ಮನೆ ಕ್ರೀಡೆ ಭಾರತದ ವಿರುದ್ಧ ಮೊದಲ ಟೆಸ್ಟ್’ಗೆ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅಲಭ್ಯ

ಭಾರತದ ವಿರುದ್ಧ ಮೊದಲ ಟೆಸ್ಟ್’ಗೆ ಆಸ್ಟ್ರೇಲಿಯಾ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅಲಭ್ಯ

0

ನಾಗ್ಪುರ: ಭಾರತ ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ತಂಡವು ಭಾರತಕ್ಕೆ ಆಗಮಿಸಿದ್ದು, ಸಂಪೂರ್ಣ ಸಿದ್ದತೆ ನಡೆಸಿದೆ.

ಆದರೆ ತಂಡದ ಪ್ರಮುಖ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರು ಇನ್ನೂ ಗುಣಮುಖರಾಗಿಲ್ಲ. ಹೀಗಾಗಿ ಅವರು ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಸಾಧ್ಯತೆಯಿಲ್ಲ ಎಂದು ಉಪನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

“ಗ್ರೀನ್ ನೆಟ್ಸ್ ನಲ್ಲಿ ವೇಗದ ಬೌಲರ್ಗಳನ್ನು ಸಹ ಎದುರಿಸಿಲ್ಲ ಆದ್ದರಿಂದ ಅವರು ಮೊದಲನೇ ಟೆಸ್ಟ್ ಆಡುವ ಸಾಧ್ಯತೆ ತುಂಬಾ ಕಡಿಮೆ” ಎಂದು ಸ್ಮಿತ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ವೇಗಿ ಜೋಶ್ ಹೇಜಲ್ ವುಡ್ ಗೆ ಆಗಿರುವ ಗಾಯವು ಆಸೀಸ್ ಗೆ ದೊಡ್ಡ ನಷ್ಟವಾಗಿದೆ. ಆದರೆ ಲ್ಯಾನ್ಸ್ ಮೋರಿಸ್ ಮತ್ತು ಸ್ಕಾಟ್ ಬೋಲ್ಯಾಂಡ್ ಅವರಂತಹ ಆಟಗಾರರು ಈ ನಷ್ಟವನ್ನು ತುಂಬಬಹುದು. ಏಕೆಂದರೆ ಅವರ ಲೆಂತ್ ಮತ್ತು ವೇಗವು ಈ ರೀತಿಯ ಪಿಚ್ ಗಳಿಗೆ ಸರಿಹೊಂದುತ್ತದೆ ಎಂದು ಸ್ಮಿತ್ ಹೇಳಿದರು.

ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾ), ಆಶ್ಟನ್ ಆ್ಯಗರ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮೆರಾನ್ ಗ್ರೀನ್, ಪೀಟರ್ ಹ್ಯಾಂಡ್ಸ್ಕಾಂಬ್, ಜೋಶ್ ಹೇಜಲ್ ವುಡ್, ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಶೇನ್, ನಾಥನ್ ಲಿಯಾನ್, ಲ್ಯಾನ್ಸ್ ಮಾರಿಸ್, ಟಾಡ್ ಮರ್ಫಿ, ಮ್ಯಾಥ್ಯೂ ರೆನ್ ಶಾ, ಸ್ಟೀವ್ ಸ್ಮಿತ್ (ಉ.ನಾ), ಮಿಚೆಲ್ ಸ್ಟಾರ್ಕ್, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.