ಮನೆ ಪ್ರವಾಸ ರಾಯಚೂರಿನಲ್ಲಿರುವ ಕಣ್ಮನ ತಣಿಸುವ ಪ್ರವಾಸಿ ಸ್ಥಳಗಳು

ರಾಯಚೂರಿನಲ್ಲಿರುವ ಕಣ್ಮನ ತಣಿಸುವ ಪ್ರವಾಸಿ ಸ್ಥಳಗಳು

0

ಬೆಂಗಳೂರಿನಿಂದ ರಾಯಚೂರಿಗೆ ಸುಮಾರು 711 ಕಿ.ಮೀ ದೂರದಲ್ಲಿದೆ. ರಾಯಚೂರಿನಲ್ಲಿಯು ಪ್ರವಾಸ ಮಾಡಬಹುದಾದ ಅನೇಕ ಸುಂದರವಾದ ಪ್ರವಾಸಿ ತಾಣಗಳಿವೆ. ಕಣ್ಣು ಕ್ಕುಕ್ಕುವ ವಾಸ್ತುಶಿಲ್ಪಗಳು, ಭವ್ಯವಾದ ದೇವಾಲಯಗಳು, ಭದ್ರವಾಗಿರುವ ಕೋಟೆಗಳನ್ನು ರಾಯಚೂರು ತನ್ನ ಮಡಿಲಿನಲ್ಲಿ ಇಟ್ಟುಕೊಂಡಿದೆ.

ಕೆಲವು ಪ್ರವಾಸಿ ಆಕರ್ಷಣೆಗಳು ವಿಶ್ವ ಪರಂಪರೆಯ ತಾಣದ ಅಡಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ. ಇನ್ನು, ನೀವು ರಾಯಚೂರಿಗೆ ಹೋದಾಗ ತಪ್ಪದೇ ಈ ತಾಣಗಳಿಗೆ ಹೋಗುವುದನ್ನು ತಪ್ಪಿಸದಿರಿ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ರಾಯಚೂರು ಕೋಟೆ

ನೀವು ಇತಿಹಾಸ ಪ್ರೇಮಿಗಳಾಗಿದ್ದರೆ ರಾಯಚೂರು ಕೋಟೆಗೆ ತಪ್ಪದೇ ಭೇಟಿ ನೀಡಿ. ಈ ಸುಂದರವಾದ ರಚನೆಯನ್ನು ಕಾಕತೀಯ ಅರಸರು ಕ್ರಿ.ಶ 1294 ರಲ್ಲಿ ನಿರ್ಮಿಸಿದರು ಎನ್ನಲಾಗಿದೆ. ರಾಯಚೂರಿನ ಪ್ರಮುಖ ಪ್ರವಾಸಿ ಆಕರ್ಷಣೆ ಕೂಡ ಹೌದು. ಕೋಟೆಯ 3 ಬದಿಗಳಲ್ಲಿಯು ಬೃಹತ್ ಲೋ ಸರ್ಕ್ಯೂಟ್ ಗೋಡೆಗಳಿಂದ ಆವೃತವಾಗಿದೆ. ಇನ್ನು, ಕೋಟೆಯ ವಾಸ್ತುಶಿಲ್ಪದ ಸೌಂದರ್ಯವನ್ನು ವರ್ಣಿಸಲು ಪದಗಳೇ ಸಾಲವು. ಕೋಟೆಯ ಸುತ್ತಲೂ ರಮಣೀಯವಾದ ವಾತಾವರಣವಿದೆ. ಫೋಟೋ ಕ್ಲಿಕ್ಕಿಸಿಕೊಳ್ಳಲು ಇದು ಸೂಕ್ತವಾದ ತಾಣವಾಗಿದೆ.

ಧಾರ್ಮಿಕ ದೇವಾಲಯಗಳು

ಅಮರೇಶ್ವರ ದೇವಾಲಯ: ವರ್ಷಕ್ಕೆ ಒಮ್ಮೆ ಇಲ್ಲಿ ಉತ್ಸವ ನಡೆಯುತ್ತದೆ. ಹಾಗೆಯೇ ಫಾಲ್ಗುಣ ಮಾಸದಲ್ಲಿ ಜಾನುವಾರು ಜಾತ್ರೆಯನ್ನು ವಿಜೃಂಭಣೆಯಿಂದ ಸಂಭ್ರಮಿಸಲಾಗುತ್ತದೆ.

ಸುಗೂರೇಶ್ವರ ದೇವಾಲಯ: ಪವಿತ್ರವಾದ ಕೃಷ್ಣಾ ನದಿಯ ದಡದಲ್ಲಿ ನೆಲೆಸಿರುವ ಈ ಸುಗೂರೇಶ್ವರ ದೇವಾಲಯವನ್ನು ವೀರಭದ್ರ ದೇವಾಲಯ ಎಂದು ಸಹ ಕರೆಯಲಾಗುತ್ತದೆ.

ವೆಂಕಟೇಶ್ವರ ದೇವಾಲಯ: ಇದೊಂದು ಪುರಾತನವಾದ ದೇವಾಲಯವಾಗಿದ್ದು, ಹಳೆಯ ಶಾಸನಗಳನ್ನು ಇಲ್ಲಿ ನೋಡಬಹುದು.

ಪಂಚಮುಖಿ ಪ್ರಾಣದೇವರು ದೇವಾಲಯ: ರಾಯಚೂರಿನಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಈ ಪಂಚಮುಖಿ ಪ್ರಾಣ ದೇವರು ತುಂಬಾ ಜನಪ್ರಿಯವಾದ ಧಾರ್ಮಿಕ ಸ್ಥಳವಾಗಿದೆ.

ಹಾಗೆಯೇ ಮಾನ್ವಿ ಮತ್ತು ಅಮಬಾದೇವಿ ಮಠ ಕೂಡ ರಾಯಚೂರಿನ ಆಧ್ಯಾತ್ಮಿಕ ತಾಣವಾಗಿದೆ.

ಸುಂದರ ಜಲಪಾತ

ಧನಿಷ್ ಕೋಟಿ ಎಂಬ ಜಲಪಾತ ರಾಯಚೂರಿನಲ್ಲಿದೆ. ಸುಮಾರು 400 ಅಡಿ ಎತ್ತರದಿಂದ ಜಲಪಾತ ಧುಮ್ಮಿಕ್ಕುತ್ತದೆ. ಇದು ಛಾಯಾಭಗವತಿ ದೇವಾಲಯದ ಬಳಿ ಇದೆ. ಜಲಪಾತದ ಸುತ್ತಲೂ ರಮಣೀಯವಾದ ವಾತಾವರಣವಿದೆ.

ರಾಯಚೂರಿನಿಂದ ಕೇವಲ 20 ಕಿ.ಮೀ ದೂರದಲ್ಲಿ ರಾಮಗದ್ದೆ ಎಂಬ ಮೋಡಿ ಮಾಡುವ ದ್ವೀಪವಿದೆ. ಏಕಾಂತ ಬಯಸುವ ಮಂದಿಗೆ ರಾಮಗದ್ದೆಯ ನೋಟವು ಮೋಡಿ ಮಾಡುವುದರಲ್ಲಿ ಅನುಮಾನವೇ ಇಲ್ಲ.

ಕಲ್ಲೂರು

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನಲ್ಲಿರುವ ಒಂದು ಸಣ್ಣ ಗ್ರಾಮವೇ ಕಲ್ಲೂರು. ಈ ಗ್ರಾಮವು ನವಶಿಲಾಯುಗದ ಕಾಲದಲ್ಲಿನ ಅನೇಕ ಆವಿಷ್ಕಾರಗಳಿಗೆ ಜನಪ್ರಿಯವಾಗಿದೆ. ಇಲ್ಲಿ ಪುರಾತನ ವರ್ಣಚಿತ್ರಗಳು, ಚಿಪ್ಪಿನ ಬಳೆಗಳು, ಕೊಡಲಿಗಳು, ಅಮೂಲ್ಯ ಕಲ್ಲುಗಳನ್ನು ನೋಡಬಹುದು.

ಇನ್ನು ಗ್ರಾಮದ ಸುತ್ತ 6 ಸುಂದರವಾದ ದೇವಾಲಯಗಳಿವೆ. ಕಲ್ಲೂರಿನ ಬಗ್ಗೆ ಅಚ್ಚರಿಯ ಸಂಗತಿ ಏನೆಂದರೆ ಸುಸಜ್ಜಿತವಾದ ಅನೇಕ ದೊಡ್ಡ ಬಾವಿಗಳಿವೆ. ಅವುಗಳನ್ನು ಯಾರು ನಿರ್ಮಿಸಿದರು ಎಂಬುದಕ್ಕೆ ಯಾವುದೇ ಪುರಾವೆ ದೊರೆತಿಲ್ಲ.

ರಾಯಚೂರಿನ ಪ್ರಮುಖ ಆಕರ್ಷಣೆಗಳು

ಜಲದುರ್ಗ ಕೋಟೆ

ಮಲ್ಲಿಯಾಬಾದ್

ಮುದಗಲ್ ಕೋಟೆ

ಮಸ್ಕಿಯ ಅಶೋಕನ ಶಾಸನ

ತ್ರಯಂಬಕೇಶ್ವರ ದೇವಾಲಯ

ರಾಜಲಬಂಧ