ರೈಲ್ ಇಂಡಿಯಾ ತಾಂತ್ರಿಕ ಮತ್ತು ಆರ್ಥಿಕ ಸೇವೆಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಒಟ್ಟು 11 ಪ್ಲ್ಯಾನಿಂಗ್ ಎಂಜಿನಿಯರ್, ಸೇಫ್ಟಿ & ಹೆಲ್ತ್ ಎಕ್ಸ್ಪರ್ಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಈ ಕೂಡಲೇ ಅರ್ಜಿ ಹಾಕಿ. ರೈಲ್ವೆ ಇಲಾಖೆಯ ಕೆಲಸ ಪಡೆಯಬೇಕು ಎಂದು ಹಂಬಲಿಸುತ್ತಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಅರ್ಜಿ ಹಾಕಲು ಜನವರಿ 22, 2023 ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ ಮತ್ತು ಆಫ್ಲೈನ್ ಎರಡರ ಮೂಲಕವೂ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಮಾಹಿತಿ:
ಕ್ವಾಲಿಟಿ ಕಂಟ್ರೋಲ್/ ಮೆಟಿರಿಯಲ್ ಎಂಜಿನಿಯರ್- 3
ಸೇಫ್ಟಿ & ಹೆಲ್ತ್ ಎಕ್ಸ್ಪರ್ಟ್- 6
ಪ್ಲ್ಯಾನಿಂಗ್ ಎಂಜಿನಿಯರ್- 2
ವಿದ್ಯಾರ್ಹತೆ:
ಕ್ವಾಲಿಟಿ ಕಂಟ್ರೋಲ್/ ಮೆಟಿರಿಯಲ್ ಎಂಜಿನಿಯರ್- ಸಿವಿಲ್ ಎಂಜಿನಿಯರಿಂಗ್’ನಲ್ಲಿ ಪದವಿ
ಸೇಫ್ಟಿ & ಹೆಲ್ತ್ ಎಕ್ಸ್ಪರ್ಟ್- ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ
ಪ್ಲ್ಯಾನಿಂಗ್ ಎಂಜಿನಿಯರ್- ಎಂಜಿನಿಯರಿಂಗ್, ಎಂಎ, ಎಂಎಸ್ಸಿ
ವಯೋಮಿತಿ:
ರೈಲ್ ಇಂಡಿಯಾ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ ಗರಿಷ್ಠ 63 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ವೇತನ:
ನಿಗದಿಪಡಿಸಿಲ್ಲ.
ಉದ್ಯೋಗದ ಸ್ಥಳ:
ಬೆಂಗಳೂರು
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ
ಪೋಸ್ಟ್ ಮೂಲಕ ಅರ್ಜಿ ಹಾಕಲು ಈ ಮಾರ್ಗ ಅನುಸರಿಸಿ: ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಿ.
(ಬಿ.ಕೆ. ನಂದಾ)
ಜಂಟಿ ಜನರಲ್ ಮ್ಯಾನೇಜರ್/HR
RITES ಲಿಮಿಟೆಡ್. (ಶಿಖರ್)
ಪ್ಲಾಟ್ ನಂ.1
ಸೆಕ್ಟರ್- 29
ಗುರ್ಗಾಂವ್ – 122001
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 13/01/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜನವರಿ 22, 2023