ಮನೆ ಸುದ್ದಿ ಜಾಲ 280 ಕೊಟಿ ಅನುದಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಿ: ಅಧಿಕಾರಿಗಳಿಗೆ ಕಾಡಾ ಪ್ರಾಧಿಕಾರದ ಅಧ್ಯಕ್ಷರ ಸೂಚನೆ

280 ಕೊಟಿ ಅನುದಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಿ: ಅಧಿಕಾರಿಗಳಿಗೆ ಕಾಡಾ ಪ್ರಾಧಿಕಾರದ ಅಧ್ಯಕ್ಷರ ಸೂಚನೆ

0

ಮೈಸೂರು(Mysuru): ಕಾಡಾ ಪ್ರಾಧಿಕಾರದ ಅಧ್ಯಕ್ಷ ಜಿ. ನಿಜಗುಣರಾಜು ಶನಿವಾರ ಪ್ರಾಧಿಕಾರದ ವ್ಯಾಪ್ತಿಯ ಕೇಂದ್ರ ಕಚೇರಿ, ವಿಭಾಗ ಮತ್ತು ಉಪ ವಿಭಾಗ ಕಚೇರಿಗಳ ತಾಂತ್ರಿಕ ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.

ಸದರಿ ಸಭೆಯಲ್ಲಿ 2023-24 ನೇ ಸಾಲಿಗೆ 280 ಕೋಟಿ ಅನುದಾನಕ್ಕೆ ಕಾರ್ಯಕ್ರಮ ಪಟ್ಟಿ ಮತ್ತು ಕ್ರಿಯಾಯೋಜನೆ ಸಿದ್ಧತೆ ಬಗ್ಗೆ ಚರ್ಚಿಸಿ  ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು. ಕಳೆದ ವರ್ಷ ಅತಿಶೃಷ್ಟಿಯಿಂದ ಹಿಂದೆದೂ ಆಗದ ಡ್ಯಾಮೇಜ್ ಆಗಿರುವ ಸ್ಥಳಗಳನ್ನು ಪರಿಶೀಲಿಸಿ ಅತೀ ಹೆಚ್ಚು ರೈತರಿಗೆ ಅನುಕೂಲವಾಗುವಂತಹ ಅಚ್ಚುಕಟ್ಟು ವ್ಯಾಪ್ತಿಯ ಪ್ರದೇಶದಲ್ಲಿ ಕ್ರಮಕೈಗೊಳ್ಳಲು ದಿನಾಂಕ 20-01-2023 ರೊಳಗೆ 280 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಿದ್ದಪಡಿಸಲು ಸೂಚಿಸಿದರು.

ಪ್ರತ್ಯೇಕವಾಗಿ ಹಿಂದುಳಿದ ಪ್ರದೇಶವಾದ ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿ ನೆನೆಗೂಡಿಗೆ ಬಿದ್ದಿರುವ ನೀರು ಬಳಕೆದಾರರ ಸಹಕಾರ ಸಂಘಗಳ ಪುನಃಶಚೆತನಗೊಳಿಸುವ ಹಾಗೂ ಈ ಹಿಂದೆ ಪ್ರಾಧಿಕಾರದ ಕೃಷಿ ವಿಭಾಗ ದ ವತಿಯಿಂದ ನೀಡುತ್ತಿದ್ದ ಕೃಷಿ ಯಂತೋಪಕರಣಗಳು, ಕೃಷಿ ಸಲಕರಣೆಗಳು, ರಸಗೊಬ್ಬರಗಳು ಮತ್ತು ತೋಟಗಾರಿಕೆಗೆ ವಿವಿಧ ಬೆಳೆಗಳ ಸಸಿಗಳನ್ನು ವಿತರಣೆ ಕಾರ್ಯಕ್ರಮ ಗಳನ್ನು ಈ ಬಾರಿಯು ಅಂದರೆ 2023-24ನೇ ಸಾಲಿನಲ್ಲಿ ಹಮ್ಮಿಕೊಂಡು ಸವಲತ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ರೈತರಿಗೆ ಒದಗಿಸಲು ವಿಶೇಷ ಅನುದಾನಕ್ಕೆ   ಪ್ರಸ್ತಾವನೆ ಸಿದ್ದಪಡಿಸಿ ಮಾನ್ಯ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.