ಮನೆ ಅಂತಾರಾಷ್ಟ್ರೀಯ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ  ಕನ್ನಡಿಗ ರಿಕಿ ಕೇಜ್

ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ  ಕನ್ನಡಿಗ ರಿಕಿ ಕೇಜ್

0

ಲಾಸ್‌ ಏಂಜಲೀಸ್‌: ಕನ್ನಡಿಗ, ಬೆಂಗಳೂರು ಮೂಲದ ಸಂಯೋಜಕ ರಿಕಿ ಕೇಜ್ ಅವರು ರಾಕ್-ಲೆಜೆಂಡ್ ಸ್ಟೀವರ್ಟ್ ಕೊಪ್ಲ್ಯಾಂಡ್ (ದಿ ಪೊಲೀಸ್) ಅವರ ಇತ್ತೀಚಿನ ಆಲ್ಬಂ ಡಿವೈನ್ ಟೈಡ್ಸ್‌ಗಾಗಿ ಬೆಸ್ಟ್ ಇಮ್ಮರ್ಸಿವ್ ಆಡಿಯೋ ಆಲ್ಬಮ್‌’ಗಾಗಿ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಮೆರಿಕ ಸಂಜಾತ ರಿಕಿ ಕೇಜ್‌ ಅವರು ‘ದಿ ಪೊಲೀಸ್‌’ ಹೆಸರಿನ ಸಾಂಪ್ರದಾಯಿಕ ಬ್ರಿಟಿಷ್ ರಾಕ್ ಬ್ಯಾಂಡ್‌’ನ ಸ್ಟೀವರ್ಟ್ ಕೋಪ್ಲ್ಯಾಂಡ್ ಅವರೊಂದಿಗೆ ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಸ್ಟೀವರ್ಟ್‌ ಕೋಪ್ಲ್ಯಾಂಡ್‌ ಅವರು ಆಲ್ಬಮ್‌’ನಲ್ಲಿ ರಿಕಿ ಅವರೊಂದಿಗೆ ಕೆಲಸ ಮಾಡಿದ್ದರು.

65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿಯ ‘ತಲ್ಲೀನಗೊಳಿಸುವ ಅತ್ಯುತ್ತಮ ಆಡಿಯೊ ಆಲ್ಬಮ್ – ‘ದಿ ಬೆಸ್ಟ್‌ ಇಮ್ಮರ್ಸಿವ್‌ ಆಲ್ಬಮ್‌’ ವಿಭಾಗದಲ್ಲಿ ಈ ಇಬ್ಬರೂ ‘ಗ್ರಾಮಫೋನ್ ಟ್ರೋಫಿಯನ್ನು’ಯನ್ನು ತಮ್ಮದಾಗಿಸಿಕೊಂಡರು.

ಕಳೆದ ವರ್ಷ ‘ದಿ ಬೆಸ್ಟ್‌ ನ್ಯೂ ಏಜ್‌ ಆಲ್ಬಮ್‌’ ವಿಭಾಗದಲ್ಲಿ ಇದೇ ಆಲ್ಬಮ್‌ಗಾಗಿ ಅವರು ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು. ‘ದಿ ಬೆಸ್ಟ್‌ ಇಮ್ಮರ್ಸಿವ್‌ ಆಲ್ಬಮ್‌’ ವಿಭಾಗಕ್ಕೆ ‘ಡಿವೈನ್‌ ಟೈಡ್ಸ್’ ಅಲ್ಲದೇ, ಕ್ರಿಸ್ಟಿನಾ ಅಗುಲೆರಾ (‘ಅಗುಲೆರಾ’), ದಿ ಚೈನ್‌ಸ್ಮೋಕರ್ಸ್ (‘ಮೆಮೊರೀಸ್… ಡೋಂಟ್ ಓಪನ್), ಜೇನ್ ಇರಾಬ್ಲೂಮ್ (‘ಪಿಕ್ಚರಿಂಗ್‌ ದಿ ಇನ್ವಿಸಿಬಲ್ – ಫೋಕಸ್ 1), ಮತ್ತು ನಿಡಾರೋಸ್ಡೊಮೆನ್ಸ್ ಜೆಂಟೆಕೋರ್ ಮತ್ತು ಟ್ರೊಂಡೆಹೀಮ್ಸೊಲಿಸ್ಟೆನ್ (‘ತುವಾಹ್ಯುನ್ – ಬೀಟಿಟ್ಯೂಡ್ಸ್ ಫಾರ್‌ ಎ ಊಂಡೆಡ್‌ ವರ್ಲ್ಡ್‌’) ಆಲ್ಬಮ್‌’ಗಳು ನಾಮನಿರ್ದೇಶನಗೊಂಡಿದ್ದವು.

‘ಡಿವೈನ್ ಟೈಡ್ಸ್’ ಒಂಬತ್ತು ಹಾಡುಗಳ ಆಲ್ಬಂ ಆಗಿದ್ದು, ‘ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸುವ ಸಮತೋಲನವನ್ನು ಕಾಪಾಡಿಕೊಳ್ಳುವಲ್ಲಿ ಪ್ರತಿಯೊಬ್ಬರ ವೈಯಕ್ತಿಕ ಜೀವನವು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ’ ಎಂಬ ಸಂದೇಶವನ್ನು ಸಾರುತ್ತದೆ.

ಕೇಜ್ ಅವರು 2015ರಲ್ಲಿ ‘ವಿಂಡ್ಸ್ ಆಫ್ ಸಂಸಾರ’ ಆಲ್ಬಮ್‌ಗಾಗಿ ‘ದಿ ಬೆಸ್ಟ್‌ ನ್ಯೂ ಏಜ್‌ ಆಲ್ಬಮ್‌’ ವಿಭಾಗದಲ್ಲಿ ತಮ್ಮ ಮೊದಲ ಗ್ರ್ಯಾಮಿ ಪ್ರಶಸ್ತಿ ಪಡೆದಿದ್ದರು.