೆ ಎಂದು ಎನ್‌’ಸಿಎಸ್ ಟ್ವೀಟ್ ತಿಳಿಸಿದೆ.