ಮನೆ ರಾಜಕೀಯ ಮುಸ್ಲಿಮರನ್ನು ಓಲೈಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

ಮುಸ್ಲಿಮರನ್ನು ಓಲೈಸುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ

0

ಮೈಸೂರು(Mysuru): ‍ಮುಸ್ಲಿಮರನ್ನು ಬಿಜೆಪಿಯತ್ತ ಸೆಳೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಲ್ಲ. ಎಲ್ಲ ಸಮುದಾಯವನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಮುಸ್ಲಿಮರನ್ನು ಓಲೈಸುವ ಪ್ರಶ್ನೆಯೇ ಇಲ್ಲ ಎಂದರು.

ಮುಸ್ಲಿಮರಲ್ಲಿರುವ ಬಡವರಿಗೆ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು. ಆಗ, ಅವರೂ ದೇಶ ಕಟ್ಟಲು ಕೊಡುಗೆ ನೀಡಲು ಸಾಧ್ಯವಿದೆ ಎಂದಿದ್ದಾರಷ್ಟೆ ಎಂದರು.

ಬಿಜೆಪಿಗೆ ಮುಸ್ಲಿಮರ ಮತವೇ ಬೇಡ ಎಂದು ನಿಮ್ಮದೇ ಪಕ್ಷದ ಕೆಲವರು ಹೇಳುತ್ತಾರಲ್ಲಾ ಎಂಬ ಪ್ರಶ್ನೆಗೆ, ಅವರವರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಹೇಳಿದ್ದಾರೆ. ಆದರೆ, ದೇಶದ ಆಡಳಿತ ನಡೆಸುವಾಗ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಪ್ರಧಾನಿಯ ನಿಲುವು. ಹಾಗೆಂದು, ಯಾರ ಬಗ್ಗೆಯೂ ಒಲವಿನ–ಗೆಲುವಿನ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.

ಶಾದಿ ಭಾಗ್ಯ ಯೋಜನೆಯೇ ಸಿದ್ದರಾಮಯ್ಯಗೆ ಹಾಗೂ ಅವರ ಪಕ್ಷಕ್ಕೆ ದೌರ್ಭಾಗ್ಯವಾಗಿದೆ. ಅಂತಹ ದೌರ್ಭಾಗ್ಯವೇ ಬೇಕೆಂದರೆ ತಮ್ಮ ನಿಲುವನ್ನು ಮುಂದುವರಿಸಿಕೊಂಡು ಹೋಗಲಿ ಎಂದು

ಸಿದ್ದರಾಮಯ್ಯ, ರಾಜಕೀಯ ನಿವೃತ್ತಿ ಬಗ್ಗೆ ಆಗಾಗ ಮಾತನಾಡುತ್ತಿರುವುದನ್ನು ನೋಡಿದರೆ, ಅವರ ಹತಾಶ ಮನೋಭಾವದ ಸ್ಥಿತಿಯನ್ನು ತಿಳಿದುಕೊಳ್ಳಬಹುದಾಗಿದೆ ಎಂದು ವ್ಯಂಗ್ಯವಾಡಿದರು.

ಆರ್.ಅಶೋಕ್ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದಕ್ಕೆ ವಿರೋಧವೇನಿಲ್ಲ. ಅವರಿಗೆ ದೊಡ್ಡ ಪ್ರಮಾಣದಲ್ಲಿ ಸ್ವಾಗತ ದೊರೆತಿದೆ. ಗೋಬ್ಯಾಕ್ ಪೋಸ್ಟರ್‌ ಅಂಟಿಸಿರುವುದು ಮಹತ್ವದ್ದೇನಲ್ಲ. ಯಾರೋ ನಾಲ್ವರು ಮಾಡಿದ್ದಕ್ಕೆ ಪ್ರಾಧಾನ್ಯತೆ ಕೊಡಬೇಕಿಲ್ಲ ಎಂದು ಪ್ರತಿಕ್ರಿಯಿಸಿದರು.