ಮನೆ ಯೋಗಾಸನ ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುವ 5 ಯೋಗ ಭಂಗಿಗಳು

ಆಹಾರ ಉತ್ತಮವಾಗಿ ಜೀರ್ಣವಾಗುವಂತೆ ಮಾಡುವ 5 ಯೋಗ ಭಂಗಿಗಳು

0

ಪ್ರಾಚೀನ ಭಾರತೀಯ ದೈಹಿಕ ಚಟುವಟಿಕೆಯ ಪ್ರಯೋಜನಗಳು ಅಸಂಖ್ಯಾತ. ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡುವುದರಿಂದ ಹಿಡಿದು ಪಿಸಿಓಎಸ್ ‘ನಂತಹ ರೋಗವನ್ನು ನಿವಾರಿಸುವ ಯೋಗವು ಅದರ ಅದ್ಭುತ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಈಗ ಇದನ್ನು ಪ್ರಪಂಚವು ಅರಿತುಕೊಂಡಿದೆ.

ಅನೇಕರಿಗೆ ತಿಳಿಯದ ವಿಚಾರವೆಂದರೆ ಜೀರ್ಣಕಾರಿ ಸಮಸ್ಯೆಗಳಾದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಆಮ್ಲೀಯತೆ, ಮಲಬದ್ಧತೆ ಮತ್ತು ಲೂಸ್ ಮೋಶನ್’ನಿಂದ ಪರಿಹಾರ ಸಿಗಬೇಕೆಂದರೆ ಯೋಗವು ಪರಿಣಾಮಕಾರಿಯಾಗಿದೆ. ಅತಿಯಾಗಿ ತಿನ್ನುವುದು ಅಥವಾ ಔಷಧಿ ತೆಗೆದುಕೊಳ್ಳುವುದರಿಂದ ನಿಮಗೆ ಹೊಟ್ಟೆಯ ತೊಂದರೆ ಇದ್ದರೂ, ಯೋಗವನ್ನು ಅಭ್ಯಾಸ ಮಾಡುವುದು ಎಲ್ಲಾ ಸಂದರ್ಭಗಳಲ್ಲಿಯೂ ಪರಿಣಾಮಕಾರಿಯಾಗಿದೆ. ಅಂದಹಾಗೆ ಜೀರ್ಣಕಾರಿ ಸಮಸ್ಯೆಗಳಿಂದ ಪರಿಹಾರ ಸಿಗಲು ನೀವು ಮಾಡಬಹುದಾದ ಕೆಲವು ಸಾಮಾನ್ಯ ಯೋಗ ಭಂಗಿಗಳು ಇಲ್ಲಿವೆ ನೋಡಿ…

ಆನಂದ ಬಾಲಾಸನ

ಈ ಯೋಗವನ್ನು ಮಾಡುವ ವಿಧಾನ

ಹಂತ 1: ಮೊದಲಿಗೆ ನೀವು ಆರಾಮವಾಗಿ ಮಲಗಿ. ನಂತರ ನಿಮ್ಮ ಮೊಣಕಾಲುಗಳನ್ನು ಎದೆಯ ಹತ್ತಿರ ತಂದುಕೊಳ್ಳಿ.

ಹಂತ 2: ನಿಮ್ಮ ಪಾದಗಳ ದೊಡ್ಡ ಕಾಲ್ಬೆರಳುಗಳನ್ನು ನಿಮ್ಮ ಕೈಗಳಿಂದ ಹಿಡಿದು ನಿಮ್ಮ ಮೊಣಕಾಲುಗಳನ್ನು ಮುಂಡಕ್ಕಿಂತ ಸ್ವಲ್ಪ ಅಗಲವಾಗಿ ತೆರೆದು ಅವುಗಳನ್ನು ಬಗಲಿನ ಹತ್ತಿರ ತಂದುಕೊಳ್ಳಿ.

ಹಂತ 3: ನಿಮ್ಮ ಪಾದ ಮೊಣಕಾಲುಗಳ ಮೇಲೆ ಇರಬೇಕು ಮತ್ತು ನಿಮ್ಮ ಮೊಣಕಾಲು ನೆಲಕ್ಕೆ ಲಂಬವಾಗಿರಬೇಕು.

ಹಂತ 3:ನಿಮ್ಮ ಪಾದಗಳನ್ನು ನಿಧಾನವಾಗಿ ಮೇಲಕ್ಕೆ ಸರಿಸಿ ಮತ್ತು ಕೆಳಗೆ ಪ್ರತಿರೋಧವನ್ನು ರಚಿಸಿ.

ಪದ್ಮಾಸನ

ಈ ಯೋಗವನ್ನು ಮಾಡುವ ವಿಧಾನ

ಹಂತ 1: ಕಾಲನ್ನು ಮಡಚಿ ಚಾಪೆಯ ಮೇಲೆ ಕುಳಿತುಕೊಳ್ಳಿ (ಕಾಲುಗಳು ಒಂದರ ಮೇಲೊಂದು ಇರಲಿ) ಮತ್ತು ಬೆನ್ನುಮೂಳೆಯ ನೇರವಾಗಿರಲಿ.

ಹಂತ 2: ಈಗ ನಿಮ್ಮ ಎರಡೂ ಕೈಗಳಿಂದ ಜ್ಞಾನ ಮುದ್ರೆ ಮಾಡಿ (ನಿಮ್ಮ ಹೆಬ್ಬೆರಳನ್ನು ತೋರು ಬೆರಳಿಗೆ ಸೇರಿಸಿ ಸಣ್ಣ ವೃತ್ತ ಮಾಡಿ) ಅವುಗಳನ್ನು ನಿಮ್ಮ ಮೊಣಕಾಲುಗಳ ಮೇಲೆ ಇರಿಸಿ.

ಹಂತ 3: ಈ ಭಂಗಿಯಲ್ಲಿ ಕೆಲವು ನಿಮಿಷಗಳ ಕಾಲ ಇರಿ. ಈ ಸಮಯದಲ್ಲಿ ಉಸಿರು ಎಳೆದುಕೊಂಡು ಬಿಡುತ್ತಿರಿ. ಈ ಆಸನವನ್ನು ಮತ್ತೆ ಇನ್ನೊಂದು ಕಾಲಿನೊಂದಿಗೆ ಪುನರಾವರ್ತಿಸಿ.

ಸಲಭಾಸನ

ಈ ಯೋಗವನ್ನು ಮಾಡುವ ವಿಧಾನ

ಹಂತ 1: ನಿಮ್ಮ ಹೊಟ್ಟೆಯ ಮೇಲೆ ಮಲಗಿ. ನಿಮ್ಮ ಕೈಗಳನ್ನು ನಿಮ್ಮ ಪಕ್ಕದಲ್ಲಿ ಇಡಿ ಮತ್ತು ಕಾಲುಗಳನ್ನು ಸ್ಟ್ರೆಚ್ ಮಾಡಿ. ನಿಮ್ಮ ಪಾದಗಳ ದೊಡ್ಡ ಕಾಲ್ಬೆರಳುಗಳು ಒಟ್ಟಿಗೆ ಇರಬೇಕು.

ಹಂತ 2: ನಿಮ್ಮ ಹಿಂಬದಿಯ ಹಿಂದೆ ನಿಮ್ಮ ಎರಡೂ ಕೈಗಳನ್ನು ಹಿಡಿಯಿರಿ.

ಹಂತ 3: ಉಸಿರೆಳೆದುಕೊಳ್ಳಿ ಮತ್ತು ನಿಮ್ಮ ಎದೆಯನ್ನು ಮತ್ತು ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿ.

ಬಾಲಾಸನ

ಈ ಯೋಗವನ್ನು ಮಾಡುವ ವಿಧಾನ

ಹಂತ 1: ಯೋಗ ಚಾಪೆಯ ಮೇಲೆ ಕುಳಿತು ಮಂಡಿಯೂರಿ ಕುಳಿತುಕೊಳ್ಳಿ. ನಿಮ್ಮ ಕಾಲ್ಬೆರಳುಗಳು ಒಟ್ಟಿಗೆ ಇರುವಂತೆ ನೋಡಿಕೊಳ್ಳಿ. ಮೊಣಕಾಲುಗಳು ಪರಸ್ಪರ ಸ್ವಲ್ಪ ದೂರವಿರಲಿ.

ಹಂತ 2: ಉಸಿರು ಎಳೆದುಕೊಳ್ಳುತ್ತಾ ಅದೇ ಸಮಯದಲ್ಲಿ ನಿಮ್ಮ ಮುಂಡವನ್ನು ಮುಂದಕ್ಕೆ ಬಾಗಿಸಿ. ನಿಮ್ಮ ಹೊಟ್ಟೆ ತೊಡೆಯ ಮೇಲೆ ವಿಶ್ರಾಂತಿ ಮಾಡಲಿ.

ಹಂತ 3: ನಿಮ್ಮ ತಲೆ ಯೋಗ ಚಾಪೆಯನ್ನು ಸ್ಪರ್ಶಿಸಬೇಕು. ಈಗ ಚಾಪೆಯನ್ನು ಸ್ಪರ್ಶಿಸಲು ನಿಮ್ಮ ಎರಡೂ ಕೈಗಳನ್ನು ಮುಂದೆ ಸ್ಟ್ರೆಚ್ ಮಾಡಿ.

ಹಂತ 4: 4-5 ಬಾರಿ ಉಸಿರಾಡುತ್ತಾ ವಿರಾಮ ತೆಗೆದುಕೊಳ್ಳಿ. ನಂತರ ಆರಂಭಿಕ ಸ್ಥಾನಕ್ಕೆ ಹಿಂತಿರುಗಿ.

 ಉತ್ತನಾಸನ

ಈ ಯೋಗವನ್ನು ಮಾಡುವ ವಿಧಾನ

ಹಂತ 1: ಮೊದಲು ನೆಲದ ಮೇಲೆ ನಿಂತುಕೊಳ್ಳಿ.

ಹಂತ 2: ಉಸಿರೆಳೆದುಕೊಳ್ಳುತ್ತಾ, ನಿಮ್ಮ ಎರಡೂ ಕೈಗಳನ್ನು ಛಾವಣಿಯ ಕಡೆಗೆ ಮೇಲಕ್ಕೆ ಸ್ಟ್ರೆಚ್ ಮಾಡಿ.

ಹಂತ 3: ಉಸಿರು ಬಿಡುತ್ತಾ, ಕಾಲುಗಳ ಮೇಲೆ ಮುಂದಕ್ಕೆ ಬಾಗಲು ಸೊಂಟದಲ್ಲಿ ಹಿಂಜ್ ಮಾಡಿ. ನಿಮ್ಮ ಕೆಳಗಿನ ಬೆನ್ನಿನಿಂದ ಒತ್ತಡವನ್ನು ಕಡಿಮೆ ಮಾಡಲು ನಿಮ್ಮ ಮೊಣಕಾಲುಗಳನ್ನು ಸ್ವಲ್ಪ ಬಗ್ಗಿಸಬಹುದು.

ಹಂತ 4: ನಿಮ್ಮ ಕೈಗಳನ್ನು ಕೆಳಕ್ಕೆ ತಂದು ಕಣಕಾಲಿನ ಹಿ೦ಭಾಗದ ವಿರುದ್ಧ ಅಂಗೈಗಳನ್ನು ಒತ್ತಿ.

ಹಂತ 5: ಕೆಲವು ಸೆಕೆಂಡುಗಳ ಕಾಲ ವಿರಾಮ ತೆಗೆದುಕೊಳ್ಳಿ. ಮತ್ತೆ ನಂತರ ಉಸಿರಾಡಿ. ನಿಧಾನವಾಗಿ ನಿಮ್ಮ ಕೈಗಳನ್ನು ನಿಮ್ಮ ಸೊಂಟದ ಮೇಲೆ ಇರಿಸಿ. ನಿಮ್ಮ ಬಾಲ ಮೂಳೆ ಒತ್ತಿರಿ. ನಿಧಾನವಾಗಿ ಏರಲು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಸಂಕುಚಿತಗೊಳಿಸಿ.