ಮನೆ ಅಪರಾಧ ನಕಲಿ ಬಿಲ್ ಸೃಷ್ಠಿಸಿ ಅಕ್ರಮ: ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲು

ನಕಲಿ ಬಿಲ್ ಸೃಷ್ಠಿಸಿ ಅಕ್ರಮ: ಮೈಸೂರು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ದೂರು ದಾಖಲು

0

ಮೈಸೂರು(Mysuru): ಮೈಸೂರಿನ  ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇದರ ಅಧೀನ ಕಚೇರಿಗಳಲ್ಲಿ 2010 ರಿಂದ 2022 ರವರೆಗೆ ಮೆಡಿಕಲ್ ಬಿಲ್ ಮರು ಪಾವತಿಗಾಗಿ , ಹೆಚ್ಚುವರಿ /ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಅಕ್ರಮವೆಸಗಿದ್ದು,  ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಹೋರಾಟಗಾರ ರವೀಂದ್ರ ಎಂ. ದೂರು ನೀಡಿದ್ದಾರೆ.

ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ, ಲೋಕಾಯುಕ್ತಕ್ಕೆ , ಮೈಸೂರು ಜಿಲ್ಲಾಧಿಕಾರಿಗಳಿಗೆ, ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಮೈಸೂರಿನ , ಜಿಲ್ಲಾ ಮತ್ತು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಇದರ ಅಧೀನ ಕಚೇರಿಗಳಲ್ಲಿ  ಅಧಿಕಾರಿಗಳು ಮತ್ತು ಸಿಬ್ಬಂದಿಗಳು 2010 ರಿಂದ 2022 ರವರೆಗೆ “ಮೆಡಿಕಲ್ ಬಿಲ್ ಮರು ಪಾವತಿಗಾಗಿ , ಹೆಚ್ಚುವರಿ /ನಕಲಿ ಬಿಲ್ ಗಳನ್ನು ಸೃಷ್ಟಿಸಿ, ಮಾನ್ಯವಲ್ಲದ ಬಿಲ್ಲುಗಳನ್ನು ಸಹ ಮರುಪಾವತಿಗೊಳಿಸಿ, ಇದರೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಹಿಯನ್ನು ನಕಲು ಮಾಡಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.

ಈ ಅಧಿಕಾರಿಗಳ ಹಾಗೂ ಸದರಿ ಅಕ್ರಮಕ್ಕೆ/ಭ್ರಷ್ಟಾಚಾರಕ್ಕೆ ಪರೋಕ್ಷ ಬೆಂಬಲ ನೀಡುತ್ತಿರುವ ಮೈಸೂರಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಬೇಕು. ಹಾಗೆಯೇ   2010 ರಿಂದ 2022 ರವರೆಗೆ ಮರುಪಾವತಿಯಾಗಿರುವ “ಮೆಡಿಕಲ್ ಬಿಲ್” ಅನ್ನು ತನಿಖೆಗೆ ಒಳಪಡಿಸಿ ಸರ್ಕಾರಕ್ಕೆ ನಷ್ಟವಾಗಿರುವ ಹಣವನ್ನು ಸದರಿ ಅಧಿಕಾರಿಗಳಿಂದ ಮುಟ್ಟುಗೋಲು ಹಾಕಿಕೊಳ್ಳುವುದರ ಸಹಿತ ಆರೋಪಿತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.