ಮನೆ ರಾಜಕೀಯ ಪ್ರಿಯಾಂಕಾ ಗಾಂಧಿ ನಾ ನಾಯಕಿ ಅಲ್ಲ, ನಾ ನಾಲಾಯಕಿ: ಡಾ.ಅಶ್ವತ್ಥನಾರಾಯಣ್ ವ್ಯಂಗ್ಯ

ಪ್ರಿಯಾಂಕಾ ಗಾಂಧಿ ನಾ ನಾಯಕಿ ಅಲ್ಲ, ನಾ ನಾಲಾಯಕಿ: ಡಾ.ಅಶ್ವತ್ಥನಾರಾಯಣ್ ವ್ಯಂಗ್ಯ

0

ಬೆಂಗಳೂರು(Bengaluru): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮ ನಾ ನಾಯಕಿ ಅಲ್ಲ, ನಾ ನಾಲಾಯಕಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ್ ವ್ಯಂಗ್ಯವಾಡಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಇಡೀ ದೇಶದಲ್ಲಿ ಕಾಂಗ್ರೆಸ್ ಅಪ್ರಸ್ತುತ ಪಕ್ಷವಾಗಿದ್ದು, ಅವರು ಏನೇ ಮಾಡಿದರೂ ಉತ್ತರ ಪ್ರದೇಶ ರೀತಿಯ ಫಲಿತಾಂಶವೇ ಅವರಿಗೆ ಸಿಗಲಿದೆ ಎಂದಿದ್ದಾರೆ.

ಉತ್ತರ ಪ್ರದೇಶದ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿ ರಾಜ್ಯ ಪ್ರವಾಸ ನಡೆಸಿ ಅವಿರತವಾಗಿ ಪ್ರಯತ್ನ ಮಾಡಿದರೂ ಏನು ಪ್ರತಿಫಲ ತಂದುಕೊಂಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅಲ್ಲಿ ಅವರು ಸಿಂಗಲ್ ಡಿಜಿಟ್ ಗೂ ಬರಲಿಲ್ಲ. ಅವರು ಇಲ್ಲಿ ಬಂದು ಏನು ಮಾಡುತ್ತಾರೆ. ಅವರು ಕೂಡ ಇಲ್ಲಿರುವ ನಮ್ಮ ಸ್ನೇಹಿತರ ಜೊತೆ ಸೇರಿಕೊಳ್ಳಲಿದ್ದಾರೆ ಅಷ್ಟೆ. ಇಡೀ ದೇಶದಲ್ಲಿ ಎಲ್ಲಾ ಕಡೆ ಕಾಂಗ್ರೆಸ್ ಸೋಲುತ್ತಿದೆ. ಸಂಪೂರ್ಣವಾಗಿ ಕಾಂಗ್ರೆಸ್ ಅಪ್ರಸ್ತುತ ಪಕ್ಷವಾಗಿದೆ. ಜನ ಯಾವ ರೀತಿಯಿಂದಲೂ ಅವರನ್ನು ಎದುರು ನೋಡುತ್ತಿಲ್ಲ, ಅವರಿಗೆ ಸ್ಪಷ್ಟತೆ ಇಲ್ಲ. ದೇಶ ಮೊದಲು, ದೇಶದ ಶ್ರೇಯೋಭಿವೃದ್ಧಿ ಮೊದಲು ಎನ್ನುವುದು ಅವರಿಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಭಾರತ್ ತೋಡೋ ಜೊತೆಗೆ ಕೈಜೋಡಿಸಿಕೊಂಡು ಭಾರತ್ ಜೋಡೋ ಕಾರ್ಯಕ್ರಮ ಮಾಡಲು ಹೊರಟಿರುವ ಇವರು ನಾ ನಾಯಕಿಯಲ್ಲ, ನಾನು ನಾಲಾಯಕರು ಎನ್ನುವ ಕಾರ್ಯಕ್ರಮ ಅದು. ಹಾಗಾಗಿ ಇಂತಹ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರ ಭಾಗವಹಿಸುತ್ತಿದ್ದಾರೆ. ಇವರು ಏನು ಮಾಡಿದರೂ ಯಾವುದೇ ಪ್ರಯೋಜನ ಇಲ್ಲ ಉತ್ತರ ಪ್ರದೇಶದಲ್ಲಿ ಇವರನ್ನು ಯಾವ ರೀತಿ ಜನ ಆಶೀರ್ವಾದ ಮಾಡಿದ್ದಾರೆ. ಸಂಪೂರ್ಣವಾಗಿ ಇವರನ್ನು ತಿರಸ್ಕಾರ ಮಾಡಿದ್ದಾರೆ ಇಲ್ಲಿಯೂ ಅದೇ ರೀತಿ ಜನ ಕಾಂಗ್ರೆಸ್ ಅನ್ನು ತಿರಸ್ಕಾರ ಮಾಡಲಿದ್ದಾರೆ ಎಂದರು.

ಯತ್ನಾಳ್ ವಿರುದ್ಧ ಸೂಕ್ತ ಸಮಯದಲ್ಲಿ ಕ್ರಮ:

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ನಾಯಕರು ಮತ್ತು ಸಚಿವರ ವಿರುದ್ಧ ಬಳಸುತ್ತಿರುವ ಪದಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ಇದ್ದು, ಸೂಕ್ತ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಿದೆ. ನಮ್ಮ ಪಕ್ಷದಲ್ಲಿ ಪಕ್ಷವೇ ಮುಖ್ಯ. ಪಕ್ಷಕ್ಕಿಂತ ಮೇಲೆ ಯಾರೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸಚಿವ ಮುರುಗೇಶ್ ನಿರಾಣಿ ವಿರುದ್ಧ ಯತ್ನಾಳ್ ಹೇಳಿಕೆ ನೀಡುತ್ತಿದ್ದರೂ ಪಕ್ಷ ಕ್ರಮ ಕೈಗೊಳ್ಳದಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, ಎಲ್ಲದಕ್ಕೂ ಕಾಲವಿದೆ. ಜನರೇ ಎಲ್ಲವನ್ನೂ ತೀರ್ಮಾನ ಮಾಡಲಿದ್ದಾರೆ. ಪಕ್ಷವು ತೀರ್ಮಾನ ಮಾಡಲಿದೆ. ಇದಕ್ಕೆಲ್ಲ ಉತ್ತರ ಕೊಡಲು ಸಾಧ್ಯವಿಲ್ಲ. ಸರ್ಕಾರದ ಕೆಲಸಗಳು ಅಭಿವೃದ್ಧಿ ಕಾರ್ಯಗಳು ಸಮಸ್ಯೆಗಳ ಬಗ್ಗೆ ಉತ್ತರ ಕೊಡಬಹುದು. ಆದರೆ ಯತ್ನಾಳ್ ಬಗ್ಗೆ ಯಾಕೆ ಇಷ್ಟು ಆಸಕ್ತಿ ಎಂದರು.

ಬಿಜೆಪಿಯಲ್ಲಿ ಪಕ್ಷವೇ ಎಲ್ಲಾ, ಪಕ್ಷಕ್ಕಿಂತ ಮೇಲೆ ಯಾರು ಹೋಗಲು ಸಾಧ್ಯವಿಲ್ಲ. ಪಕ್ಷದ ಶಿಸ್ತನ್ನು ಮೀರಿದವರು ಅದರದ್ದೇ ಆದ ಪರಿಸ್ಥಿತಿಯನ್ನು ಎದುರಿಸಲಿದ್ದಾರೆ. ಈಗಾಗಲೇ ಪಕ್ಷ ಅಂಥವರಿಗೆ ಜಾಗವನ್ನು ತೋರಿಸಿದೆ ಅಂತವರು ಎಲ್ಲಿರಲಿದ್ದಾರೆ ಎಂದು ತೋರಿಸಿದೆ. ಯತ್ನಾಳ್ ವಿಚಾರದಲ್ಲಿಯೂ ಪರಿಣಾಮವನ್ನು ಎದುರಿಸಲಿದ್ದಾರೆ. ಪಕ್ಷದಲ್ಲಿ ಪಕ್ಷದ ಚೌಕಟ್ಟಿನಲ್ಲಿ ಮಾತ್ರ ನಡೆಯಬೇಕು. ಮನ್ಸಸ್ಸಿಗೆ ಬಂದಂತೆ ನಡೆಯಲು ಸಾಧ್ಯವಿಲ್ಲ. ಟಿಕೆಟ್ ನೀಡುವಾಗ ಎಲ್ಲವನ್ನೂ ಪರಿಗಣಿಸಲಾಗುತ್ತದೆ ಎಂದರು.