ಪುರುಷರು ಯಾವಾಗಲೂ ಅಭಿವ್ಯಕ್ತಿಶೀಲರಾಗಿರುವುದಿಲ್ಲ. ಹಾಗೆಯೇ ಅವರ ಹೃದಯವನ್ನು ಮುಚ್ಚಿಡುವುದೂ ಇಲ್ಲ. ಅವರು ಸಾಮಾನ್ಯವಾಗಿ ತಮ್ಮ ಪ್ರೀತಿ ಅಥವಾ ಭಾವನೆಗಳನ್ನು ಸೂಕ್ಷ್ಮ ರೀತಿಯಲ್ಲಿ ತೋರಿಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಿಮಗೆ ಸಹಾಯ ಮಾಡಲು ಸಂಕೇತಗಳನ್ನು ಇಲ್ಲಿ ನೀಡಲಾಗಿದೆ. ಅದರ ಮೂಲಕ ಒಬ್ಬ ವ್ಯಕ್ತಿಯು ನಿಮ್ಮೊಂದಿಗೆ ಅಥವಾ ಬೇರೊಬ್ಬರೊಂದಿಗೆ ಪ್ರೀತಿಯಲ್ಲಿದ್ದಾರೆ ಎನ್ನುವುದನ್ನು ಕಂಡುಹಿಡಿಯಬಹುದು.
ಹುಡುಗಿಯರ ಮುಂದೆ ಪ್ರೀತಿಯನ್ನು ಸೂಕ್ಷ್ಮವಾಗಿ ವ್ಯಕ್ತಪಡಿಸುತ್ತಾರೆ
ಯಾವುದೇ ಪುರುಷ ಪ್ರೀತಿಯಲ್ಲಿದ್ದರೆ ಆತ ತನ್ನ ಪ್ರೀತಿಯನ್ನು ನಿಧಾನವಾಗಿ ಸಣ್ಣ ಸಣ್ಣ ವಿಷಯಗಳಲ್ಲಿ ತೋರಿಸಲಾರಂಭಿಸುತ್ತಾನೆ. ಆತ ಅಕೆಯನ್ನು ತನ್ನ ಸ್ನೇಹಿತರು, ಸಂಬಂಧಿಕರಿಗೂ ಪರಿಚಯಿಸುತ್ತಾನೆ. ತನಗಿಷ್ಟವಾದ ಸ್ಥಳಗಳಿಗೂ ಕರೆದುಕೊಂಡು ಹೋಗುತ್ತಾನೆ.
ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯಲು ಪ್ರಯತ್ನಿಸುತ್ತಾರೆ
ಹೆಚ್ಚಿನ ಪುರುಷರು ಕಮೀಟ್ಮೆಂಟ್ ವಿಷಯಕ್ಕೆ ಬಂದಾಗ ದೂರ ಓಡುತ್ತಾರೆ. ಅದೇ ಯಾವುದೇ ಹುಡುಗ ತನ್ನ ತಾನು ಪ್ರೀತಿಸುವ ಹುಡುಗಿಗಾಗಿ ಯಾವುದೇ ಕಮೀಟ್ಮೆಂಟ್ಗೆ ತಯಾರಾಗಿದ್ದರೆ ಆತ ಆಕೆಗೋಸ್ಕರ ಎಷ್ಟೇ ಕಷ್ಟಗಳನ್ನು ಎದುರಿಸಲು ಸಿದ್ಧ ಎಂದರ್ಥ.
ನೀವು ಅವರ ಆದ್ಯತೆಯಾಗುತ್ತೀರಿ
ನಿಜವಾದ ಪ್ರೀತಿಯಲ್ಲಿ ಯಾವಾಗಲೂ ನೀವು ಅವರ ಆದ್ಯತೆಯಾಗಿರುತ್ತೀರಿ. ಅವನು ಯಾವಾಗಲೂ ನಿಮ್ಮೊಂದಿಗೆ ಇರಲು ಬಯಸುತ್ತಾನೆ. ಹಾಗಾಗಿ ತನ್ನ ಸ್ನೇಹಿತರ ಜೊತೆ ಹೆಚ್ಚಾಗಿ ಇರಲು ಬಯಸುವುದಿಲ್ಲ. ಏಕೆಂದರೆ ಈಗ ಆತನ ಆದ್ಯತೆ ಎಲ್ಲವೂ ನೀವೇ ಆಗಿರುತ್ತೀರಿ.
ಸೌಮ್ಯ ನೋಟ
ಪ್ರೀತಿಯಲ್ಲಿ ಬಿದ್ದ ನಂತರ ಪುರುಷರ ವರ್ತನೆ ಬದಲಾಗುತ್ತದೆ ಮತ್ತು ಅವರು ನಿಮ್ಮನ್ನು ನೋಡುವ ರೀತಿಯಲ್ಲಿ ಮೃದುತ್ವ ಇರುತ್ತದೆ. ಅವನು ವ್ಯಕ್ತಪಡಿಸದಿರಬಹುದು, ಆದರೆ ಅವನು ಪ್ರೀತಿಯಲ್ಲಿದ್ದಾಗ, ಅವನ ನೋಟವು ಯಾವಾಗಲೂ ನಿಮ್ಮ ಬಗ್ಗೆ ಮೃದುತ್ವ ಮತ್ತು ಗೌರವದಿಂದ ತುಂಬಿರುತ್ತದೆ.
ಅವಳನ್ನು ನೋಯಿಸದಂತೆ ಜಾಗರೂಕರಾಗಿರುತ್ತಾರೆ
ಯಾವುದೇ ಪುರುಷ ನಿಮ್ಮ ಬಗ್ಗೆ ಕಾಳಜಿ ವಹಿಸಲು ಪ್ರಾರಂಭಿಸಿದರೆ , ಬೇರೆ ವಿಷ್ಯಗಳಲ್ಲೂ ನಿಮ್ಮ ಸಲಹೆಯನ್ನು ಕೇಳಿದರೆ , ಯಾರ ಮುಂದೆಯೂ ನಿಮಗೆ ಅವಮಾನವಾಗದಂತೆ ನೋಡಿಕೊಂಡರೆ ಆತ ನಿಮ್ಮ ಬಗ್ಗೆ ಗಂಭೀರವಾಗಿದ್ದಾನೆ ಎಂದರ್ಥ. ತಮ್ಮ ಸಂಬಂಧದ ಬಗ್ಗೆ ಗಂಭೀರವಾಗಿಲ್ಲದ ಹೆಚ್ಚಿನ ಪುರುಷರು ಅಜಾಗರೂಕತೆಯಿಂದ ನಿಮ್ಮ ಮೇಲೆ ಹಾಸ್ಯವನ್ನು ಮಾಡುತ್ತಾರೆ.