ಮೈಸೂರು(Mysuru): ಬಿಜೆಪಿ ಮೈಸೂರು ನಗರ ಯುವ ಮೋರ್ಚಾ ಹಾಗು ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಬನ್ನಿಮಂಟಪದಲ್ಲಿರುವ ಸೆಂಟ್ ಫಿಲೋಮಿನಾ ಕಾಲೇಜಿನ 250ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ ಸದಸ್ಯತ್ವ ಮಾಡಿಸಲಾಯಿತು.
8000090009 ನಂಬರ್’ಗೆ ಮಿಸ್ಡ್ ಕಾಲ್ ಕೊಡಿಸುವುದರ ಮೂಲಕ ಬಿಜೆಪಿಯ ಸದಸ್ಯತ್ವ ನೋಂದಣಿ ಮಾಡಿಸಿ ಪಕ್ಷದ ಯೋಜನೆ ಹಾಗೂ ಸಾಧನೆ ಮಾಡಿರುವ ಮಾಹಿತಿ ಕರಪತ್ರವನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ನಗರ ಯುವ ಮೋರ್ಚಾ ಅಧ್ಯಕ್ಷ ಎಂ ಜೆ ಕಿರಣ್ ಗೌಡ, ರಾಜ್ಯದ ಆದೇಶದ ಮೇರೆಗೆ ವಿಜಯ ಸಂಕಲ್ಪ ಅಭಿಯಾನ ಜನವರಿ 21ರಿಂದ 29ರವರೆಗೆ ರಾಜ್ಯದ್ಯಂತ ಅಭಿಯಾನವನ್ನು ಬೂತ್ ಮಟ್ಟದಲ್ಲಿ ಆಯೋಜನೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ಈಗಾಗಲೇ ಹೆಚ್ಚಿನ ಆಸಕ್ತಿ ಇದ್ದು, ಯುವಕ ಯುವತಿಯರು ಖುದ್ದಾಗಿ ಬಂದು ಸದಸ್ಯರಾಗುವು ಮುಖಾಂತರ, ಅಭೂತಪೂರ್ವ ಬೆಂಬಲವನ್ನು ಸೂಚಿಸಿದ್ದಾರೆ. ತಮ್ಮ ಸ್ನೇಹಿತರನ್ನು ಸಹ ಬಿಜೆಪಿ ಸದಸ್ಯರನ್ನಾಗಿ ಮಾಡುವುದಾಗಿಯೂ ತಿಳಿಸಿದ್ದಾರೆ. ಇದೇ ರೀತಿ ಮೈಸೂರಿನ ನಾಲ್ಕು ಕ್ಷೇತ್ರಗಳಲ್ಲಿಯೂ ಸಹ ಅಭಿಯಾನವನ್ನು ಮಾಡಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಕಮಲ ಅರಳಿಸುವುದಾಗಿ ಸಂಘಟನೆಯನ್ನು ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಭರತ್ ಹಾಗೂ ಸಂತೋಷ್ ಕುಮಾರ್, ಉಪಾಧ್ಯಕ್ಷ ಪುನೀತ್, ಕಾರ್ಯದರ್ಶಿ ರಾಘವೇಂದ್ರ, ಸ್ಥಳೀಯ ಮುಖಂಡರಾದ ಬನ್ನಿಮಂಟಪ ಮಹದೇವು ಹಾಗೂ ಕಾರ್ಯಕರ್ತರಾದ ಮನೋಜ್, ಅರುಣ್, ಹರೀಶ್ ಉಪಸ್ಥಿತರಿದ್ದರು.