ಮನೆ ರಾಷ್ಟ್ರೀಯ ಆಕ್ಸಿಜನ್ ಸಿಲಿಂಡರ್-ಮಾಸ್ಕ್​ ಧರಿಸಿ ದೆಹಲಿ ವಿಧಾನಸಭೆಗೆ ಬಂದ ಬಿಜೆಪಿ ಶಾಸಕರು

ಆಕ್ಸಿಜನ್ ಸಿಲಿಂಡರ್-ಮಾಸ್ಕ್​ ಧರಿಸಿ ದೆಹಲಿ ವಿಧಾನಸಭೆಗೆ ಬಂದ ಬಿಜೆಪಿ ಶಾಸಕರು

0

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ತೀವ್ರ ವಾಯುಮಾಲಿನ್ಯ ಸಮಸ್ಯೆಯನ್ನು ಜಗತ್ತಿಗೆ ಎತ್ತಿತೋರಿಸುವ ನಿಟ್ಟಿನಲ್ಲಿ ಸೋಮವಾರ ಭಾರತೀಯ ಜನತಾ ಪಕ್ಷದ ಶಾಸಕರು ಆಮ್ಲಜನಕ ಸಿಲಿಂಡರ್‌ ಮತ್ತು ಆಮ್ಲಜನಕ ಮಾಸ್ಕ್‌ ಧರಿಸಿ ದೆಹಲಿ ವಿಧಾನಸಭೆ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದರು.

ವಿಧಾನಸಭೆಯ 4ನೇ ಹಂತದ ಅಧಿವೇಶನವು ಇಂದು ಬೆಳಗ್ಗೆ 11 ಗಂಟೆಗೆ ಆರಂಭವಾಯಿತು.

ಸಿಲಿಂಡರ್ ಹೊರಗೆ ಇಡುವಂತೆ ಬಿಜೆಪಿ ಸದಸ್ಯರಿಗೆ ಸೂಚಿಸಿದ ಸ್ಪೀಕರ್ ರಾಮ ನಿವಾಸ್ ಗೋಯಲ್, ಇಷ್ಟು ಭದ್ರತೆ ನಡುವೆಯೂ ಆಮ್ಲಜನಕದ ಸಿಲಿಂಡರ್ ಅನ್ನು ಸದನಕ್ಕೆ ತಂದಿದ್ದು ಹೇಗೆ? ಎಂದು ಪ್ರಶ್ನಿಸಿದರು.

ಘಟನೆಯನ್ನು ಭದ್ರತಾ ಲೋಪ ಎಂದು ಪರಿಗಣಿಸಿದ ಸ್ಪೀಕರ್, ಭದ್ರತಾ ಸಿಬ್ಬಂದಿಯನ್ನು ತಮ್ಮ ಕೊಠಡಿಗೆ ಕರೆದು ಎಚ್ಚರಿಕೆ ನೀಡಿದ್ಧಾರೆ.

ಈ ಮಧ್ಯೆ, ಸರ್ಕಾರದ ಕಾರ್ಯವೈಖರಿಯಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹಸ್ತಕ್ಷೇಪ ಕುರಿತಾಗಿ ಎಎಪಿ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಸದನವನ್ನು 10 ನಿಮಿಷ ಮುಂದೂಡಲಾಗಿತ್ತು.

ಈ ಕುರಿತಂತೆ ನಿಲುವಳಿ ಮಂಡಿಸಿದ ಎಎಪಿ ಶಾಸಕ ಸೌರಭ್ ಭಾರದ್ವಾಜ್, ಮಕ್ಕಳ ಶಿಕ್ಷಣ ಮತ್ತು ಶಿಕ್ಷಕರ ತರಬೇತಿ ವಿಷಯದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು ಅಕ್ರಮವಾಗಿ ಹಸ್ತಕ್ಷೇಪ ಮಾಡುತ್ತಿದ್ದು, ತೊಡಕನ್ನು ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.