ಮನೆ ತಂತ್ರಜ್ಞಾನ ಭಾರತಕ್ಕೆ ಬರುತ್ತಿದೆ ಕೋಕಾ-ಕೋಲಾ ಕಂಪನಿಯ ಹೊಸ ‘Cola phone’ ಸ್ಮಾರ್ಟ್’ಫೋನ್!

ಭಾರತಕ್ಕೆ ಬರುತ್ತಿದೆ ಕೋಕಾ-ಕೋಲಾ ಕಂಪನಿಯ ಹೊಸ ‘Cola phone’ ಸ್ಮಾರ್ಟ್’ಫೋನ್!

0

ಕೋಕಾ-ಕೋಲಾ ಕಂಪೆನಿ ದೇಶದಲ್ಲಿ ತನ್ನ ಹೊಸದೊಂದು ಸ್ಮಾರ್ಟ್ಫೋನ್ ಪರಿಚಯಿಸಲು ಮುಂದಾಗುವ ಮೂಲಕ ಭಾರೀ ಆಶ್ಚರ್ಯ ಮೂಡಿಸಿದೆ.!

ಹೌದು, ಶೀಘ್ರದಲ್ಲೇ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ‘Cola phone’ ಎಂಬ ಸ್ಮಾರ್ಟ್’ಫೋನ್ ಒಂದು ದೇಶದ ಮಾರುಕಟ್ಟೆಗೆ ಬಿಡುಗಡೆಯಾಗುವ ಸೂಚನೆ ದೊರೆತಿದ್ದು, ಪ್ರಸಿದ್ಧ ಸ್ಮಾರ್ಟ್’ಫೋನ್ ಬ್ರ್ಯಾಂಡ್ ಒಂದರ ಸಹಯೋಗದಲ್ಲಿ ಕೋಕಾ-ಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ಈ ‘Cola phone’ ಸ್ಮಾರ್ಟ್’ಫೋನ್ ದೇಶದಲ್ಲಿ ಬಿಡುಗಡೆಯಾಗಲಿದೆ ಎಂದು ಪ್ರಮುಖ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಇತ್ತ ಜನಪ್ರಿಯ ಟಿಪ್’ಸ್ಟಾರ್ ಮುಕುಲ್ ಶರ್ಮಾ ಅವರು ತಮ್ಮ ಟ್ವೀಟ್ ಒಂದರಲ್ಲಿ ಈ ಹೊಸ Cola phone ಸ್ಮಾರ್ಟ್’ಫೋನ್ ಚಿತ್ರಗಳನ್ನು ಪ್ರಕಟಿಸಿರುವುದರಿಂದ ಈ ಸುದ್ದಿಗೆ ಮತ್ತಷ್ಟು ಬೆರಗು ಬಂದಿದೆ.

ಪ್ರಮುಖ ಟೆಕ್ ಮಾಧ್ಯಮ ವರದಿಗಳ ಪ್ರಕಾರ, ಕೋಕಕೋಲಾ ಕಂಪೆನಿಯ ಬ್ರ್ಯಾಂಡ್ ಅಡಿಯಲ್ಲಿ ‘Cola phone’ ಎಂಬ ಸ್ಮಾರ್ಟ್’ಫೋನ್ ಈ ತ್ರೈಮಾಸಿಕದಲ್ಲಿ (ಮಾರ್ಚ್ ವೇಳೆಗೆ) ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಕೋಕಾ-ಕೋಲಾ ಈ ಹೊಸ ಸ್ಮಾರ್ಟ್ಫೋನ್ ತಯಾರಿಕೆಗಾಗಿ ಪ್ರಸಿದ್ಧ ಸ್ಮಾರ್ಟ್ಫೋನ್ ಬ್ರಾಂಡ್’ನೊಂದಿಗೆ ಸಹಯೋಗ ಹೊಂದಿದೆ ಎಂದು ಹೇಳಿವೆ.

ಇತ್ತ ಟಿಪ್’ಸ್ಟಾರ್ ಮುಕುಲ್ ಶರ್ಮಾ ಅವರು ಕೋಕಕೋಲಾದ ‘Cola phone’ ಸ್ಮಾರ್ಟ್’ಫೋನಿನ ವಿನ್ಯಾಸವನ್ನು ಶೇರ್ ಮಾಡಿದ್ದು, ಈ ಸ್ಮಾರ್ಟ್’ಪೊನ್ ಹಿಂಭಾಗದ ಫಲಕದಲ್ಲಿ ಬಲಭಾಗದಲ್ಲಿ ಕೋಕಾ-ಕೋಲಾ ಲೋಗೋ ಇರುವ ದೊಡ್ಡ ಫಾಂಟ್ ಮತ್ತು ಕಂಪೆನಿಯ ಜನಪ್ರಿಯ ಕೆಂಪು ಬಣ್ಣದಲ್ಲಿ ಬಿಡುಗಡೆಯಾಗುವ ಬಗ್ಗೆ ಸೂಚಿಸಿದ್ದಾರೆ.

ಆದರೆ, ಕೋಕಾ-ಕೋಲಾ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಈ ಸ್ಮಾರ್ಟ್’ಫೋನ್ ಯಾವುದು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ವದಂತಿಗಳಂತೆ, ಈ ಇದು ಇತ್ತೀಚಿನ Realme 10 4G ಸ್ಮಾರ್ಟ್’ಫೋನ್ ಆಗಿರಬಹುದು ಎಂದು ಹೇಳಲಾಗಿದೆ.

ಕೋಕಾ-ಕೋಲಾ ಬ್ರ್ಯಾಂಡ್ ಅಡಿಯಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್’ಫೋನ್ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲವಾದರೂ, ಇದು ಇತ್ತೀಚಿಗಷ್ಟೇ ದೇಶದಲ್ಲಿ ಬಿಡುಗಡೆಯಾಗಿರುವ Realme 10 4G ಸ್ಮಾರ್ಟ್’ಫೋನ್ ಆಗಿರಬಹುದು ಎಂಬ ಹಲವು ಊಹಾಪೋಹಗಳು ಹರಿದಾಡಿವೆ.

ದೇಶದಲ್ಲಿ ಇದೇ ಜನವರಿ 9 ರಂದು Realme 10 4G ಸ್ಮಾರ್ಟ್’ಫೋನ್ ಬಜೆಟ್ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಆಕ್ಟಾ-ಕೋರ್ MediaTek Helio G99 SoC ಪ್ರೊಸೆಸರ್, 8GB LPDDR4x RAM, 33W SuperVOOC ಫಾಸ್ಟ್ ಚಾರ್ಜಿಂಗ್, 5,000mAh ಬ್ಯಾಟರಿ ಮತ್ತು 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೇರಿದಂತೆ ಹಲವಾರು ಪ್ರಮುಖ ವೈಶಿಷ್ಟ್ಯಗಳನ್ನು ಹೊತ್ತು ಈ Realme 10 ಸ್ಮಾರ್ಟ್’ಫೋನ್ ಎಂಟ್ರಿ ನೀಡಿದೆ.

Realme 10 ಸ್ಮಾರ್ಟ್’ಫೋನಿನ ವೈಶಿಷ್ಟ್ಯಗಳು

ನೂತನ Realme 10 ಸ್ಮಾರ್ಟ್’ಫೋನ್ 6.4-ಇಂಚಿನ ಫುಲ್-HD+ ಸೂಪರ್ AMOLED ಡಿಸ್’ಪ್ಲೇಯೊಂದಿಗೆ ಬಿಡುಗಡೆಯಾಗಿದೆ. ಈ ಡಿಸ್’ಪ್ಲೇಯು, 90Hz ರಿಫ್ರೆಶ್ ರೇಟ್, 360Hz ಟಚ್ ಸ್ಲಾಪಿಂಗ್ ರೇಟ್ ಮತ್ತು 1,000 nits ಗರಿಷ್ಠ ಬ್ರೈಟ್’ನೆಸ್ ವೈಶಿಷ್ಟ್ಯಗಳೊಂದಿಗೆ ಪ್ರದರ್ಶನವು ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಸಹ ಹೊಂದಿದೆ.

ಹುಡ್ ಅಡಿಯಲ್ಲಿ, ಇದು GB LPDDR4x RAM ಮತ್ತು 128GB UFS 2.2 ಮೆಮೊರಿಯೊಂದಿಗೆ ಜೋಡಿಸಲಾಗಿರುವ MediaTek Helio G99 SoC ಪ್ರೊಸೆಸರ್ ಹೊಂದಿದೆ. ಅಲ್ಲದೇ, ಮೈಕ್ರೋ SD ಕಾರ್ಡ್ ಮೂಲಕ ಫೋನಿನ ಮೆಮೊರಿಯನ್ನು 1TB ವರೆಗೆ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಇದೆ. ಇನ್ನು ಈ ಸ್ಮಾರ್ಟ್’ಫೋನ್ ಅಲ್ಟ್ರಾ ಬೂಮ್ ಸ್ಪೀಕರ್’ಗಳನ್ನು ಹೊಂದಿದ್ದು, 200 ಪ್ರತಿಶತ ವಾಲ್ಯೂಮ್’ನಲ್ಲಿ ಆಡಿಯೊವನ್ನು ಪ್ಲೇ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.

ಕ್ಯಾಮೆರಾ ವಿಭಾಗದಲ್ಲಿ, ನೂತನ Realme 10 ಸ್ಮಾರ್ಟ್’ಫೋನ್ 50-ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2-ಮೆಗಾಪಿಕ್ಸೆಲ್ ಮೊನೊಕ್ರೋಮ್ ಸಂವೇದಕವನ್ನು ಒಳಗೊಂಡಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಪ್ರೋಲೈಟ್ ಇಮೇಜಿಂಗ್ ಮತ್ತು ರಾತ್ರಿ ಛಾಯಾಗ್ರಹಣಕ್ಕಾಗಿ ಫ್ಲ್ಯಾಶ್ ನೈಟ್ ವ್ಯೂ ಅಲ್ಗಾರಿದಮ್ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.ಸೆಲ್ಫಿಗಳಿಗಾಗಿ, ಎಡ ಭಾಗದಲ್ಲಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಬ್ಯಾಟರಿ ವಿಭಾಗದಲ್ಲಿ, Realme 10 ಸ್ಮಾರ್ಟ್ಫೋನ್ 33W SuperVOOC ಫಾಸ್ಟ್ ಚಾರ್ಜಿಂಗ್’ಗೆ ಬೆಂಬಲದೊಂದಿಗೆ 5,000mAh ಬ್ಯಾಟರಿ ಹೊಂದಿದ್ದು, ಇದು 28 ನಿಮಿಷಗಳ ಚಾರ್ಜ್’ನೊಂದಿಗೆ 50 ಪ್ರತಿಶತದಷ್ಟು ಬ್ಯಾಕಪ್ ಒದಗಿಸುತ್ತದೆ ಎಂದು ಹೇಳಲಾಗುತ್ತದೆ. ಒಟ್ಟಾರೆಯಾಗಿ 390,000 ಪಾಯಿಂಟ್’ಗಳ AnTuTu ಕಾರ್ಯಕ್ಷಮತೆಯ ಸ್ಕೋರ್ ಇದೆ.

ದೇಶದಲ್ಲಿ ಬಿಡುಗಡೆಯಾಗಿರುವ Realme 10 4G ಸ್ಮಾರ್ಟ್’ಫೋನನ್ನು 12,999 ರೂ.ಗಳ ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ. Realme 10 4G ಸ್ಮಾರ್ಟ್ಫೋನಿನ ಮೂಲ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ 13,999 ರೂ. ಆದರೆ, ಇದನ್ನು ಬಿಡುಗಡೆಯ ಸಮಯದಲ್ಲಿ 1,000 ರೂ.ಗಳ ರಿಯಾಯಿತಿಯೊಂದಿಗೆ 12,999 ರೂ.ಗೆ ಮಾರಾಟ ಮಾಡಲಾಗುವುದು ಹಾಗೂ 8GB RAM + 128GB ಸ್ಟೋರೇಜ್ ಮಾದರಿ ಸಾಧನದ ಬೆಲೆ 16,999 ರೂ.ಗಳು ಎಂದು Realme ತಿಳಿಸಿದೆ.