ಮನೆ ಆರೋಗ್ಯ ಚಳಿಗಾಲದಲ್ಲಿ ಮೊಸರು ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದಾ?

ಚಳಿಗಾಲದಲ್ಲಿ ಮೊಸರು ಸೇವಿಸೋದು ಆರೋಗ್ಯಕ್ಕೆ ಒಳ್ಳೆಯದಾ?

0

ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತಮವಾಗಿಸುತ್ತದೆ. ನಮ್ಮಲ್ಲಿ ಹಲವರು ಚಳಿಗಾಲದಲ್ಲಿ ಮೊಸರು ತಿನ್ನಲು ಇಷ್ಟಪಡುವುದಿಲ್ಲ. ಯಾಕೆಂದರೆ ಮೊಸರು ತಿನ್ನುವುದರಿಂದ ಶೀತ ಆಗುತ್ತದೆ.

ಚಳಿಗಾಲದಲ್ಲಿ ಇದು ಕಫ ಮತ್ತು ಶೀತವನ್ನು ಉಂಟುಮಾಡುತ್ತದೆ. ಹಾಗಾಗಿ ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ ಅಥವಾ ಬೇಡವೇ ಎಂಬುವ ಪ್ರಶ್ನೆ ಹಲವರಲ್ಲಿದೆ. ಈ ವಿಷ್ಯದ ಬಗ್ಗೆ ತಜ್ಞರ ಅಭಿಪ್ರಾಯ ತಿಳಿಯೋಣ.

ಪೌಷ್ಟಿಕತಜ್ಞರ ಸಲಹೆ

ಪೌಷ್ಟಿಕತಜ್ಞ ಮುಗ್ಧ ಪ್ರಧಾನ್ ಅವರ ಪ್ರಕಾರ, ಚಳಿಗಾಲದಲ್ಲಿ ಮೊಸರು ತಿಂದರೆ ಸಮಸ್ಯೆ ಇಲ್ಲ. ನಿಸ್ಸಂಶಯವಾಗಿ ಮೊಸರು ಹಾಲಿನಿಂದ ತಯಾರಿಸಿದ ಉತ್ಪನ್ನವಾಗಿದೆ ಮತ್ತು ಹಾಲು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಎರಡನೆಯದಾಗಿ, ಮೊಸರನ್ನು ಹುದುಗಿಸಲಾಗುತ್ತದೆ ಆದ್ದರಿಂದ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ.

ಮೊಸರು ಜೀರ್ಣಿಸಿಕೊಳ್ಳಲು ಸುಲಭ ಮತ್ತು ಆರೋಗ್ಯಕರ ಪ್ರೋಬಯಾಟಿಕ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ, ಇದು ಕರುಳಿನ ಸೂಕ್ಷ್ಮಜೀವಿಗೆ ಪ್ರಯೋಜನವನ್ನು ನೀಡುತ್ತದೆ.

ರಾತ್ರಿ ಮೊಸರು ತಿನ್ನಬಾರದು

ಆಯುರ್ವೇದದ ಪ್ರಕಾರ ಹೇಳುವುದಾದರೆ ರಾತ್ರಿಯಲ್ಲಿ ಮೊಸರನ್ನು ಸೇವಿಸಬಾರದು ಏಕೆಂದರೆ ಅದು ಕಫವನ್ನು ಉತ್ಪಾದಿಸುತ್ತದೆ. ಇದು ಕಫ ದೋಷವನ್ನು ಉತ್ತೇಜಿಸುತ್ತದೆ.

ನೆಗಡಿ ಮತ್ತು ಕೆಮ್ಮಿನ ಸಮಸ್ಯೆಯಲ್ಲಿ ನೀವು ಮೊಸರು ತಿನ್ನಬಹುದೇ?

ನೆಗಡಿ ಮತ್ತು ಕೆಮ್ಮಿನಿಂದ ಆಗಾಗ್ಗೆ ತೊಂದರೆಗೊಳಗಾಗುವವರಿಗೆ ರಾತ್ರಿಯಲ್ಲಿ ಮೊಸರು ತಿನ್ನಬಾರದು. ಅದರಲ್ಲೂ ಬಹಳ ದಿನಗಳಿಂದ ಇಟ್ಟಿರುವ ಹುಳಿ ಮೊಸರನ್ನು ತಿನ್ನಬೇಡಿ.

ಚಳಿಗಾಲದಲ್ಲಿ ಮೊಸರು ಜಮಾ ಮಾಡುವುದು ಹೇಗೆ?

ಮೊದಲು ಹಾಲನ್ನು ಚೆನ್ನಾಗಿ ಕುದಿಸಿ. ಸ್ವಲ್ಪ ಸಮಯ ಬಿಟ್ಟು ಅದಕ್ಕೆ ಒಂದು ಚಮಚ ಮೊಸರು ಸೇರಿಸಿ. ಅದನ್ನು ಮುಚ್ಚಿಡಿ. ನಿಮ್ಮ ಮೊಸರು 3 ರಿಂದ 4 ಗಂಟೆಗಳಲ್ಲಿ ಸಿದ್ಧವಾಗಲಿದೆ.

ಮೊಸರು ಮತ್ತು ಸಕ್ಕರೆ ತಿನ್ನುವುದರಿಂದ ಆಗುವ ಪ್ರಯೋಜನಗಳೇನು?

ಮೊಸರು ಮತ್ತು ಸಕ್ಕರೆಯನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಶಕ್ತಿ ಬರುತ್ತದೆ. ಸಕ್ಕರೆಯಲ್ಲಿ ಗ್ಲೂಕೋಸ್ ಇರುತ್ತದೆ ಮತ್ತು ಮೊಸರು ತಣ್ಣಗಿರುತ್ತದೆ. ಬೇಸಿಗೆಯಲ್ಲಿ ಮೊಸರು-ಸಕ್ಕರೆ ತಿನ್ನುವುದು ಒಳ್ಳೆಯದು.