ನವದೆಹಲಿ(Newdelhi): ಕೇಂದ್ರ ಗುಪ್ತಚರದಳದ ನಿರ್ದೇಶಕರ ಮನೆ ಕಾವಲಿಗೆ ನಿಯೋಜನೆಯಾಗಿದ್ದ 53 ವರ್ಷದ ಕೇಂದ್ರ ಮೀಸಲು ಪೊಲೀಸ್ ಪಡೆಯ (ಸಿಆರ್’ಪಿಎಫ್) ಅಸಿಸ್ಟಂಟ್ ಸಬ್ ಇನ್’ಸ್ಟೆಕ್ಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶುಕ್ರವಾರ ಸಂಜೆ ತಮ್ಮ ರೈಫಲ್’ನಿಂದ ತಲೆಗೆ ಗುಂಡು ಹೊಡೆದುಕೊಂಡು ಎಎಸ್’ಐ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೃತ ಕಾನ್ಸ್’ಟೇಬಲ್ ಅನ್ನು ರಾಜಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇತ್ತೀಚೆಗಷ್ಟೇ ರಾಜಬೀರ್ ಸಿಂಗ್ ಅವರನ್ನು ಕೇಂದ್ರ ಗುಪ್ತಚರದಳದ ನಿರ್ದೇಶಕರ ಮನೆ ಕಾವಲಿಗೆ ನಿಯೋಜಿಸಲಾಗಿತ್ತು.
ಆತ್ಮಹತ್ಯೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.














