ಮನೆ ತಂತ್ರಜ್ಞಾನ ಗೀಸರ್ ಬಳಸುವಾಗ ಇರಲಿ ಎಚ್ಚರ

ಗೀಸರ್ ಬಳಸುವಾಗ ಇರಲಿ ಎಚ್ಚರ

0

ಬೆಂಗಳೂರು :  ಚಳಿಗಾಲದಲ್ಲಿ ವಾಟರ್ ಹೀಟರ್’ಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲಾ ಕೆಲಸಗಳಿಗೂ ಬಿಸಿ ನೀರಿನ ಬಳಕೆಯನ್ನೇ ಮಾಡಲಾಗುತ್ತದೆ.  ಈ ಪರಿಸ್ಥಿತಿಯಲ್ಲಿ ಗೀಸರ್ ಬಳಕೆ ಕೂಡಾ ಹೆಚ್ಚೇ. ಈ ಹಿನ್ನೆಲೆಯಲ್ಲಿ ಯಾವ ರೀತಿಯ ವಾಟರ್ ಹೀಟರ್  ಖರೀದಿಸಬೇಕು ಮತ್ತು ಗೀಸರ್’ಗಳಿಂದ ಸುರಕ್ಷಿತವಾಗಿರುವುದು ಹೇಗೆ  ಎನ್ನುವುದನ್ನು ತಿಳಿದುಕೊಂಡಿರುವುದು ಕೂಡಾ ಬಹಳ ಮುಖ್ಯ.

ಗೀಸರ್ ಖರೀದಿಸುವಾಗ ಅದರ ಸುರಕ್ಷತಾ ವೈಶಿಷ್ಟ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ. ಸುರಕ್ಷತಾ ವೈಶಿಷ್ಟ್ಯಗಳು ಯಾವುವೆಂದರೆ ಲೀಕೆಜ್ ಆಗುತ್ತಿದ್ದರೆ, ವಿದ್ಯುತ್ ಸರಬರಾಜು ಸಂಪೂರ್ಣವಾಗಿ ನಿಲ್ಲಬೇಕು. ಪ್ಲಗ್ ಗೆ ನೀರು ಪ್ರವೇಶಿಸಿದ ನಂತರವೂ ಯಾವುದೇ ಆಘಾತವಾಗಬಾರದು. ವಾಟರ್ ಹೀಟರ್ ಉತ್ತಮ ವಸ್ತುಗಳಿಂದ ಮಾಡಲ್ಪಟ್ಟಿತಬೇಕು. ಅಲ್ಲದೆ, ಬಹು ಮುಖ್ಯವಾಗಿ ವಾಟರ್ ಹೀಟರ್ ಶಾಕ್ ಪ್ರೂಫ್ ಆಗಿರಬೇಕು. ಈ ಎಲ್ಲಾ ಸುರಕ್ಷತಾ ವೈಶಿಷ್ಟ್ಯಗಳಿದ್ದರೆ ಸ್ಪೋಟದಂಥಹ ಸಮಸ್ಯೆಯನ್ನು ತಡೆಯಬಹುದು.

ನಿಮ್ಮ ಬಾತ್ ರೂಂ ನಲ್ಲಿ ಯಾವ ಗೀಸರ್ ಇರಬೇಕು? :

ಸಾಮಾನ್ಯವಾಗಿ ಜನರು ಅಗ್ಗದ ಬೆಲೆಗೆ ಸಿಗುತ್ತದೆ ಎನ್ನುವ ಕಾರಣಕ್ಕೆ ಸಣ್ಣ ಗಾತ್ರದ ಹೀಟರ್ ಗಳನ್ನು ಖರೀದಿಸುತ್ತಾರೆ. ಆದರೆ ಈ ಗೀಸರ್ ಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಬಿಸಿ ನೀರು ಸಿಗುವುದಿಲ್ಲ. ಈ ಹಿನ್ನೆಲೆಯಲ್ಲಿ ವಾಟರ್ ಹೀಟರ್ ಖರೀದಿಸುವಾಗ, ಯಾವ ಉದ್ದೇಶಕ್ಕಾಗಿ ವಾಟರ್ ಹೀಟರ್ ಖರೀದಿಸುತ್ತಿದ್ದೀರಿ  ಎನ್ನುವುದು  ಸ್ಪಷ್ಟವಾಗಿರಲಿ. ಅಡುಗೆಮನೆಗೆ ಗೀಸರ್ ಹಾಕುವುದಾದರೆ 1 ಲೀಟರ್, 3 ಲೀಟರ್ ಮತ್ತು 6 ಲೀಟರ್ ಗೀಸರ್ ಉತ್ತಮ ಆಯ್ಕೆ. 10 ಲೀಟರ್ – 35 ಲೀಟರ್ ಗೀಸರ್’ಗಳನ್ನು ಸ್ನಾನಗೃಹಗಳಿಗೆ  ಅಳವಡಿಸಿಕೊಳ್ಳಿ.

ಖರೀದಿ ಮೊದಲು ಪ್ರಾಡಕ್ಟ್ ರೇಟಿಂಗ್ ನೋಡಿಕೊಳ್ಳಿ :

ಹೊಸ ತಂತ್ರಜ್ಞಾನದ ವಾಟರ್ ಹೀಟರ್ ಹೆಚ್ಚು ವಿದ್ಯುತ್ ಬಳಸುತ್ತದೆ.  ಹೊಸ ವಾಟರ್ ಹೀಟರ್ ಖರೀದಿಸುವುದಾದರೆ ಸ್ಟಾರ್ ರೇಟಿಂಗ್ ಬಗ್ಗೆ ಗಮನ ಹರಿಸಿ. ಇದರಿಂದ ವಿದ್ಯುತ್ ಉಳಿಸಲು ಸಹಾಯವಾಗುತ್ತದೆ. 5 ಸ್ಟಾರ್ ರೇಟೆಡ್ ಗೀಸರ್’ಗಳು 25 ಪ್ರತಿಶತದಷ್ಟು ವಿದ್ಯುತ್ ಅನ್ನು ಉಳಿಸುತ್ತವೆ.

ಖರೀದಿ ನಂತರದ ಸರ್ವಿಸ್  :

ಅನೇಕ ಜನರು ಗೀಸರ್ ಅನ್ನು ಖರೀದಿಸುತ್ತಾರೆ. ಆದರೆ ಕಂಪನಿ ಅದರ ಸರ್ವಿಸ್  ಮಾಡುತ್ತದೆಯೇ ಇಲ್ಲವೇ ಎನುವುದನ್ನು ತಿಳಿದುಕೊಳ್ಳುವ ಗೋಜಿಗೆ ಹೋಗುವುದಿಲ್ಲ. ಕಂಪನಿಯು ಎಷ್ಟು ವರ್ಷಗಳ ವಾರಂಟಿಯನ್ನು ನೀಡುತ್ತದೆ ಎನ್ನುವುದನ್ನು ಕೂಡಾ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ವಾಟರ್ ಹೀಟರ್’ಗಳ ಮೇಲೆ ದೀರ್ಘಾವಧಿಯ ವಾರಂಟಿ ನೀಡುವ ಹೆಸರಾಂತ ಬ್ರ್ಯಾಂಡ್’ಗಳನ್ನು ಮಾತ್ರ ಆಯ್ಕೆಮಾಡಿಕೊಳ್ಳಿ .