ಮನೆ ಮನರಂಜನೆ ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಗೂಗಲ್ ಡೂಡಲ್ ಗೌರವ

ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಗೂಗಲ್ ಡೂಡಲ್ ಗೌರವ

0

ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಇಂದಿನ ಗೂಗಲ್ ಡೂಡಲ್ ಮಹಿಳೆಯರಿಗೆ ಗೌರವ ಸಲ್ಲಿಸಿದ್ದು, ಪ್ರಪಂಚದಾದ್ಯಂತ ಇರುವ ವಿವಿಧ ಸಂಸ್ಕೃತಿಯ ಹಿನ್ನೆಲೆಯುಳ್ಳ ಮಹಿಳೆಯರ ದೈನಂದಿನ ಜೀವನದ ಬಗ್ಗೆ ಒಂದು ಸುಂದರ ಚಿತ್ರಣವನ್ನು ಕಟ್ಟಿಕೊಟ್ಟಿದೆ.

‘ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ’ ಎಂಬುದು ಈ ವರ್ಷದ ಮಹಿಳಾ ದಿನಾಚರಣೆಯ ಥೀಮ್ ಆಗಿದೆ.

‘ಮನೆಯಿಂದ ಕೆಲಸ ಮಾಡುವ ತಾಯಿಯಿಂದ ಹಿಡಿದು ಮುಂದಿನ ಪೀಳಿಗೆಗೆ ತನ್ನ ಕೌಶಲ್ಯಗಳನ್ನು ಕಲಿಸುವ ಮೋಟಾರ್‌ ಸೈಕಲ್ ಮೆಕ್ಯಾನಿಕ್‌ವರೆಗೆ, ಇಂದಿನ ಡೂಡಲ್‌ನಲ್ಲಿ ಚಿತ್ರಿಸಲಾದ ಪ್ರತಿಯೊಂದು ಚಿತ್ರಣವು ಮಹಿಳೆಯರು ತಮ್ಮ ಕುಟುಂಬ ಮತ್ತು ಅವರ ಸಮುದಾಯಗಳಿಗಾಗಿ ಹೇಗೆ ತೆರೆದುಕೊಂಡಿರುತ್ತಾರೆ ಎಂಬುದನ್ನು ತೋರಿಸುತ್ತದೆ’ ಎಂದು ಗೂಗಲ್ ಹೇಳಿದೆ.

ಅಂತರರಾಷ್ಟ್ರೀಯ ಮಹಿಳಾ ದಿನದ ಗೂಗಲ್ ಡೂಡಲ್ ಅನ್ನು ಡೂಡಲ್ ಆರ್ಟ್ ಡೈರೆಕ್ಟರ್ ಥೋಕಾ ಮೇರ್ ವಿನ್ಯಾಸಗೊಳಿಸಿದ್ದಾರೆ.

ಅನಿಮೇಟೆಡ್ ಸ್ಲೈಡ್‌ಶೋ ಮೂಲಕ ಗೂಗಲ್ ಡೂಡಲ್ ಇಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿದೆ.ಪ್ರತಿವರ್ಷ ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಇಂದು ಆಚರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನಕ್ಕೆ ಮೊದಲ ಬಾರಿಗೆ ಆಸ್ಟ್ರಿಯಾ, ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಟ್ಜರ್‌ಲೆಂಡ್‌ ಗಳಲ್ಲಿ 1911ರ ಮಾರ್ಚ್ 11 ರಂದು ಮನ್ನಣೆ ನೀಡಲಾಯಿತು.1975ರಲ್ಲಿ ಮೊದಲ ಬಾರಿಗೆ ಅಮೆರಿಕದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.