ಮನೆ ಆರೋಗ್ಯ ದಿನಕ್ಕೆ ಒಂದೆರಡು ಕಪ್ ಕಾಫಿ ಕುಡಿದರೆ ಈ ಕಾಯಿಲೆಗಳನ್ನು ತಡೆಯಬಹುದು!

ದಿನಕ್ಕೆ ಒಂದೆರಡು ಕಪ್ ಕಾಫಿ ಕುಡಿದರೆ ಈ ಕಾಯಿಲೆಗಳನ್ನು ತಡೆಯಬಹುದು!

0

ಕಾಫಿ ಕುಡಿದರೆ ತಲೆನೋವು ಕಡಿಮೆಯಾಗುತ್ತದೆ, ಮನಸ್ಸಿಗೆ ಏನೋ ಒಂದು ರೀತಿಯಲ್ಲಿ ರಿಲ್ಯಾಕ್ಸ್ ಸಿಗುತ್ತದೆ ಎಂದು ಹೇಳುವವರು ಒಂದುಕಡೆಯಾದರೆ, ಮುಂಜಾನೆ ಎದ್ದ ಕೂಡಲೇ, ಬಿಸಿಬಿಸಿ ಬೆಡ್ ಕಾಫಿ ಬೇಕೇಬೇಕು ಎಂದು ಕೇಳುವವರು ಇನ್ನೊಂದು ಕಡೆ! ಆದರೆ ಇದರ ನಡುವೆ ಕೆಫಿನ್ ಅಧಿಕವಾಗಿ ಇರುವಂತಹ ಕಾಫಿ ಸೇವನೆ ಮಾಡಬಾರದು, ಇದರಿಂದ ಆರೋಗ್ಯಕ್ಕೆ ಸಮಸ್ಯೆ ಬರುವ ಅಪಾಯ ಹೆಚ್ಚಿರುತ್ತದೆ ಎಂದು ವಾದಿಸುವವರು ಕೂಡ, ನಮ್ಮ ಮಧ್ಯೆ ಸಾಕಷ್ಟು ಜನರಿದ್ದಾರೆ.

ಆದರೆ ಅದೆಲ್ಲಾ ಏನೇ ಇರಲಿ, ಮಿತವಾಗಿ, ಅಂದರೆ ದಿನಕ್ಕೆ ಒಂದು ಬಾರಿ ಕಾಫಿ ಕುಡಿಯುತ್ತಾ ಬರುವುದರಿಂದ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ಸೌತ್ ಹ್ಯಾಂಪ್ಟನ್ ನಲ್ಲಿನ ಯೂನಿವರ್ಸಿಟಿಯೊಂದು ನಡೆಸಿರುವಂತಹ ಅಧ್ಯಯನವು ತನ್ನ ವರದಿಯಲ್ಲಿ ತಿಳಿಸಿದೆ. ಬನ್ನಿ ಇಂದಿನ ಲೇಖನದಲ್ಲಿ ದಿನಕ್ಕೆ ಒಂದೆರಡು ಬಾರಿ ಕಾಫಿ ಕುಡಿಯುವುದರಿಂದ, ಏನೆಲ್ಲಾ ಪ್ರಯೋಜ ನಗಳು ಸಿಗುತ್ತದೆ ಎನ್ನುವ ಬಗ್ಗೆ ನೋಡೋಣ…

ಅಧಿಕ ರಕ್ತದೊತ್ತಡದ ಸಮಸ್ಯೆ ಇರುವವರು

• ಕೆಲವು ಅಧ್ಯಯನಗಳು ಹೇಳುವ ಪ್ರಕಾರ, ಒಂದು ಅಥವಾ ಎರಡು ಬಾರಿ ಮಿತ ಪ್ರಮಾಣದಲ್ಲಿ ಕಾಫಿ ಕುಡಿಯುತ್ತಾ ಬಂದರೆ, ಹೃದಯದ ಚಟುವಟಿಕೆಗಳು ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿ ಸಲು ಅನುಕೂಲ ಮಾಡಿಕೊಡುತ್ತದೆ.

• ಇದರಿಂದ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆ ಗಳು ದೂರವಾ ಗುವುದು ಮಾತ್ರವಲ್ಲದೆ, ರಕ್ತದೊತ್ತಡದ ಸಮಸ್ಯೆ ತಾನಾಗಿಯೇ ನಿಯಂತ್ರಣಕ್ಕೆ ಬರುತ್ತದೆ.

• ಇನ್ನು ಆದಷ್ಟು ಆಹಾರ ಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ಕೊಂಡರೆ ಬಹಳ ಒಳ್ಳೆಯದು. ಆದಷ್ಟು ಪೊಟ್ಯಾಶಿಯಂ ಅಂಶ ಹೆಚ್ಚಿರುವ ಆಹಾರ ಪದ್ಧತಿಯನ್ನು ಸೇರಿಸಿ ಕೊಂಡರೆ ಬಹಳ ಒಳ್ಳೆಯದು.

• ಇದರ ಜೊತೆಗೆ ಆದಷ್ಟು ಉಪ್ಪಿನಾಂಶ ಹಾಗೂಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದೂರವಿರಿ.

ದೇಹದ ತೂಕ ಇಳಿಸಲು

ದೇಹದ ತೂಕ ಇಳಿಸಲು ಬಯಸುವವರು ಕಟ್ಟುನಿಟ್ಟಿನ ಆಹಾರಪದ್ಧತಿ, ಶಿಸ್ತುಬದ್ಧ ವ್ಯಾಯಾಮ ಜೊತೆಗೆ ಸಕ್ಕರೆ ಹಾಕದೇ ಇರುವ ಒಂದು ಕಪ್ ಕಾಫಿಯನ್ನು ದಿನಕ್ಕೆರಡು ಬಾರಿ ಕುಡಿಯುವ ಅಭ್ಯಾಸ ಮಾಡಿಕೊಂಡರೆ, ಚಯಾಪಚಯ ಕ್ರಿಯೆ ವೃದ್ಧಿಯಾಗುವುದು ಮಾತ್ರವಲ್ಲದೆ, ದೇಹದ ಕೊಬ್ಬು ಕರಗಲು ನೆರವಾಗುವುದು, ಇದರಿಂದ ಕ್ರಮೇಣವಾಗಿ ದೇಹದ ತೂಕ ಕೂಡ ಇಳಿಕೆ ಆಗುವುದು.

ಒಂದು ಅಧ್ಯಾಯನದಲ್ಲಿ ಕಂಡುಕೊಂಡ ವಿಷ್ಯ ಏನೆಂದರೆ, ಮಿತ ಪ್ರಮಾಣದಲ್ಲಿ ಕಾಫಿ ಕುಡಿಯುವವರು ಅಂದರೆ, ದಿನಕ್ಕೆ ಒಂದು ಅಥವಾ ಎರಡು ಕಪ್ ಕಾಫಿ ಸೇವನೆ ಮಾಡುವವರಲ್ಲಿ ಹೃದಯಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಬರುವ ಅಪಾಯವು ಶೇ.5-12ರಷ್ಟು ಕಡಿಮೆ ಇರುತ್ತದೆಯಂತೆ.

ಕಾಫಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ

• ಆದರೆ ನಿಮಗೆ ಗೊತ್ತಿರಲಿ, ಕಾಫಿಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ. ಇದರ ಜೊತೆಗೆ ತಮ್ಮ ದೈನಂದಿನ ಆಹಾರ ಕ್ರಮ ದಲ್ಲಿ, ಆದಷ್ಟು ಹಣ್ಣುಗಳು, ತರಕಾರಿಗಳು, ಧಾನ್ಯಗಳು, ಕೊಬ್ಬಿ ನಾಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡಿ.

• ಇದರ ಜೊತೆಗೆ ಆದಷ್ಟು ಸಕ್ಕರೆ, ಕೃತಕ ಸಿಹಿ ಅಂಶ ಇರುವ ತಿಂಡಿ ತಿನಿಸುಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಅಧಿಕ ಸೋಡಿಯಂ ಅಂಶ ಇರುವ ಆಹಾರಗಳಿಂದ ದೂರವಿರಿ.

ಟೈಪ್ 2 ಮಧುಮೇಹ ಇದ್ದವರು…

• ಟೈಪ್ 2 ಮಧುಮೇಹ ಇರುವವರು, ದಿನಕ್ಕೆ ಒಂದು ಬಾರಿ ಕಾಫಿ ಕುಡಿದರೆ ಒಳ್ಳೆಯದು. ಯಾಕೆಂದರೆ, ಕಾಫಿಯಲ್ಲಿರುವ ಕೆಫಿನ್ ಅಂಶ ಇನ್ಸುಲಿನ್ ಸೂಕ್ಷ್ಮತೆ ಕಡಿಮೆ ಮಾಡುವುದು ಮಾತ್ರವಲ್ಲದೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.

• ಆದರೆ ನಿಮಗೆ ಗೊತ್ತಿರಲಿ ಆದಷ್ಟು ಸಕ್ಕರೆ ರಹಿತ ಅಂದರೆ ಸಕ್ಕರೆ ಹಾಕದ ಬ್ಲ್ಯಾಕ್ ಕಾಫಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.