ಮನೆ ಕಾನೂನು ಯೋಗಕ್ಷೇಮ ನೋಡಿಕೊಳ್ಳದ ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಕೋರ್ಟ್.!

ಯೋಗಕ್ಷೇಮ ನೋಡಿಕೊಳ್ಳದ ಮಗಳಿಂದ ಪೋಷಕರಿಗೆ ಆಸ್ತಿ ವಾಪಸ್ ಕೊಡಿಸಿದ ಕೋರ್ಟ್.!

0

ಕೊಡಗು: ಕೊಡಗು ಜಿಲ್ಲೆಯ ಉಪವಿಭಾಗಧಿಕಾರಿ ನ್ಯಾಯಾಲಯವು ತಂದೆ, ತಾಯಿಯನ್ನು ನೋಡಿಕೊಳ್ಳದ ಮಗಳ ಹೆಸರಿನಲ್ಲಿದ್ದ ಆಸ್ತಿಯನ್ನು ತಾಯಿಗೆ ವಾಪಸ್ ಕೊಡಿಸಿದೆ.

ಕುಶಾಲನಗರ ತಾಲ್ಲೂಕಿನ ಬೊಳ್ಳೂರು ಗ್ರಾಮದ ಬಿ.ಎಸ್.ಜಾನಕಿ ಅವರಿಗೆ ಮೂವರು ಪುತ್ರಿಯರು. ಚೆನ್ನಾಗಿ ನೋಡಿಕೊಳ್ತೆನೆ ಎಂದು ಭರವಸೆ ನೀಡಿದ್ದರಿಂದ ತಮ್ಮ ಹೆಸರಿನಲ್ಲಿದ್ದ 6 ಗುಂಟೆ ಭೂಮಿಯನ್ನು ಎರಡನೇ ಪುತ್ರಿ ಜಯಲಕ್ಷ್ಮೀ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದರು.

ಆಸ್ತಿ ತನ್ನ ಹೆಸರಿಗೆ ಬಂದ ನಂತರ ಪುತ್ರಿಯು ತಮ್ಮ ಯೋಗಕ್ಷೇಮ ನೋಡಿಕೊಳ್ಳುತ್ತಿಲ್ಲ, ಸಂಪೂರ್ಣ ನಿರ್ಲಕ್ಷಿಸಿದ್ದಾಳೆ ಎಂದು ಜಾನಕಿ ಜಿಲ್ಲಾ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗೆ (District Senior Citizen Empowerment Department) ಅರ್ಜಿ ಸಲ್ಲಿಸಿದ್ದರು. ಜೊತೆಗೆ ದಾನಪತ್ರ ರದ್ದುಗೊಳಿಸಿ ಆಸ್ತಿ ವಾಪಸ್ ಕೊಡಿಸುವಂತೆ ಮನವಿ ಮಾಡಿದ್ದರು.

ಇಲಾಖೆಯು ಅವರ ಅರ್ಜಿಯನ್ನು ಉಪವಿಭಾಗಧಿಕಾರಿಗಳ ನ್ಯಾಯಾಲಯಕ್ಕೆ ವರ್ಗಾಯಿಸಿ ಸೂಕ್ತ ಕ್ರಮಕ್ಕೆ ಮನವಿ ಮಾಡಿತ್ತು. ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್ ‘ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007ರ’ ಅಡಿ ದಾನಪತ್ರ ರದ್ದುಗೊಳಿಸಿ, ಅಸ್ತಿಯನ್ನು ತಾಯಿ ಬಿ.ಎಸ್.ಜಾನಕಿ ಅವರ ಹೆಸರಿಗೆ ವರ್ಗಾಯಿಸುವಂತೆ ಆದೇಶ ನೀಡಿದರು.

ಈ ಮೂಲಕ ಪೋಷಕರಿಂದ ಆಸ್ತಿ ಪಡೆದು ಬಳಿಕ ಕಡೆಗಣಿಸುವ ಮಕ್ಕಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.