ಮನೆ ರಾಜ್ಯ ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿ: ಸ್ಥಳದಲ್ಲೇ ತಾಯಿ, ಮಗಳು ಸಾವು

ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿ: ಸ್ಥಳದಲ್ಲೇ ತಾಯಿ, ಮಗಳು ಸಾವು

0

ಆನೇಕಲ್: ಕಾಂಕ್ರೀಟ್ ಮಿಕ್ಸರ್ ಲಾರಿ ಕಾರಿನ ಮೇಲೆ ಪಲ್ಟಿ ಹೊಡೆದ ಪರಿಣಾಮ ಸ್ಥಳದಲ್ಲೇ ತಾಯಿ ಮತ್ತು ಮಗಳು ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟದಲ್ಲಿ ನಡೆದಿದೆ.

ಐಟಿ ಉದ್ಯೋಗಿ ಗಾಯಿತ್ರಿ ಕುಮಾರ್(47) ಸಮತಾ ಕುಮಾರ್(16) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಇನ್ನು ಮಗಳು ಸಮತಾ ಕುಮಾರ್​’ಳನ್ನು ಶೇರ್ ವುಡ್ ಹೈ ಶಾಲೆಗೆ ಕರೆದೊಯ್ಯುತ್ತಿದ್ದ ವೇಳೆ ಕನಕಪುರ ರಸ್ತೆ ಮಾರ್ಗವಾಗಿ ಬನ್ನೇರು ಘಟ್ಟಕ್ಕೆ ಬರುತ್ತಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ ಬ್ಯಾಲದ ಮರದ ದೊಡ್ಡಿ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮಿಕ್ಸರ್ ಲಾರಿ ಪಲ್ಟಿ ಹೊಡೆದು ಸ್ವಿಫ್ಟ್ ಕಾರಿನ ಮೇಲೆ ಮಗುಚಿ ಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ತಾಯಿ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಗಾಯಿತ್ರಿ ಕುಮಾರ್ ತರಳು‌ ನಿವಾಸಿ ಸುನೀಲ್ ಕುಮಾರ್ ಎಂಬುವವರ ಪತ್ನಿಯಾಗಿದ್ದು, ಅವರ ಕಾರು ಅಪಘಾತವಾಗುತ್ತಿದ್ದಂತೆ ಪತಿಯ ಮೊಬೈಲ್ ಗೆ ಕಾರು ಕ್ರಷ್ ಆಗಿದೆ ಎಂದು ಮೆಸೇಜ್ ಹೋಗಿದೆ. ಕೂಡಲೇ ಸ್ಥಳಕ್ಕೆ ಪತಿ ಸುನೀಲ್ ಕುಮಾರ್ ಧಾವಿಸಿದ್ದು, ಲಾರಿ ಕೆಳಗೆ ಸಿಲುಕಿರುವ ಕಾರು ಜೊತೆಗೆ ಸಿಲುಕಿರುವ ಪತ್ನಿ ಮತ್ತು ಮಗಳನ್ನು ಹೊರತೆಗೆಯಲು ಹರಸಾಹಸ ಪಟ್ಟರು. ನಾಲ್ಕು ಕ್ರೇನ್, ಒಂದು ಜೆಸಿಬಿ ನೆರವಿನಿಂದ ತೆರವು ಕಾರ್ಯಾಚರಣೆ ಮಾಡಲಾಗಿದೆ.