ಮನೆ ರಾಜ್ಯ ಗಾಂಧೀಜಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ನಾಯಕರಾಗಿದ್ದರು: ಎನ್ ಎಂ ನವೀನ್ ಕುಮಾರ್

ಗಾಂಧೀಜಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ನಾಯಕರಾಗಿದ್ದರು: ಎನ್ ಎಂ ನವೀನ್ ಕುಮಾರ್

0

ಮೈಸೂರು(Mysuru): ಅಸಹಕಾರ, ಅಹಿಂಸೆ ಮತ್ತು ಶಾಂತಿ ಯುತ ಪ್ರತಿರೋಧವನ್ನು ತಮ್ಮ ಶಸ್ತ್ರವನ್ನಾಗಿ ಬಳಸಿದ್ದ ಗಾಂಧಿ, ಭಾರತೀಯ ಸ್ವಾತಂತ್ರ್ಯ ಚಳವಳಿ ಕಾಲದಲ್ಲಿ ಭಾರತದ ಸರ್ವೋತ್ಕೃಷ್ಟ ರಾಜಕೀಯ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು ಎಂದು ಕಾಂಗ್ರೆಸ್ ಮುಖಂಡ  ಎನ್ ಎಂ ನವೀನ್ ಕುಮಾರ್ ಅಭಿಪ್ರಾಯಪಟ್ಟರು.

ಸರ್ವೋದಯ ದಿನಾಚರಣೆ ಅಂಗವಾಗಿ ಕೆ ಆರ್ ಎಂ ಫೌಂಡೇಶನ್  ವತಿಯಿಂದ ನ್ಯಾಯಾಲಯದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ  ಗಾಂಧಿ ಸ್ಮರಣೆಯಲ್ಲಿ  ಮಾತನಾಡಿದರು.

ಭಾರತದಲ್ಲಿ ಗಾಂಧೀಜಿ ಯವರನ್ನು ಬಾಪೂಜಿ ಎಂದು ಸಂಬೋಧಿಸು ತ್ತಿದ್ದರೆ, ವಿಶ್ವಾದ್ಯಂತ ಮಹಾತ್ಮ ಗಾಂಧಿ ಎಂದು ಚಿರಪರಿಚಿತರಾಗಿದ್ದರು. ವಿದ್ಯಾರ್ಥಿಗಳು ಗಾಂಧಿ ತತ್ವವನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯರು ಸಮಾಜ ಸೇವಕರು ಆದ ಡಾ. ರಘುರಾಮ್ ವಾಜಪೇಯಿ, ಮುಖಂಡರಾದ ಎಂ ರಾಜೇಶ್, ವಿನಯ್ ಕಣಗಲ್, ಪೈಲ್ವಾನ್ ಸುನಿಲ್, ಪ್ರಶಾಂತ್, ಸತೀಶ್ ಪೊನ್ನಾಚಿ, ಮತ್ತು ಅನೇಕ ಮುಖಂಡರು ಭಾಗವಹಿಸಿದ್ದರು.