ಮನೆ ರಾಜ್ಯ ಗ್ರಾಮೀಣ ಭಾಗದ ಪ್ರತೀ ಮನೆ ಬಾಗಿಲಿಗೂ ಆರೋಗ್ಯ ಸೇವೆ: ಗಾಯತ್ರಿ

ಗ್ರಾಮೀಣ ಭಾಗದ ಪ್ರತೀ ಮನೆ ಬಾಗಿಲಿಗೂ ಆರೋಗ್ಯ ಸೇವೆ: ಗಾಯತ್ರಿ

0

ಮೈಸೂರು(Mysuru): ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆಯು ಪ್ರತಿಯೊಂದು ಮನೆ ಬಾಗಿಲಿಗೂ ತಲುಪಿಸುವ ನಿಟ್ಟಿನಲ್ಲಿ ಆರೋಗ್ಯ ಅಮೃತ ಅಭಿಯಾನ ಯೋಜನೆ ಜಾರಿಗೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಾಯತ್ರಿ ಅವರು ತಿಳಿಸಿದರು.

ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಯೋಜನೆ ಅಡಿ ಅನಿಮಿಯಾ ಮುಕ್ತ ಗ್ರಾಮ ಪಂಚಾಯತಿ ಹಾಗೂ ಮುಟ್ಟಿನ ನೈರ್ಮಲ್ಯ, ಅಸಾಂಕ್ರಮಿಕ ರೋಗಗಳ ತಪಾಸಣೆ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮ ಪಂಚಾಯಿತಿಯಲ್ಲಿ ಇತರೆ ಇಲಾಖೆಗಳ ಸಹಕಾರದಲ್ಲಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಿ, ಗ್ರಾಮೀಣ ಜನರ ಆರೋಗ್ಯ ಕಾಳಜಿಗೆ ಒತ್ತು ನೀಡುವಂತೆ ತಿಳಿಸಿದರು. ಬಳಿಕ ತರಬೇತಿಯ ಕೈಪಿಡಿ ಬಿಡುಗಡೆ ಗೊಳಿಸಿದರು.

ಉಪ ಕಾರ್ಯದರ್ಶಿ ಕೃಷ್ಣರಾಜು ಅವರು ಮಾತನಾಡಿ, ತರಬೇತಿ ಪಡೆದು, GPTF ಈ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಮಾಹಿತಿ ನೀಡಿ ಹಾಗೂ ಗ್ರಾಮ ಪಂಚಾಯತಿಗಳನ್ನು ಅನಿಮಿಯಾ ಮುಕ್ತ, ಬಾಲ್ಯ ವಿವಾಹ ಮುಕ್ತ ಗ್ರಾಮ ಪಂಚಾಯತಿಗಳನ್ನಾಗಿ ಮಾಡಲು ಎಲ್ಲರೂ ಶ್ರಮಿಸುವಂತೆ ಸಂಯೋಜಕರಿಗೆ ತಿಳಿಸಿದರು.

ತರಬೇತಿಯಲ್ಲಿ DHEO ಮುಣಿಂದ್ರಮ್ಮ ಅವರು ಅನಿಮಿಯಾ ಮುಕ್ತ ಗ್ರಾಮ ಪಂಚಾಯತಿ ಕುರಿತು, ಆಡಿ ಅರ್ಚನಾ ರವರು ಸಾಂಕ್ರಮಿಕಾ ರೋಗ ಲಕ್ಷಣ ಕುರಿತು, ಸವಿತಾ ರವರು ಮುಟ್ಟಿನ ನೈರ್ಮಲ್ಯ ಕುರಿತು ಹಾಗೂ ಜಿಲ್ಲಾ ಪಂಚಾಯತ್ ಸಹ ಕಾರ್ಯದರ್ಶಿ ಶ ಕುಲದೀಪ್ ರವರು ಗ್ರಾಮ ಪಂಚಾಯತಿ ಆರೋಗ್ಯ ಅಮೃತ ಅಭಿಯಾನ ಯೋಜನೆ ಕುರಿತು ಹಾಗೂ ನಾಗೇಂದ್ರ ಅವರು ಸೂಕ್ಷ್ಮ ಯೋಜನೆ ಕುರಿತು ತರಬೇತಿ ನೀಡಿದರು.

ತರಬೇತಿಯಲ್ಲಿ ಆರೋಗ್ಯ ಇಲಾಖೆಯ ಎಲ್ಲಾ ತಾಲೂಕು ಆರೋಗ್ಯ ಅಧಿಕಾರಿಗಳು, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು, ಆಶಾ ಮೆಂಟರ್ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು, ಕ್ಷೇತ್ರ ಶಿಕ್ಷಣ ಅಧಿಕಾರಿಗಳು ಮತ್ತು KHPT ಯ ಜಿಲ್ಲಾ ಹಾಗೂ ತಾಲ್ಲೂಕು ಸಂಯೋಜಕರು ಉಪಸ್ಥಿತರಿದ್ದರು.